ಬಿಸಿ ಬಿಸಿ ಸುದ್ದಿ

Airbnb ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗ

  • ಬೆಂಗಳೂರು ಅಂತಾರಾಷ್ಟ್ರೀಯ ಪ್ರವಾಸಿಗರ ನೆಚ್ಚಿನ ತಾಣ
  • ನವದೆಹಲಿ, ಚೆನ್ನೈ, ಮುಂಬೈ ಮತ್ತು ಹೈದ್ರಾಬಾದ್ ನಗರಗಳೂ ಜನಪ್ರಿಯ ಪ್ರವಾಸಿ ತಾಣಗಳು
  • ಭಾರತಕ್ಕೆ ಪ್ರವಾಸ ಮಾಡಲು ಕಾತುರರಾಗಿರುವ ಕೆನಡಾ, ಯುಎಇ, ಯುಕೆ, ಜರ್ಮನಿ ಮತ್ತು ಆಸ್ಟ್ರೇಲಿಯಾ ಪ್ರವಾಸಿಗರು

ಬೆಂಗಳೂರು, ಆಗಸ್ಟ್ 23, 2023: ಸಿಲಿಕಾನ್ ಸಿಟಿ, ಉದ್ಯಾನನಗರಿ ಬೆಂಗಳೂರು ನಗರ ಅಂತಾರಾಷ್ಟ್ರೀಯ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ.

Airbnb ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಬೆಂಗಳೂರು, ನವದೆಹಲಿ, ಮುಂಬೈ, ಹೈದ್ರಾಬಾದ್ ಮತ್ತು ಚೆನ್ನೈ ನಗರಗಳು ಅಂತಾರಾಷ್ಟ್ರೀಯ ಮತ್ತು ದೇಸೀಯ ಪ್ರವಾಸಿಗರ ನೆಚ್ಚಿನ ಸ್ಥಳಗಳಾಗಿವೆ.

ಪ್ರವಾಸದ ಮೇಲೆ ಹೇರಲಾಗಿದ್ದ ನಿರ್ಬಂಧಗಳನ್ನು ತೆಗೆದುಹಾಕಲಾಗುತ್ತಿದ್ದು, ಅಂತಾರಾಷ್ಟ್ರೀಯ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡುವುದು ಕ್ರಮೇಣ ಹೆಚ್ಚಾಗುತ್ತಿದೆ. ಇತ್ತೀಚೆಗೆ Airbnb ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಅಂತಾರಾಷ್ಟ್ರೀಯ ಪ್ರವಾಸಿಗರು ಭಾರತದಲ್ಲಿ ಹೆಚ್ಚು ಕಾಲ ಉಳಿದು ಈ ಹಿಂದಿಗಿಂತಲೂ ಹೆಚ್ಚು ಹೆಚ್ಚು ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬಯಸುತ್ತಿದ್ದಾರೆ. ಪ್ರವಾಸ ಕ್ರಾಂತಿಯಾಗುತ್ತಿದ್ದು, ಇದು ಸ್ಥಳೀಯರಿಗೆ ಇನ್ನೂ ಹೆಚ್ಚು ಆರ್ಥಿಕ ಅವಕಾಶಗಳನ್ನು ಸೃಷ್ಟಿ ಮಾಡುತ್ತಿದೆ.

ದೇಶವು ಎಲ್ಲಾ ಪ್ರವಾಸೋದ್ಯಮ ನಿರ್ಬಂಧಗಳನ್ನು ಸರಳೀಕರಣಗೊಳಿಸಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳುವ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಉತ್ಸಾಹ ಹಿಮ್ಮಡಿಯಾಗಿದೆ.

