ಮಹ್ಮದ ಅಯಾಜೊದ್ದೀನ್ ಪಟೇಲ್ ಅವರ ವರ್ಲ್ಡ್ ಕರೆನ್ಸಿ ಪ್ರದರ್ಶನ

0
50

ಕಲಬುರಗಿ: ನಗರದ ಸರಕಾರಿ ಮಹಾವಿದ್ಯಾಲಯ (ಸ್ವಾಯುಕ್ತ)ದ ಹಾಗೂ ಅಯಾಜ್ ನೋಮಿಸ್‌ಮೆಟಿಕ್ ಆರ್ಟ್ ಆಂಡ್ ಫೋಟೋ ಹೆರಿಟೇಜ್ ಟ್ರಸ್ಟ ಸಂಯುಕ್ತ ಆಶ್ರಯದಲ್ಲಿ ಅಂಬೇಡ್ಕರ್ ಭವನದಲ್ಲಿ ಬ್ಯೂರೋ ಆಫ್ ಎನಿರ್ಜಿ,ಎಫಿಸ್ಸೆನಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಆಯೋಜಿಸಿದ ಎನಿರ್ಜಿ ಎಫಿಸೆನಿ ವಿಷಯದ ಮೇಲೆ ಪೇಂಟಿಂಗ್ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಅಂತರರಾಷ್ಟ್ರಿಯ ಕಲಾವಿದ, ಲಲಿತಾ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಹ್ಮದ ಅಯಾಜೊದ್ದೀನ್ ಪಟೇಲ್ ಅವರು ೧೯೪೦ ರಿಂದ ಇಲ್ಲಿ (೨೦೨೨) ವರೆಗಿನ ಕರೆನ್ಸಿ ನೋಟುಗಳ  ಚಲಾವಣೆ ನಿಂತಿರುವ ಹಳೆಯ ಕಾಲದ ದಮಡಿ, ಹಾಲಿ, ಏಕಾನಾ, ದುವಾನಾ ವಿವಿಧ ಬಗೆಯ ನಾಣ್ಯಗಳು ಪ್ರದರ್ಶನವು ನೋಡುಗರ ಗಮನ ಸೆಳೆಯಿತು. ಮಹ್ಮದ ಅಯಾಜೊದ್ದೀನ್ ಪಟೇಲ್ ಅವರು ನಾಣ್ಯ ಮತ್ತು ನೋಟುಗಳ ಬಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳದ ಕಲಾವಿದ ಡಾ. ರೆಹಮಾನ ಪಟೇಲ್ ಅವರು ಮಾತನಾಡುತ ಅಪಾಯದ ಅಂಚಿನಲ್ಲಿರುವ  ನಗರದ ವಿವಿಧ ಐತಿಹಾಸಿಕ ಸ್ಮಾರಕಗಳ ಛಾಯಾ ಚಿತ್ರಗಳನು ತೆಗೆದು ಅವುಗಳ ದುರಸ್ತಿ ಮಾಡುವತ್ತೆ ಸಂಬದ ಪಟ್ಟ ಇಲಾಕೆಯ ಗಮನಕ್ಕೆ ತಂದಿರುವ ಶ್ರೇಯಸ್ಸು ಅಯಾಜೊದ್ಧೀನ್ ಅವರಿಗೆ ಸಲ್ಲುವದು ಎಂದರು. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲಿ ಪಾಲ್ಗೊಳ್ಳುವ ಮೂಲಕ  ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕೆಂದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶಂಕ್ರಪ್ಪ ಹತ್ತಿ ವಹಿಸಿದರು. ಕಾರ್ಯಕ್ರಮದ ಸಂಯೋಜಕರಾದ ಡಾ ವಿನೋದ ಕುಮಾರ ರಾಠೋಡ, ಪ್ರಮುಖರಾದ ರಾಜಶೇಖರ ಮಡಿವಾಳ, ಅಜಬ್ ಸಿಂಗ್, ಡಾ. ವಿಜಯಕುಮಾರ ಹೆಬ್ಬಾಳ, ಡಾ. ಪ್ರಶಾಂತ, ಹಿರಿಯ ಕಲಾವಿದರಾದ ರಾಜಶೇಖg, ಡಾ. ಶಾಹಿದ ಪಾಶಾ, ಮಹ್ಮದ ಇಸ್ಮಾಯಿಲ್, ಶೇಖ ಅಹೇಸಾನ್, ನಾರಾಯಣ ಜೋಶಿ, ಖಾಜಾ ಪಟೇಲ್ ಇತರರು ಹಾಜರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here