ಕಲಬುರಗಿ: ಸ್ವಾತಂತ್ರ್ಯಅಮೃತ ಮಹೋತ್ಸವ ಸಂದರ್ಭದಲ್ಲಿಕರ್ನಾಟಕಕಾರ್ಯನಿರತ ಪತ್ರಕರ್ತರ ಸಂಘ ಹಿರಿಯ ಪತ್ರಕರ್ತರಿಗೆಅವರ ಮನೆ ಅಂಗಳಲ್ಲಿ ಗೌರವಿಸುವ ಕಾರ್ಯಕ್ರಮದ ಅಂಗವಾಗಿ ಕಲಬುರಗಿಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘವು ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಅವರನ್ನು ಗೌರವಿಸಿತು.
ಯುವ ಪೀಳಿಗೆಯ ಪತ್ರಕರ್ತರು ವಿಶಾಲ ದೃಷ್ಟಿಕೋನ ಉಳ್ಳವರಾಗಿರಬೇಕು.ಉದ್ವೇಗ, ಉದ್ವಿಗ್ನಕ್ಕೆ ಒಳಗಾಗಿ ಸುದ್ದಿ ಮಾಡಬಾರದು.ಆಗ ಪತ್ರಿಕೋದ್ಯಮ ಫ್ಯಾಶನ್‌ಆಗಿತ್ತು.ಈಗ ಕ್ಲರಿಕಲ್‌ಜಾಬ್‌ಆಗಿದೆ.ಮೌಲ್ಯ, ಗುಣಮಟ್ಟ ಕುಸಿದಿದೆ.ಪತ್ರಿಕೋದ್ಯಮಕ್ಕೆ ನಮ್ಮದೇಆದಕೊಡುಗೆ ನೀಡುವ ಮೂಲಕ ನಮ್ಮಐಡೆಂಟಿಟಿಯನ್ನು ಉಳಿಸಿಕೊಳ್ಳಬೇಕು. -ಶ್ರೀನಿವಾಸ ಸಿರನೂರಕರ್, ಹಿರಿಯ ಪತ್ರಕರ್ತ
ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್ ನಿವಾಸಕ್ಕೆ ತೆರಳಿ, ಪತ್ರಕರ್ತರ ಸಂಘದಜಿಲ್ಲಾಧ್ಯಕ್ಷ ಬಾಬರಾವಯಡ್ರಾಮಿ, ರಾಜ್ಯಕಾರ್ಯಕಾರಿ ಸಮಿತಿ ಸದಸ್ಯಡಾ.ಶಿವರಂಜನ ಸತ್ಯಂಪೇಟೆ, ಉಪಾಧ್ಯಕ್ಷದೇವಿಂದ್ರಪ್ಪಆವಂಟಿ, ಪತ್ರಕರ್ತಜಗದೀಶಕುಂಬಾರ ಮತ್ತು ಪದಾಧಿಕಾರಿಗಳು ಸನ್ಮಾನಿಸಿದರು.
