ಬಿಸಿ ಬಿಸಿ ಸುದ್ದಿ

ಕಲೆ ಸಂಸ್ಕೃತಿ ಉಳಿಸಲು ಪ್ರತಿಭೆಗಳಿಗೆ ವೇದಿಕೆ ಕೊಡಿ: ಮಲ್ಲಿಕಾರ್ಜುನ ಸೇಡಂ

ವಾಡಿ: ಭಾರತ ಬಹು ಸಂಸ್ಕೃತಿಯ ಕಲೆಯನ್ನು ಒಳಗೊಂಡ ದೇಶ. ಇಲ್ಲಿ ಪ್ರತಿಯೊಂದು ರಾಜ್ಯ ಹಾಗೂ ಪ್ರತಿಯೊಂದು ಸಮುದಾಯ ಪ್ರತ್ಯೇಕ ಸಾಂಸ್ಕೃತಿಕ ಕಲೆಯ ಇತಿಹಾಸದ ಹಿನ್ನೆಲೆ ಹೊಂದಿದೆ. ಅದನ್ನು ಉಳಿಸಿ ಬೆಳೆಸಬೇಕು ಎನ್ನುವುದಾದರೆ ಪ್ರತಿಭೆಯುಳ್ಳ ಮಕ್ಕಳಿಗೆ ವೇದಿಕೆ ಕಲ್ಪಿಸಿಕೊಡಬೇಕು ಎಂಬುದನ್ನು ಶಿಕ್ಷಕರು ಮರೆಯಬಾರದು ಎಂದು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ ಹೇಳಿದರು.

