ಬಿಸಿ ಬಿಸಿ ಸುದ್ದಿ

ಶರಣ ಜೀವನ ದರ್ಶನ ಪ್ರವಚನ ಮಂಗಲ

ಭಾಲ್ಕಿ: ಪಟ್ಟಣದ ಚನ್ನಬಸವಾಶ್ರಮದಲ್ಲಿ ಪರಮಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರಿಂದ ಶ್ರಾವಣ ಮಾಸದ ನಿಮಿತ್ಯ ಒಂದು ತಿಂಗಳ ಪರ್ಯಂತ ಸಾಗಿಬಂದ ಶರಣ ಜೀವನ ದರ್ಶನ ಪ್ರಚವನ ಮಂಗಲ ಸಮಾರಂಭ ಜರುಗಿತು.

ಈ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಇಳಕಲ್‌ನ ಪೂಜ್ಯ ಶ್ರೀ ಮ.ನಿ.ಪ್ರ.ಗುರುಮಹಾಂತ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ವಿಶ್ವಗುರು ಬಸವಣ್ಣನವರ ತತ್ವಗಳು ನಿತ್ಯನೂತನವಾಗಿವೆ. ಇತ್ತೀಚಿನ ದಿನಮಾನಗಳಲ್ಲಿ ವಿಶ್ವಸಂಸ್ಥೆ ಕೆಲವು ಯೋಜನೆಗಳನ್ನು ಜಾರಿಯಲ್ಲಿ ತರುತ್ತಿದೆ. ಮಾನವ ಹಕ್ಕುಗಳ ರಕ್ಷಣೆಗಾಗಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆ ಪ್ರತಿಪಾದಿಸುವ ಮಾನವ ಹಕ್ಕುಗಳು ನಾವು ೧೨ನೇ ಶತಮಾನದ ಬಸವಾದಿ ಶರಣರ ವಚನಗಳಲ್ಲಿ ನೋಡುತ್ತೇವೆ. ವಿಶೇಷವಾಗಿ ಇತ್ತೀಚೆಗೆ ಅನ್ನವನ್ನು ಕೆಡಸಬಾರದೆಂದು ವಿಶ್ವಸಂಸ್ಥೆ ಒಂದು ಯೋಜನೆ ರೂಪಿಸಿದೆ. ಆದರೆ ೧೨ನೇ ಶತಮಾನದಲ್ಲಿ ಬಸವಣ್ಣನವರು ಪ್ರಸಾದರೂಪಿ ಪದಾರ್ಥವನ್ನು ಹಾಳು ಮಾಡಬಾರದೆಂದು ತಮ್ಮ ಅನೇಕ ವಚನಗಳಲ್ಲಿ ಹೇಳಿದ್ದಾರೆ.

