ಬಿಸಿ ಬಿಸಿ ಸುದ್ದಿ

ಅಂತರಂಗದ ಅಂತಃಸತ್ವದ ಆಚರಣೆಯೇ ಶರಣ ಸಂಸ್ಕೃತಿ

ಕಲಬುರಗಿ: ಹನ್ನೆರಡನೆಯ ಶತಮಾನದಲ್ಲಿಕಲ್ಯಾಣ ಭಕ್ತಿಗೆ ಬೀಡಾದದ್ದು ೩೬ ವರ್ಷ. ಈ ಅವಧಿಯಲ್ಲಿ ಸತ್ಯಕ್ಕನಂತಹ ಕಸಗುಡಿಸುವವಳೂ ಆನುಭಾವಿಕ ನೆಲೆಯಲ್ಲಿ ವಚನಗಳನ್ನು ಬರೆದು ಮಾದರಿಯಾಗಿದ್ದಾಳೆ.ಅಕ್ಕಮಹಾದೇವಿ ಎನ್ನಲ್ಲಿ ಏನುಂಟು ಎಂದು ಎನ್ನ ಅಂಗೈಯಲ್ಲಿ ಇಂಬುಗೊಂಡೆ?ಎಂದುಚೆನ್ನಮಲ್ಲಿಕಾರ್ಜುನನ್ನು ಪ್ರಶ್ನಿಸಿ ಆಧ್ಯಾತ್ಮಿಕ ಬದುಕಿಗೆ ಚಿಲುಮೆಯಾಗಿದ್ದಾಳೆ. ಬಸವಣ್ಣನವರ ಮಾರ್ಗದರ್ಶನದಲ್ಲಿ ಅನೇಕ ಶರಣ ಶರಣೆಯರುಆನುಭಾವಿಕ ನೆಲೆಯಲ್ಲಿತಮ್ಮಅಂತಃ ಸತ್ವದ ಬೆಳಕನ್ನು ಜಗತ್ತಿಗೆ ಪರಿಚಯಿಸಿದರು ಎಂದು ಬೆಂಗಲೂರು ಬೇಲಿಮಠದ ಶಿವರುದ್ರ ಮಹಾಸ್ವಾಮೀಜಿ ನುಡಿದರು.

ಕಲಬುರಗಿ ಬಸವ ಸಮಿತಿಯಅನುಭವ ಮಂಟಪದಲ್ಲಿ ವಚನ ಶ್ರಾವಣ -೨೦೨೨ “ಶರಣ ಸಂಸ್ಕೃತಿ” ಉಪನ್ಯಾಸ ಮಾಲೆಯ ಸಮಾರೋಪ ಸಮಾರಂಭದ ಸಾನಿಧ್ಯವನ್ನು ವಹಿಸಿ ಮಾತನಾಡಿದಅವರು, ಶರಣಗಣ ಲಿಂಗದ ಪ್ರತಿ ಬಿಂಬದಂತೆಇದ್ದರು. ಕಾಯಕ ದಾಸೋಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ನಡೆ-ನುಡಿ ಶುದ್ಧವಿಟ್ಟುಕೊಂಡು ಲೋಕಕ್ಕೆ ಮಾದರಿಯಾಗಿ ಬದುಕಿದ್ದರುಎಂದರು.

ಅತಿಥಿಗಳಾಗಿ ಆಗಮಿಸಿ ಶ್ರಾವಣಮಾಸಒಂದು ತಿಂಗಳ ಪರ್ಯಂತಆನ್‌ಲೈನ್‌ಅರಿವಿನ ಮನೆಯಕಾರ್ಯಕ್ರಮದಲ್ಲಿ”ಶರಣ ಸಂಸ್ಕೃತಿ” ಕುರಿತುಉಪನ್ಯಾಸ ನೀಡಿದ್ದ ಶ್ರೀ ಅಶೋಕ ಬಸಪ್ಪ ಬರಗುಂಡಿಗದಗಇವರಿಗೆ ಬಸವ ಸಮಿತಿಯಿಂದ”ಬಸವ ವಿಭೂಷಣ” ಎಂಬ ಪ್ರಶಸ್ತಿ ನೀಡಿಗೌರವಿಸಲಾಯಿತು. ನಂತರ ಶ್ರೀ ಬರಗುಂಡಿಅವರು ಮಾತನಾಡುತ್ತ, ಅದ್ಭುತವೆನ್ನುವಂತಹ ಬಸವ ಧರ್ಮದ ಆಲೋಚನೆಗಳನ್ನು ನಾವೆಲ್ಲರೂಅರಿಯಬೇಕಾಗಿದೆ. ಬದುಕಿನ ಅಗತ್ಯಗಳು ಮತ್ತು ಆದ್ಯತೆಗಳನ್ನು ಹೆಣೆದುಕೊಂಡ ನಾವೆಲ್ಲಾ ಭ್ರಮಾಲೋಕದಲ್ಲಿ ಬದುಕುತ್ತಿದ್ದೇವೆ. ಇಂತಹ ಪ್ರಲೋಭನೆಗಳಿಂದಾಗಿ ಅಂತರಂಗದ ಸತ್ವವನ್ನು ಕಳೆದುಕೊಂಡ ಕಾರಣಕ್ಕಾಗಿ, ನಮ್ಮನ್ನು ನಾವು ಒಳಗೆ ಸಾಯಿಸಿಕೊಂಡು, ಪ್ರೀತಿಯನ್ನು ಕಳೆದುಕೊಂಡು ನಾವೆಲ್ಲ ಬಸವ ಧರ್ಮದಿಂದ ವಿಮುಖರಾಗಿದ್ದೇವೆ. ನಮ್ಮಲ್ಲಿಅಡಗಿದ ಸ್ವಪ್ರತಿಷ್ಠೆಯಅಹಂಕಾರವನ್ನು ಕಳೆಯದೆ ಶರಣರು ನಮಗೆ ಅರ್ಥವಾಗುವುದಿಲ್ಲ ಎಂದರು.