ಶನಿವಾರ ಪಟ್ಟಣದ ಸಂತ ಅಂಬ್ರೂಸ್ ಕಾನ್ವೆಂಟ್ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ-ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆಗೆ ಬರುವ ಪ್ರತಿಯೊಂದು ಮಗು ತನ್ನ ಸಮುದಾಯದ ಸಾಂಸ್ಕೃತಿಕ ಹಿನ್ನೆಲೆಯ ಪ್ರಭಾವ ಹೊಂದಿರುತ್ತದೆ. ಆ ಮಗುವಿನ ಮೂಲಕ ಜನಪದ ಕಲೆಗಳನ್ನು ಜೀವಂತವಾಗಿಡಲು ಶಿಕ್ಷಣ ಇಲಾಖೆ ಪ್ರತಿಭಾಕಾರಂಜಿ ಕಾರ್ಯಕ್ರಮ ಜಾರಿಗೆ ತಂದಿದೆ. ಹಬ್ಬ ಮತ್ತು ಜಾತ್ರೆಗಳ ಆಚರಣೆಯಲ್ಲಿ ಧಾರ್ಮಿಕವಾದದ ನೆಲೆಯಲ್ಲೇ ಸಾಂಸ್ಕೃತಿಕ ಕಲೆಯನ್ನೊಳಗೊಂಡಿರುವುದನ್ನು ನಾವು ಕಾಣುತ್ತೇವೆ. ಇಂಥಹ ಕಲೆಗಳನ್ನು ಪೋಷಿಸುತ್ತಿರುವ ಕಲಾ ಪ್ರತಿಭೆಗಳಿಗೆ ವೇದಿಕೆ ಸಿಗದ ಕಾರಣ ಅವು ಸಮಾಜದಿಂದ ಕಣ್ಮರೆಯಾಗುತ್ತಿವೆ ಎಂದು ವಿಷಾಧ ವ್ಯಕ್ತಪಡಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ನಾಲವಾರ ಮಾತನಾಡಿ, ತರಗತಿಯಲ್ಲಿ ಪಾಠ ಮಾಡಿ ಮಕ್ಕಳಿಗೆ ಅಕ್ಷರ ಜ್ಞಾನ ನೀಡುವಂತೆ, ಈ ಪ್ರತಿಭಾ ಕಾರಂಜಿ ಕ್ಲಾಸಿನಲ್ಲಿ ಮಕ್ಕಳೊಳಗೆ ಅಡಗಿರುವ ಕಲಾ ಪ್ರತಿಭೆಯನ್ನು ಬೆಳಕಿಗೆ ತರುವ ಕಾರ್ಯ ಮಾಡಬೇಕಿದೆ. ನ್ಯಾಯಸಮ್ಮತವಾದ ಸ್ಪರ್ಧೆ ಮತ್ತು ಆತ್ಮಸಾಕ್ಷಿಯ ತೀರ್ಪುಕೊಟ್ಟು ನೈಜವಾದ ಕಲಾವಿದರನ್ನು ಗುರುತಿಸುವ ಜವಾಬ್ದಾರಿ ತೀರ್ಪುಗಾರರ ಮೇಲಿದೆ. ಇದೊಂದು ಸರ್ಕಾರದ ಯೋಜನೆಯಂತೆ ಕಂಡು ಆದೇಶ ಪಾಲಿಸುವ ಬದಲು ಪ್ರಾಮಾಣಿಕವಾಗಿ ಮಗುವಿನ ಪ್ರತಿಭೆಗೆ ಕನ್ನಡಿ ಹಿಡಿದು ಪ್ರೋತ್ಸಾಹಿಸಬೇಕು ಎಂದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೂಂಡಗಿ ಮಾತನಾಡಿದರು. ಮುಖ್ಯಶಿಕ್ಷಕಿ ಸಿಸ್ಟರ್ ಗ್ರೇಸಿ ಅಧ್ಯಕ್ಷತೆ ವಹಿಸಿದ್ದರು. ಸಿಆರ್‌ಪಿ ಸೂರ್ಯಕಾಂತ ದಿಗ್ಗಾಂವ, ಕೋಲಿ ಸಮಾಜದ ಅಧ್ಯಕ್ಷ ನಾಗೇಂದ್ರ ಜೈಗಂಗಾ, ಇಸಿಒ ಸಂತೋಷ ಸಿರನಾಳ, ಸರ್ಕಾರಿ ನೌಕರರ ಸಂಘದ ತಾಲೂಕು ಕಾರ್ಯದರ್ಶಿ ಅಬ್ದುಲ್ ಸಲಿಂ ಪ್ಯಾರೆ, ಹುಸೇನ ಪಾಶಾ, ಚಂದ್ರಕಾಂತ ಚವ್ಹಾಣ, ಭಗವಾನ ದಂಡಗುಲಕರ, ಸೋಮಯ್ಯ ಹಿರೇಮಠ, ರೇಣುಕಾ ಕೆರಿತಾಂಡಾ, ಡಾನ್‌ಬಾಸ್ಕೊ, ಜಯಾರಾಣಿ ವಸಂತಾ ಅತಿಥಿಗಳಾಗಿದ್ದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕಲೆ, ನೃತ್ಯ, ರಂಗೋಲಿ, ಭಾಷಣ, ಕ್ಲೇ ಮಾಡಲಿಂಗ್, ಹಾಡು ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಮೆರೆದರು. ಶಿಕ್ಷಕಿ ಕಾಸಿಂಬಿ ನಿರೂಪಿಸಿ, ವಂದಿಸಿದರು.

emedialine

Recent Posts

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

10 hours ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

10 hours ago

ಕಾರಾಗೃಹದ ಬಂದಿಗಳಿಗೆ ಮನಃ ಪರಿವರ್ತನೆಗೊಳ್ಳುವ ಚಲನ ಚಿತ್ರ ಸ್ಕ್ರೀನ್

ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…

10 hours ago

ಕನ್ನಡ ದೀಪೋತ್ಸವ: ವಿಜಯೀಭವ ಕೃತಿ ಜನಾರ್ಪಣೆ 24 ರಂದು

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…

10 hours ago

ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದಿಂದ ವಿಭಾಗಿಯ ಮಟ್ಟಕ್ಕೆ ಆಯ್ಕೆ

ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…

10 hours ago

ಅಭಿವೃದ್ಧಿ ಪರ ಚಿಂತನೆಯಳ್ಳ ಪ್ರಬುದ್ದ ರಾಜಕಾರಣಿ ಪ್ರಿಯಾಂಕ್ ಖರ್ಗೆ

ಶಹಾಬಾದ: ನಗರದ ಶಿವಯೋಗಿಸ್ವಾಮಿ ಪ್ರೌಢಶಾಲೆಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜನ್ಮ…

10 hours ago