ಜಡ್ಡುಗಟ್ಟಿದ ಧರ್ಮಕ್ಕೆ ಸಮಾಜಮುಖಿ ಹೊಸ ರೂಪ ಕೊಟ್ಟವರು ಶರಣರು: ಪಾಟೀಲ

ಶಹಾಬಾದ: ಧರ್ಮವು ಅಂಧಕಾರದಲ್ಲಿ ಮುಳುಗಿರುವವರಿಗೆ ಬೆಳಕನ್ನು ಕೊಡುವುದಾಗಿರಬೇಕೆ ಹೊರತು ಕತ್ತಲನ್ನಲ್ಲ ಎಂಬ ಭಾವನೆಯಿಂದ ಜಡ್ಡುಗಟ್ಟಿದ ಧರ್ಮಕ್ಕೆ ಸಮಾಜಮುಖಿಯಾದ ಹೊಸ ರೂಪವನ್ನು ಕೊಟ್ಟವರು ಬಸವಾದಿ ಶರಣರು ಎಂದು ಶಿಕ್ಷಕ ಮಲ್ಲಿನಾಥ ಪಾಟೀಲ ಹೇಳಿದರು.

ಅವರು ಹಳೆಶಹಾಬಾದನ ಬಸವರಾಜ ಹಾಗೂ ಕುಪೇಂದ್ರ ತುಪ್ಪದ ಅವರ ಮನೆಯಲ್ಲಿ ವಚನೋತ್ಸವ ಕಮಿಟಿ ವತಿಯಿಂದ ಶ್ರಾವಣ ಮಾಸದ ನಿಮಿತ್ತ ಆಯೋಜಿಸಲಾದ ೮೯೪ನೇ ವಚನ ಅಂಗಳ ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.

ವಚನಕಾರರು ಸಮಾಜದಲ್ಲಿದ್ದಂತಹ ರಾಜಪ್ರಭುತ್ವ, ಅಂಧಾನುಕರಣೆ, ಮೌಢ್ಯಗಳು, ಕಂದಾಚಾರಗಳು, ಲಿಂಗ-ತಾರತಮ್ಯ, ಸ್ತ್ರೀ ಅಸಮಾನತೆ, ವೃತ್ತಿತಾರತಮ್ಯ, ವರ್ಗಬೇದ, ಭಾ? ವೈ?ಮ್ಯಗಳು ಹಲವು ದೈವಗಳ ಆರಾಧನೆ ಧರ್ಮ, ಧರ್ಮಗಳಲ್ಲಿದ್ದ ಕಚ್ಚಾಟ ಮುಂತಾದವುಗಳನ್ನು ಸರಿಪಡಿಸಲು ತಮ್ಮದೇ ಆದ ದಾಟಿಯಲ್ಲಿ ತಮಗನಿಸಿದನ್ನು ಹೇಳುತ್ತಾ ತಾವು ಮೊದಲು ಸುಧಾರಿಸಿಕೊಂಡರು.

ಬಸವಾದಿ ಶರಣರ ವಚನಗಳು ಸಾಮಾನ್ಯವಲ್ಲ ಇವತ್ತಿನ ನಮ್ಮ ಮಕ್ಕಳು ಅದನ್ನು ಸುಮ್ಮನೆ ಕಂಟಸ್ತ ಮಾಡಿದರೇ ಸಾಕು. ಮುಂದೆ ಅವರ ಬದುಕಿಗೆ ಮಾರ್ಗದರ್ಶನ ಮಾಡುತ್ತವೆ. ಏಕೆಂದರೆ ಮುಂದೆ ಬರಲಿರುವ ಜಗತ್ತು ತುಂಬಾ ಸಂಕೀರ್ಣವೂ, ಸ್ವಾರ್ಥಮುಖಿಯೂ ಹಾಗೂ ಸಂಕುಚಿತವೂ ಆಗುವ ಮೂಲಕ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುವ ದಿಸೆಯಲ್ಲಿ ಮುನ್ನಡೆಯುತ್ತಿದೆ. ಇದರಿಂದ ಅಶಾಂತಿ ಹಬ್ಬುತ್ತದೆ. ಮಾನವೀಯತೆ ಬತ್ತಿ ಹೋಗುತ್ತದೆ. ಆಗ ಸಹಜವಾಗಿಯೇ ಸಮಾಜ ಜೀವನದಲ್ಲಿ ಕೌಟುಂಬಿಕ ಜೀವನದಲ್ಲಿ ಕ್ರೌರ್ಯದ ದಳ್ಳೂರಿ ಹೆಚ್ಚುತ್ತದೆ ಇದನ್ನು ತಪ್ಪಿಸಬೇಕಾದರೆ ನಾವು ನೀವೆಲ್ಲರೂ ಬಸವೇಶ್ವರ ರಚಿಸಿದ ವಚನ ಸಾಹಿತ್ಯವನ್ನು ತಿಳಿದುಕೊಂಡು ಬದುಕು ಸಾಗಿಸಬೇಕಾಗಿದೆ ಎಂದರು.

ಬಿಜೆಪಿ ಜಿಲ್ಲಾ ಮುಖಂಡ ಬಸವರಾಜ ಮದ್ರಿಕಿ ಮಾತನಾಡಿ, ಬಸವಾದಿ ಶರಣರು ನುಡಿದಂತೆ ನಡೆದರು-ನಡೆದಂತೆ ನುಡಿವ ಸಿದ್ಧಾಂತದ ಅಡಿಯಲ್ಲಿ ಬದುಕಿತೋರಿದರು.ಜಗತ್ತಿನಲ್ಲಿ ಎಲ್ಲರನ್ನೂ ಅಪ್ಪಿಕೊಳ್ಳುವ ಹಾಗೂ ಅಪ್ಪಿಕೊಳ್ಳುವ ಧರ್ಮ ಏನಾದರೂ ಇದ್ದರೇ ಅದು ಬಸವ ಧರ್ಮ.ಮಾನವೀಯ ಮೌಲ್ಯಗಳನ್ನು ಹೊಂದಿರುವ ಯಾವುದಾದರೂ ಸಾಹಿತ್ಯವಿದ್ದರೇ ಅದು ವಚನ ಸಾಹಿತ್ಯ ಎಂದು ಮನಗಾಣಬೇಕೆಂದು ಹೇಳಿದರು.

ವಚನೋತ್ಸವ ಕಮಿಟಿಯ ಶರಣಗೌಡ ಪಾಟೀಲ, ಗಿರಿಮಲ್ಲಪ್ಪ ವಳಸಂಗ, ಬಸವರಾಜ ತರನಳ್ಳಿ,ಜಗದೀಶ ಇಂಗಿನ,ಮಹಾನಂದಿ ಪಾರಾ, ಬಸವರಾಜ ಶಹಾಪೂರ, ದೂಳಪ್ಪ ಹಡಪದ,ಶರಣು ಕೌಲಗಿ, ರೇವಣಸಿದ್ದ ಮತ್ತಿಮಡು, ರಾಜು ಕುಂಬಾರ,ಬಸವರಾಜ ಪಾಟೀಲ, ಶಿವಕುಮಾರ ತುಪ್ಪದ್,ಶರಣಪ್ಪ.ಎಮ್.ಕೊಡದೂರ,ರುಣ ಜಾಯಿ,ಕಿರಣಕುಮಾರ,ಸುಭಾಷ ತುಪ್ಪದ್, ನಾಗೇಶ ತುಪ್ಪದ್ ಸೇರಿದಂತೆ ಮಹಿಳೆಯರು ಇದ್ದರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

1 hour ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

4 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

9 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

9 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

11 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

22 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420