ಅನೈತಿಕ ಸಂಬಂಧದಿಂದ ಜನ್ಮ ತಾಳಿರುವ ಮಕ್ಕಳಿಗೆ ಕೂಡ ಅವರ ತಂದೆ ಆಸ್ತಿಯಲ್ಲಿ ಪಾಲು ಇರುತ್ತದೆ ಎಂದು ಇತ್ತೀಚೆಗೆ ಒಂದು ಕಾಯ್ದಿ ಬಂದಿದೆ. ಆದರೆ ಬಸವಣ್ಣನವರು ಆ ಕಾಲದಲ್ಲಿಯೆ ವೇಶ್ಯಾಪುತ್ರರಾಗಲಿ, ದಾಸಿಪುತ್ರರಾಗಲಿ ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಹಾಗೂ ಸಮಾನತೆ ನೀಡಿರುವುದು ನಮಗೆ ತಿಳಿದುಬರುತ್ತದೆ. ಹೀಗೆ ವೇಶ್ಯಾಪುತ್ರರನ್ನು, ದಾಸಿಪುತ್ರರನ್ನು, ಅಂಗವಿಕಲರನ್ನು ಸಮಾಜದ ಕಟ್ಟಕಟೆಯ ವ್ಯಕ್ತಿಯನ್ನು ಅಭಿವೃದ್ಧಿಯ ಪಥದಲ್ಲಿ ತರುವ ದಿಶೆಯಲ್ಲಿ ಸಕಲ ಜೀವಾತ್ಮರ ಲೇಸನ್ನೆ ಬಯಸಿದ ಬಸವಣ್ಣನವರೇ ನಿಜಾರ್ಥದಲ್ಲಿ ವಿಶ್ವಗುರು ಜಗಜ್ಯೋತಿ ಎಂದು ನಾವು ಹೆಮ್ಮೆಯಿಂದ ಹೇಳಬೇಕು ಎಂದು ಪೂಜ್ಯರು ಆಶೀರ್ವಚನ ನೀಡಿದರು. ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು, ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಪೂಜ್ಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳು ನೇತೃತ್ವವಹಿಸಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕರಾದ ಈಶ್ವರ ಖಂಡ್ರೆ ಅವರು ಪೂಜ್ಯರು ಒಂದು ತಿಂಗಳ ಪ್ರವಚನ ಮಾಡುವ ಮೂಲಕ ನಮ್ಮೆಲ್ಲರಲ್ಲಿ ಮಾನವೀಯ ಮೌಲ್ಯಗಳನ್ನು ಶರಣರ ತತ್ವಾದರ್ಶಗಳನ್ನು ಬಿತ್ತುವ ಮೂಲಕ ಒಳ್ಳೆಯ ಸಮಾಜ ನಿರ್ಮಾಣಕ್ಕಾಗಿ ದುಡಿಯುತ್ತಿದ್ದಾರೆ ಎಂದು ನುಡಿದರು. ಬಸವಗುರುಪೂಜೆ ನೆರವೇರಿಸಿದ ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ ಅವರು ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಸೇವಾ ಸಾಧನೆ ಗುರುತರವಾಗಿದೆ ಪೂಜ್ಯರು ನಮ್ಮ ಶ್ರೀಮಠದ ಕೀರ್ತಿಯನ್ನು ನಾಡಿನುದ್ದಗಲಕ್ಕೂ ಅಷ್ಟೇ ಅಲ್ಲದೆ ಹೊರರಾಜ್ಯಗಳಲ್ಲಿ ಪಸರಿಸಿದ್ದಾರೆ. ಇಂತಹ ಸದ್ಗುರುವನ್ನು ಪಡೆದ ನಾವೆಲ್ಲರು ಧನ್ಯರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರಾವಣ ಮಾಸ ಸೇವಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಶರಣ ಬಸವರಾಜ ಮರೆ ಅವರಿಗೆ ಪೂಜ್ಯರಿಂದ ಆಶೀರ್ವದಿಸಲಾಯಿತು. ಹಾಗೂ ಶ್ರಾವಣ ಮಾಸದಲ್ಲಿ ಸೇವೆ ಸಲ್ಲಿಸಿರುವ ಎಲ್ಲರಿಗೆ ಪೂಜ್ಯರು ಆಶೀರ್ವದಿಸಿದರು. ದೀಪಕ ಠಮಕೆ ಅವರು ನಿರೂಪಿಸಿದರು. ಯಲ್ಲನಗೌಡ ಬಾಗಲಕೋಟ ಹಾಗೂ ರಾಜು ಜುಬರೆ ಅವರಿಂದ ವಚನ ಸಂಗೀತ ನಡೆಯಿತು. ಶರಣ ಶಾರದಾ ಬಾಬುರಾವ ಹುಣಜೆ ಭಾಲ್ಕಿ, ಶರಣ ಸಂಜುಕುಮಾರ ರಾಮಚಂದ್ರ ಮಡಿವಾಳ ಬೀದರ ಇವರಿಂದ ಪ್ರಸಾದ ದಾಸೋಹ ಮಾಡಲಾಯಿತು.

emedialine

Recent Posts

ಕಾಳಗಿ; ರಟಕಲ್ ಗ್ರಾಮದಲ್ಲಿ ವಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

18 mins ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

1 hour ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

4 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

6 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

19 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

19 hours ago