Airbnb ರ ಅಂಕಿಅಂಶಗಳ ಪ್ರಕಾರ 2021 ರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ 2022 ರ ಮೊದಲ ತ್ರೈಮಾಸಿಕದಲ್ಲಿ ಭಾರತಕ್ಕೆ ಭೇಟಿ ನೀಡಿರುವ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಯಲ್ಲಿ ಶೇ.60 ಕ್ಕಿಂತ ಹೆಚ್ಚಾಗಿದೆ. ಪ್ರಯಾಣ ಉದ್ಯಮವು ಮತ್ತೊಮ್ಮೆ ದೇಶದ ಆರ್ಥಿಕ ಚೇತರಿಕೆಗೆ ಉತ್ತೇಜನ ನೀಡುತ್ತದೆ ಎಂಬುದನ್ನು ಅಂಕಿಅಂಶ ಸೂಚಿಸುತ್ತದೆ. ಲೈವ್ ಎನಿಮೋರ್ ರಿಮೋಟ್ –ವರ್ಕ್ ಟ್ರೆಂಡ್ ಏರಿಕೆಯ ಲಾಭವನ್ನು ಪಡೆಯಲು ಭಾರತವು ಅನನ್ಯ ಸ್ಥಾನದಲ್ಲಿದೆ. ಏಕೆಂದರೆ Airbnb ನಲ್ಲಿ ದೀರ್ಘಕಾಲ ಉಳಿಯುವುದು ಜನಪ್ರಿಯ ಆಯ್ಕೆಯಾಗಿ ಹೊರಹೊಮ್ಮುತ್ತದೆ. Airbnb ಸಮೀಕ್ಷೆಯನ್ನು YouGov ನಡೆಸಿದ್ದು, ಇದರ ಪ್ರಕಾರ ಶೇ.87 ರಷ್ಟು ಭಾರತೀಯರು ಪ್ರಯಾಣದ ವೇಳೆ ಅಥವಾ ಯಾವುದಾದರೊಂದು ಸ್ಥಳಕ್ಕೆ ಪ್ರವಾಸ ಹೋಗಿ ಅಲ್ಲಿಂದಲೇ ಕೆಲಸ ಮಾಡಲು ಯೋಜನೆ ರೂಪಿಸಿದ್ದಾರೆ.

Airbnb ಅಂಕಿಅಂಶ ಹೇಳುವಂತೆ, ಅತಿಥಿಗಳು ಅಥವಾ ಪ್ರವಾಸಿಗರು ನಗರ ಜೀವನದ ಆನಂದದ ಜೊತೆಗೆ ಬೆಟ್ಟ-ಗುಡ್ಡಗಳು ಮತ್ತು ಕಡಲ ತೀರಗಳಿಗೆ ಪ್ರವಾಸ ಕೈಗೊಳ್ಳುವುದನ್ನು ಆಯ್ಕೆ ಮಾಡಿಕೊಳ್ಳುವುದನ್ನು ಹೆಚ್ಚು ಇಷ್ಟಪಡುತ್ತಾರೆ.

ನವದೆಹಲಿ, ಬೆಂಗಳೂರು, ಮುಂಬೈ, ಹೈದ್ರಾಬಾದ್ ಮತ್ತು ಚೆನ್ನೈನಂತಹ ಮೆಟ್ರೋ ನಗರಗಳು ಅಂತಾರಾಷ್ಟ್ರೀಯ ಮತ್ತು ದೇಸೀಯ ಪ್ರವಾಸಿಗರ ಅತ್ಯಂತ ಜನಪ್ರಿಯ ತಾಣಗಳಾಗಿವೆ. ಪ್ರವಾಸಿಗರು ಹೆಚ್ಚಾಗಿ ಗೋವಾ, ಕೇರಳ ಮತ್ತು ಪಾಂಡಿಚೆರಿ ಕಡಲ ಕಿನಾರೆಗಳಿಗೆ ಪ್ರವಾಸಕ್ಕೆ ಹೋಗಲು ಬಯಸಿದರೆ, ಹಿಮಾಚಲ ಪ್ರದೇಶ ಮತ್ತು ಉತ್ತರಖಂಡದ ಗುಡ್ಡಗಾಡು ಪ್ರದೇಶಗಳನ್ನು ತಮ್ಮ ನೆಚ್ಚಿನ ಪ್ರವಾಸಿ ತಾಣಗಳನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹಿನ್ನಡೆ ಅನುಭವಿಸಿದ್ದ ಈ ಜನಪ್ರಿಯ ಪ್ರವಾಸಿ ತಾಣಗಳಲ್ಲಿನ ಆತಿಥ್ಯವನ್ನು ನೀಡುವವರಿಗೆ ನಿರೀಕ್ಷೆಗೂ ಮೀರಿದ ಅವಕಾಶವನ್ನು ಒದಗಿಸುತ್ತದೆ. ಕೆನಡಾ, ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಕಿಂಗ್ಡಂ, ಜರ್ಮನಿ ಮತ್ತು ಆಸ್ಟ್ರೇಲಿಯಾದ ಅಂತಾರಾಷ್ಟ್ರೀಯ ಪ್ರಯಾಣಿಕರು ಭಾರತದ ಪ್ರವಾಸಿ ತಾಣಗಳ ಹೆಚ್ಚಾಗಿ ಅನ್ವೇಷಣೆ ಮಾಡುತ್ತಿದ್ದಾರೆ.

