ಕಲಬುರಗಿ: ನಗರದ ಸರಕಾರಿ ಮಹಾವಿದ್ಯಾಲಯ (ಸ್ವಾಯುಕ್ತ)ದ ಹಾಗೂ ಅಯಾಜ್ ನೋಮಿಸ್‌ಮೆಟಿಕ್ ಆರ್ಟ್ ಆಂಡ್ ಫೋಟೋ ಹೆರಿಟೇಜ್ ಟ್ರಸ್ಟ ಸಂಯುಕ್ತ ಆಶ್ರಯದಲ್ಲಿ ಅಂಬೇಡ್ಕರ್ ಭವನದಲ್ಲಿ ಬ್ಯೂರೋ ಆಫ್ ಎನಿರ್ಜಿ,ಎಫಿಸ್ಸೆನಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಆಯೋಜಿಸಿದ ಎನಿರ್ಜಿ ಎಫಿಸೆನಿ ವಿಷಯದ ಮೇಲೆ ಪೇಂಟಿಂಗ್ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಅಂತರರಾಷ್ಟ್ರಿಯ ಕಲಾವಿದ, ಲಲಿತಾ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಹ್ಮದ ಅಯಾಜೊದ್ದೀನ್ ಪಟೇಲ್ ಅವರು ೧೯೪೦ ರಿಂದ ಇಲ್ಲಿ (೨೦೨೨) ವರೆಗಿನ ಕರೆನ್ಸಿ ನೋಟುಗಳ ಚಲಾವಣೆ ನಿಂತಿರುವ ಹಳೆಯ ಕಾಲದ ದಮಡಿ, ಹಾಲಿ, ಏಕಾನಾ, ದುವಾನಾ ವಿವಿಧ ಬಗೆಯ ನಾಣ್ಯಗಳು ಪ್ರದರ್ಶನವು ನೋಡುಗರ ಗಮನ ಸೆಳೆಯಿತು. ಮಹ್ಮದ ಅಯಾಜೊದ್ದೀನ್ ಪಟೇಲ್ ಅವರು ನಾಣ್ಯ ಮತ್ತು ನೋಟುಗಳ ಬಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳದ ಕಲಾವಿದ ಡಾ. ರೆಹಮಾನ ಪಟೇಲ್ ಅವರು ಮಾತನಾಡುತ ಅಪಾಯದ ಅಂಚಿನಲ್ಲಿರುವ ನಗರದ ವಿವಿಧ ಐತಿಹಾಸಿಕ ಸ್ಮಾರಕಗಳ ಛಾಯಾ ಚಿತ್ರಗಳನು ತೆಗೆದು ಅವುಗಳ ದುರಸ್ತಿ ಮಾಡುವತ್ತೆ ಸಂಬದ ಪಟ್ಟ ಇಲಾಕೆಯ ಗಮನಕ್ಕೆ ತಂದಿರುವ ಶ್ರೇಯಸ್ಸು ಅಯಾಜೊದ್ಧೀನ್ ಅವರಿಗೆ ಸಲ್ಲುವದು ಎಂದರು. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲಿ ಪಾಲ್ಗೊಳ್ಳುವ ಮೂಲಕ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶಂಕ್ರಪ್ಪ ಹತ್ತಿ ವಹಿಸಿದರು. ಕಾರ್ಯಕ್ರಮದ ಸಂಯೋಜಕರಾದ ಡಾ ವಿನೋದ ಕುಮಾರ ರಾಠೋಡ, ಪ್ರಮುಖರಾದ ರಾಜಶೇಖರ ಮಡಿವಾಳ, ಅಜಬ್ ಸಿಂಗ್, ಡಾ. ವಿಜಯಕುಮಾರ ಹೆಬ್ಬಾಳ, ಡಾ. ಪ್ರಶಾಂತ, ಹಿರಿಯ ಕಲಾವಿದರಾದ ರಾಜಶೇಖg, ಡಾ. ಶಾಹಿದ ಪಾಶಾ, ಮಹ್ಮದ ಇಸ್ಮಾಯಿಲ್, ಶೇಖ ಅಹೇಸಾನ್, ನಾರಾಯಣ ಜೋಶಿ, ಖಾಜಾ ಪಟೇಲ್ ಇತರರು ಹಾಜರಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…