ಸಮಾರೋಪ ನುಡಿಗಳನ್ನಾಡಿದ ಡಾ.ವೀರಣ್ಣದಂಡೆಯವರು ಕಳೆದ ಹಲವಾರು ವರ್ಷಗಳಿಂದ ಕಲಬುರಗಿ ಬಸವ ಸಮಿತಿಯ ವಿಧಾಯಕ ಕಾರ್ಯಕ್ರಮಗಳ ಕುರಿತು ಮಾತನಾಡಿಕರೋನಾದಂತಹಕಷ್ಟಕರ ಸನ್ನಿವೇಶದಲ್ಲಿಯೂಆನ್‌ಲೈನ್ ಉಪನ್ಯಾಸಗಳನ್ನು ಏರ್ಪಪಡಿಸಿ ಜನರಿಗೆಆಧ್ಯಾತ್ಮಿಕ ಚಿಂತನೆಗಳ ಹೂರಣವನ್ನುಉಣಬಡಿಸಲಾಗಿದೆಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದಕೇಂದ್ರ ಬಸವ ಸಮಿತಿಯಅಧ್ಯಕ್ಷರಾದ ಶ್ರೀ ಅರವಿಂದಜತ್ತಿಯವರು ಶ್ರಾವಣ ಮಾಸದ ಈ ಸಮಾರೋಪ ಸಮಾರಂಭಅಂತ್ಯವಲ್ಲ ಲಿಂಗಪ್ರಜ್ಞೆಯಆರಂಭಎಂದರು.ಬಸವ ಪ್ರಜ್ಞೆ, ವಚನ ಪ್ರಜ್ಞೆ ಮತ್ತು ಲಿಂಗಪ್ರಜ್ಞೆಗಳು ಜಾಗ್ರತವಾದಾಗ ಮಾತ್ರ ವ್ಯಕ್ತಿಯ ಪರಿಪೂರ್ಣ ವ್ಯಕ್ತಿತ್ವ ರೂಪಗೊಳ್ಳುತ್ತದೆ.ಈ ಬಗೆಯ ವ್ಯಕ್ತಿತ್ವ ನಮ್ಮೆಲ್ಲರದಾಗಬೇಕು ಎಂದರು.

ತಮಿಳುನಾಡು ನಾಗಸಂದ್ರ ವಿರಕ್ತಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಕಲಬುರಗಿ ಬಸವ ಸಮಿತಿಯಅಧ್ಯಕ್ಷರಾದಡಾ. ವಿಲಾಸವತಿ ಖೂಬಾ, ಪ್ರಧಾನ ಕಾರ್ಯದರ್ಶಿ ಬಂಡಪ್ಪಕೇಸೂರು, ಹಿರಿಯ ಸದಸ್ಯರಾದಡಾ.ಕೆ.ಎಸ್. ವಾಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷರಾದಡಾ.ಜಯಶ್ರೀದಂಡೆ ಸ್ವಾಗಿತಿಸಿದರು. ಕಾರ್ಯದರ್ಶಿಗಳಾದ ಡಾ.ಆನಂದ ಸಿದ್ಧಾಮಣಿ ಶರಣು ಸಮರ್ಪಣೆ ಮಾಡಿದರು.ಎಚ್.ಕೆ. ಉದ್ದಂಡಯ್ಯ ನಿರೂಪಿಸಿದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

9 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

9 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

12 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

12 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

12 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

12 hours ago