Airbnb ನ ಭಾರತ, ಆಗ್ನೇಯ ಏಷ್ಯಾ, ಹಾಂಕಾಂಗ್ ಮತ್ತು ತೈವಾನ್ ನ ಪ್ರಧಾನ ವ್ಯವಸ್ಥಾಪಕ ಅಮನ್ ಪ್ರೀತ್ ಬಜಾಜ್ ಅವರು ಈ ಬಗ್ಗೆ ಮಾತನಾಡಿ, “ವಿಶ್ವದಾದ್ಯಂತ ಇರುವ Airbnb ನ ಪ್ರವಾಸಿಗರು ಭಾರತಕ್ಕೆ ಮತ್ತೊಮ್ಮೆ ಪ್ರವಾಸ ಕೈಗೊಳ್ಳಲು ಬಯಸುತ್ತಿರುವುದು ಹೃದಯಸ್ಪರ್ಶಿಯಾಗಿದೆ. ಅದೇ ರೀತಿ ಮೊದಲ ಬಾರಿಗೆ ಪ್ರವಾಸ ಕೈಗೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದು ಪ್ರವಾಸೋದ್ಯಮದ ಚೇತರಿಕೆಗೆ ಮತ್ತು ನಮ್ಮ ಸ್ಥಳೀಯ ಸಮುದಾಯದ ಆತಿಥ್ಯ ನೀಡುವವರಿಗೆ ಉತ್ತಮ ಬೆಳವಣಿಗೆಯಾಗಿದೆ.

ಪ್ರಯಾಣ ಮತ್ತು ಜೀವನಗಳ ನಡುವಿನ ಜಂಜಾಟದಿಂದ ಹೊರ ಬರಲು ಅನೇಕ ಪ್ರಯಾಣಿಕರು ತಮ್ಮ ಹೊಸ ನಮ್ಯತೆಯನ್ನು ಸ್ವೀಕರಿಸುವುದು ಮತ್ತು ಹೊಸ ಹೊಸ ತಾಣಗಳಿಗೆ ಭೇಟಿ ನೀಡಲು ಕಾರಣವಾಗಿದೆ. ಪ್ರಯಾಣಿಕರು ನಮ್ಮ ಕೆಟಗರಿಗಳನ್ನು ಬಳಕೆ ಮಾಡುತ್ತಿದ್ದಾರೆ ಮತ್ತು ನಾನು ಹೊಸ ಪ್ರವಾಸೋದ್ಯಮ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಸ್ಫೂರ್ತಿ ಪಡೆಯಲು ಹಾಗೂ ಆಫ್-ದಿ-ಬೀಟ್ ಮಾರ್ಗದ ಗಮ್ಯಸ್ಥಾನಗಳನ್ನು ಅನ್ವೇಷಣೆ ಮಾಡಲು I’m Flexible ಎಂಬ ಟೂಲ್ಸ್ ಅನ್ನು ಬಳಸುತ್ತಿದ್ದೇನೆ.

ಮೆಟ್ರೋ ನಗರಗಳು ಮತ್ತು ಜನಪ್ರಿಯ ಪ್ರವಾಸಿ ತಾಣಗಳಿಗೆ ಆದ್ಯತೆಯ ಹೆಚ್ಚಳದಿಂದಾಗಿ ರಜೆಯ ಪ್ರವಾಸ ಕೈಗೊಳ್ಳುವುದನ್ನು ಸೂಚಿಸುತ್ತದೆ. ಇದು ಎರಡು ಪಟ್ಟು ಹೆಚ್ಚಳವಾಗಿದೆ. ಈ ಪ್ರಯಾಣ ಕ್ರಾಂತಿಯ ಲಾಭವನ್ನು ಸ್ಥಳೀಯ ಸಮುದಾಯಗಳು ಪಡೆದುಕೊಳ್ಳುತ್ತವೆ ಎಂಬ ವಿಶ್ವಾಸ ನಮ್ಮದಾಗಿದೆ. ಪ್ರವಾಸೋದ್ಯಮದ ಬೆಳವಣಿಗೆಗೆ ಭಾರತ ಸರ್ಕಾರದೊಂದಿಗೆ ಕೈಜೋಡಿಸಲು ನಾವು ಬದ್ಧರಾಗಿದ್ದೇವೆ’’ ಎಂದು ತಿಳಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

12 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

12 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago