ಬಿಸಿ ಬಿಸಿ ಸುದ್ದಿ

ಏಕತೆಯರೂಪದಲ್ಲಿ ದೇಶ ಅಭಿವೃದ್ಧಿಗೊಳ್ಳಲಿ

  • ಭಾರತದರಾಷ್ಟ್ರೀಯತೆ ಮತ್ತುರಾಷ್ಟ್ರೀಯಐಕ್ಯತೆ: ಸಮಸ್ಯೆ ಸಮಾವಾಲುಗಳು ಕುರಿತಎರಡು ದಿನಗಳ ರಾಜ್ಯಮಟ್ಟದ ಸಮ್ಮೇಳನಕ್ಕೆ ಚಾಲನೆ

ಕಲಬುರಗಿ: ಅನೇಕ ಜಾತಿ, ಧರ್ಮ, ಭಾಷಾ ವೈವಿಧ್ಯತೆಯಿಂದಕೂಡಿದ ಭಾರತವನ್ನುಏಕತೆಯರೂಪದಲ್ಲಿ ಅಭಿವೃದ್ಧಿಗೊಳ್ಳಬೇಕು. ಆ ಶಕ್ತಿ ಭಾರತಕ್ಕೆ ಮಾತ್ರಇದೆಎಂದುಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಶಾಂತಿಶ್ರೀ ಪಂಡಿತ್ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದಡಾ. ಬಿ. ಆರ್‌ಅಂಬೇಡ್ಕರ್ ಭವನದಲ್ಲಿರಾಜ್ಯಶಾಸ್ತ್ರಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕರ್ನಾಟಕ ರಾಜ್ಯ ರಾಜ್ಯ ಶಾಸ್ತ್ರ ಅಧ್ಯಾಪಕರ ಸಂಘ ಹಾಗೂ ಸುರುಪುರಿನ ಹೈ.ಕ ಶಿಕ್ಷಣ ಸಂಸ್ಥೆಯಎಸ್.ಪಿ ಮತ್ತುಜೆ.ಎಂ ಬೊಹರಾ ಪದವಿ ಮಹಾವಿದ್ಯಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ಭಾರತದರಾಷ್ಟ್ರೀಯತೆ ಮತ್ತುರಾಷ್ಟ್ರೀಯಐಕ್ಯತೆ: ಸಮಸ್ಯೆಗಳು ಮತ್ತು ಸವಾಲುಗಳು ಕುರಿತು ನಡೆದಎರಡು ದಿನಗಳ ರಾಜ್ಯಮಟ್ಟದ ೧೯ನೇ ರಾಜ್ಯಶಾಸ್ತ್ರಅಧ್ಯಾಪಕರ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದಅವರು, ಜಾತಿ ಪದ್ಧತಿ ನಿರ್ಮೂಲನೆ ಮತ್ತು ಸತ್ರೀಯರಿಗೆ ಶಿಕ್ಷಣ ಒದಗಿಸುವಕಾರ್ಯಇನ್ನೂಆಗಬೇಕಿದೆಎಂದು ವಿವಬರಿಸಿದರು.

ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಲಬುರಗಿಗ್ರಾಮೀಣಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು, ದೇಶದಅಭಿವೃದ್ಧಿಗೆರಾಷ್ಟ್ರೀಯತೆ ಬಹಳ ಮಖ್ಯವಾಗಿದ್ದು, ಯಾರೇ ಆಗಲಿ ರಾಷ್ಟ್ರೀಯತೆ ಮತ್ತುಅಭಿವೃದ್ಧಿಯಲ್ಲಿರಾಜಕಾರಣ ಮಾಡಬಾಋದುಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಗುಲಬರ್ಗಾ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ದಯಾನಂದಅಗಸರ ಮಾತನಾಡಿ, ನ್ಯಾಖ್ ೩ನೇ ಶ್ರೇಣಿಯಆವೃತ್ತಿಯಲ್ಲಿ ವಿವಿಗೆ ಈಗಾಗಲೇ ಬಿ ಪ್ಲಸ್ ಸ್ತಾನವಿದ್ದು, ಎ ಪ್ಲಸ್ ಗಾಗಿ ಇಲ್ಲಿರುವ ಕಟ್ಟಡಗಳಿಗೆ ಸುಣ್ಣ ಬಣ್ಣ ಮತ್ತು ಸೌಂದರ್ಯೀಕರಣಕ್ಕೆ ಶಾಸಕರಅನುಧಾನದಲ್ಲಿ ವಿಶೇಷ ಪ್ಯಾಕೇಜ್ ನೀಡಬೇಕುಎಂದು ಮನವಿ ಮಾಡಿದರು.

“ಕರ್ನಾಟಕಜರ್ನಲ್‌ಆಫ್ ಪಾಲಿಟಿಕ್ಸ್” ಜರ್ನಲ್‌ಅನ್ನುಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಜಿ. ಶ್ರೀರಾಮಲು ಅವರು ಪ್ರಸ್ತಾವಿಕ ನುಡಿಗಳ್ನಾಡಿದರು. ಸಂಸ್ಥಾಪಕ ಕಾರ್ಯದರ್ಶಿ ಡಾ.ಜಯಪ್ರಕಾಶ್ ಮಾವಿನಕುಳ್ಳಿ, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಪ್ರೊ. ಚಂದ್ರಕಾಂತ ಎಂ. ಯಾತನೂರ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಗುಲಬರ್ಗಾ ವಿವಿ ಸಿಂಡಿಕೆಟ್ ಸದಸ್ಯಗಂಗಾಧರ ನಾಯಕ, ವಿದ್ಯಾ ವಿಷಯಕ ಪರಿಷತ್ ಸದಸ್ಯ ಬಾಬಣ್ಣ ಹೊಸಮನಿ, ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವ್ಹಿ.ಟಿ ಕಾಂಬಳೆ, ಕರ್ನಾಟಕರಾಜ್ಯರಾಜ್ಯಶಾಸ್ತ್ರಅಧ್ಯಾಪಕರ ಸಂಘದ ಸಂಸ್ಥಾಪಕ ಅಧ್ಯಕ ಪ್ರೊ.ಆರ್.ಎಲ್.ಎಂ ಪಾಟೀಲ್, ಅಧ್ಯಕ್ಷ ಡಾ.ಎಸ್.ಎಚ್.ಹೊಸಮನಿ, ಕಾರ್ಯದರ್ಶಿ ಡಾ.ಪಿ.ಎಸ್‌ಕೊಕಟನೂರ, ಖಂಜಾಚಿ ಪ್ರೊ.ವೆಂಕಟೆಶ್ ನೀರಡಗಿ ಸೇರಿದಂತೆರಾಜ್ಯದ ವಿವಿಧ ವಿವಿಯಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತಿರಿದ್ದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

9 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

9 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

11 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

11 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

11 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

11 hours ago