ಕಲಬುರಗಿ : ದಾಸ ಪರಂಪರೆ ಭಕ್ತಿ ಪ್ರದಾನವಾದುದು. ಅನೇಕ ಕೀರ್ತನೆ, ಸುಳಾದಿ,ಉಗಾಭೋಗಗಳ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದವರಲ್ಲಿ ಮೋಹನದಾಸರು ಒಬ್ಬರೆಂದು ಹೇಳಿ ಅವರ ಜೀವನ ಮೌಲ್ಯಗಳು ಮತ್ತು ಅವುಗಳ ಪ್ರಸ್ತುತತೆಯ ಬಗ್ಗೆ ಮನೋಜ್ಞಾನವಾಗಿ ಮಾತನಾಡಿದರು
ನಗರದ ಅನ್ನಪೂರ್ಣ ಕ್ರಾಸ ಹತ್ತಿರವಿರುವ ಕಲಾ ಮಂಡಳದಲ್ಲಿ ಕಲಬುರಗಿ ಕಲಾ ಸೌರಭ ಪ್ರತಿಷ್ಠಾನ ಮತ್ತು ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಹುಬ್ಬಳ್ಳಿ ವತಿಯಿಂದ ಹಮ್ಮಿಕೊಂಡಿರುವ ದಾಸ ಶ್ರೇಷ್ಠ ಮೋಹನದಾಸರು ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡುತ್ರ ಸಾಹಿತ್ಯ ಎಂಬುದು ಶ್ರೇಷ್ಠತೆಯನ್ನು ಪಡೆದುಕೊಂಡಿರುವಂತದು, ಅದನ್ನು ನಾವು ಇಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕು ಎಂದು ಡಾ. ಸ್ವಾಮಿರಾವ್ ಕುಲಕರ್ಣಿ ಹೇಳಿದರು.
ಹುಬ್ಬಳ್ಳಿಯ ಭೀಮಸೇನ ಬಡಿಗೇರ್ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದಾಸ ಸಾಹಿತ್ಯ ಪರಂಪರೆ ಮತ್ತು ನಮ್ಮ ಸಂಸ್ಕೃತಿಯ ಮೇಲೆ ಅದರ ಪ್ರಭಾವವನ್ನು ಸಾದರ ಪಡಿಸಿದರು. ಹಿರಿಯ ಪತ್ರಕರ್ತ ಡಾಕ್ಟರ್ ಶ್ರೀನಿವಾಸ್ ಸಿರನೂರಕರ್ ಕೃತಿ ಪರಿಚಯವನ್ನು ಮಾಡಿ ಮೋಹನದಾಸರ ಜೀವನ ಮತ್ತು ದಾಸ ಸಾಹಿತ್ಯಕ್ಕೆ ಅವರ ಕೊಟ್ಟ ಕೊಡುಗೆಯ ಬಗ್ಗೆ ಸವಿವರವಾಗಿ ತಿಳಿಸಿದರು.
ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಾಹಿತಿ ಬಿ.ಎಚ್.ನಿರಗುಡಿ, ಪ್ರೊ ಶ್ರೀನಿವಾಸ್ ಕುಷ್ಟಗಿ, ಡಾ. ಕೆ ಮೋನಪ್ಪ ಮತ್ತು ರಾಜೇಂದ್ರ ಬಡಿಗೇರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಸಂತಸ ವ್ಯಕ್ತಪಡಿಸಿದರು.
ಕಲ್ಬುರ್ಗಿಯ ವಿಶ್ವಕರ್ಮ ಏಕದಂಡಗಿ ಮಠದ ಪೂಜ್ಯರಾದ ಸುರೇಂದ್ರ ಮಹಾಸ್ವಾಮಿಗಳು ಮಾತನಾಡಿ ದಾಸ ಸಾಹಿತ್ಯದ ಸುದೀರ್ಘ ಇತಿಹಾಸವನ್ನು ನೆನೆದು ದಾಸ ಶ್ರೇಷ್ಠ ಮೋಹನದಾಸರು ವಿಶ್ವಕರ್ಮರೆಂದು ಪ್ರಕಟ ಪಡಿಸಿದ್ದು ಹೆಮ್ಮೆಯ ವಿಷಯ ಎಂದು ಹೇಳಿದರು.
ವಿಶ್ವಕರ್ಮ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಪೂಜ್ಯ ಶ್ರೀ ರಾಮಚಂದ್ರ ಮಹಾಸ್ವಾಮಿಗಳು ಮತ್ತು ಪೂಜ್ಯ ಸುರೇಂದ್ರಮಹಸ್ವಾಮಿಗಳ ಸಾನಿಧ್ಯದಲ್ಲಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು. ಸಾಹಿತಿ ನರಸಿಂಗರಾವ ಹೇಮನೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಶಾಂತ ಕಂಬಾರ ಪ್ರಾರಂಭದಲ್ಲಿ ಪ್ರಾರ್ಥನ ಗೀತೆ ಹಾಡಿದರು.ಅನಂತ ಚಿಂಚನಸೂರ್ ತಂಡ ಮತ್ತು ಕುಮಾರಿ ವರ್ಷಿಣಿ, ಮತ್ತು ಪೂರ್ವಿ ಹೇಮನೂರ್ ಅವರಿಂದ ಭರತನಾಟ್ಯ ಪ್ರದರ್ಶನವಾಯಿತು.
ಕೃತಿಯ ಪ್ರಕಟಣೆಗೆ ಧನಸಹಾಯ ಮಾಡಿದ ಜನಾರ್ದನ ಹೇಮನೂರ್ ಹಾಗೂ ಸುವರ್ಣ ಹೇಮನೂರ್ ದಂಪತಿಗಳನ್ನು ಸನ್ಮಾನಿಸಲಾಯಿತು. ಶರಣಗೌಡ ಪಾಳಾ ,ಕಿರಣ ಪಾಟೀಲ,ಎಂ.ಸಂಜೀವ, ಗಿರಿಧರ, ಮೋಹನ್ ಸೀತನೂರ್, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಕಲಾ ಸೌರಭ ಪ್ರತಿಷ್ಠಾನದ ಅಧ್ಯಕ್ಷ ಈರಣ್ಣ ಕಂಬಾರ್ ಅವರು ವಂದಿಸಿದರು.ಕಾರ್ಯಕ್ರಮವನ್ನು ಸಾಹಿತಿ ದತ್ತಾತ್ರಯ ವಿಶ್ವಕರ್ಮ ಅವರು ನಿರೂಪಿಸಿದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…