ಜರ್ನಲಿಸ್ಟ್‌ಗೆಯಾವುದೇ ಇಸಂಗಳಿರಬಾರದು. ಅವರಲ್ಲಿಜರ್ನಲಿಸಂ ಮಾತ್ರಇರಬೇಕು.ನಮ್ಮ ಬರವಣಿಗೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತಾಗಬೇಕು.ನಾವು ಬರೆದಿರುವುದನ್ನುಜನ ಹೇಳಬೇಕು.ಬೊಟ್ಟು ಮಾಡಿತೋರಿಸುವ ಪ್ರಸಂಗ ತಂದುಕೊಳ್ಳಬಾರದು.ಪತ್ರಕರ್ತರಾದವರುತಮ್ಮ ವೃತ್ತಿಘಟನೆತೆಗಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
೧೯೮೦ರಲ್ಲಿ ರಾಯಚೂರು ವಾಣಿ ಎಂಬ ಸ್ಥಳೀಯ ಪತ್ರಿಕೆಯಿಂದ ವೃತ್ತಿ ಆರಂಭಿಸಿರುವ ನಾನು, ಇಂಡಿಯನ್‌ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ನಿವೃತ್ತಿ ಹೊಂದಿರುವೆ. ಆದರೂ ಇಂದಿಗೂ ತರಂಗ ಮತ್ತುಕರ್ನಾಟಕ ಸಂಧ್ಯಾಕಾಲ ಪತ್ರಿಕೆಗಳಲ್ಲಿ ಅಂಕಣ ಬರೆಯುವ ಮೂಲಕ ನನ್ನಇರುವಿಕೆಯನ್ನು ಸಾಬೀತು ಪಡಿಸುತ್ತಿದ್ದೇನೆ. ಕಲಬುರಗಿಯಿಂದ ವರ್ಗಾವಣೆಯಾಗಿ ಬೆಂಗಳೂರಿಗೆ ತೆರಳಿದಾಗ ಇಂಡಿಯನ್‌ಎಕ್ಸ್‌ಪ್ರೆಸ್‌ನಲ್ಲಿ ಮಾಡಿದ ಸೇವೆ ನಿಜಕ್ಕೂ ಸ್ಮರಣೀಯ. ಎಲ್ಲ ಬಗೆಯ ವರದಿಗಾರಿಕೆಗಳನ್ನು ಮಾಡಿದೆ. ಜಿಲ್ಲೆಗಳಲ್ಲಿನ ಜಿ.ಪಂ. ಮತ್ತು ಮಹಾನಗರ ಪಾಲಿಕೆ ಬಜೆಡ್ ವರದಿ ಮಾಡಿದ್ದ ನನಗೆ ಬೆಂಗಳೂರಿನಲ್ಲಿ ರಾಜ್ಯದ ಬಜೆಟ್‌ಕುರಿತಾದ ವರದಿ ಮಾಡುವ ಅವಕಾಶ ದೊರೆಯಿತುಎಂದುತಮ್ಮ ವೃತ್ತಿಯ ಬಗ್ಗೆ ಗೌರವ ವ್ಯಕ್ತಪಡಿಸಿದರು.
೩೬ ವರ್ಷಗಳ ನನ್ನ ಪತ್ರಿಕಾ ವೃತ್ತಿಯ ಪಯಣದಲ್ಲಿ ಸತ್ಯಕ್ಕೆ ನಿಷ್ಠನಾಗಿ, ವೃತ್ತಿಗೆ ನಿಷ್ಠನಾಗಿ ಬಹಳ ಪ್ರಜ್ಞಾಪೂರ್ವಕ ಮತ್ತು ಪ್ರಾಮಾಣಿಕತೆಯಿಂದಕಾರ್ಯನಿರ್ವಹಿಸಿದ್ದೇನೆ ಎಂಬ ತೃಪ್ತಿ ನನ್ನಲ್ಲಿದೆ. ಕಲಬುರಗಿಯಲ್ಲಿದ್ದಾಗತಲೆ ಮೇಲೆ ಮಲ ಹೊರುವ ಪದ್ಧತಿ, ಹುಮನಾಬಾದ-ವಿಜಯಪುರರಾಷ್ಟ್ರೀಯ ಹೆದ್ದಾರಿಯಲ್ಲಿರಸ್ತೆಅಗಲೀಕರಣ ನೆಪದಲ್ಲಿ ೩೫ ಸಾವಿರ ಗಿಡಗಳ ಮಾರಣಹೋಮಕುರಿತಾದ ನನ್ನ ವರದಿ ಆಧಾರದ ಮೇಲೆ ಹೈಕೋರ್ಟ್ ಮಧ್ಯಂತರಆದೇಶ ನೀಡಿದ್ದು, ಪತ್ರಿಕೋದ್ಯಮಇತಿಹಾಸದಲ್ಲೇ ಮೊದಲುಎಂದುತುಂಬಾಅಭಿಮಾನದಿಂದ ಹೇಳಿಕೊಂಡರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…