ಕಲಬುರಗಿ : ಸಂಗೀತದಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದು ಕಲಬುರಗಿಯ ಬ್ರಹ್ಮಪೂರ ವಿಶ್ವಕರ್ಮ ಏಕದಂಡಗಿಮಠದ ಪೂಜ್ಯ ಶ್ರೀ ಸುರೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಾಚನ ನೀಡಿದರು.
ನಗರದ ಅನ್ನಪೂರ್ಣ ಕ್ರಾಸ್ ಬಳಿ ಇರುವ ಕಲಾ ಮಂಡಳದಲ್ಲಿ ರವಿವಾರ ಸಂಜೆ ನಡೆದ ಕಲಾ ಸೌರಭ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಪ್ರಶಸ್ತಿ ಪ್ರಧಾನ ಮತ್ತು ಸಂಗೀತ ವಚನೋಸ್ತವ ಕಾರ್ಯಕ್ರಮಕ್ಕೆ ಸತ್ಯಂ ಕಾಲೇಜ್ ಪ್ರಾಚಾರ್ಯರಾದ ಬಿ.ಹೆಚ್ ನೀರಗುಡಿ ಚಾಲನೆ ನೀಡಿ ಮಾತನಾಡಿದರು.
ಬಾಬುರಾವ ಕೊಬಾಳ ಮಾತನಾಡಿ, ಈ ಕಲಾ ಸೌರಬ ಪ್ರತಿಷ್ಠಾಣವು ಕಳೆದ 12 ವರ್ಷಗಳಿಂದ ಯಾವುದೇ ರೀತಿಯ ಅಡೆತಡೆ ಇಲ್ಲದೆ ಕಾರ್ಯ ನಿರ್ವಹಿಸುತ್ತ ಬಂದಿರುವುದು ಒಂದು ಹೆಮ್ಮೆಯ ವಿಷಯ ಹಾಗೂ ವಿವಿಧ ಕ್ಷೆತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಕೂಡ ಸಂತೋಷದ ಸಂಗತಿ ಎಂದು ಹೇಳಿದರು.
ಪತ್ರಿಕೋದ್ಯಮ ಮತ್ತು ಸಾಹಿತ್ಯ ಸಾಮಾಜಿಕ ಕ್ಷೇತ್ರ ಶರಣಗೌಡ ಪಾಟೀಲ ಪಾಳಾ,ಶಿಲ್ಪಿ ಕಲಾವಿದರಾದ ನಟರಾಜ ಎಮ್ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾದ ಪ್ರತಿಭಾ ಎಮ್ , ಹುಲಿ ಪ್ರಾರ್ಥನಾ ಗೀತೆ ಹಾಡಿದರು. ಅಣ್ಣರಾಯ ಮತ್ತಿಮೂಡ, ಪ್ರಶಾಂತ ಗೋಲ್ಡ್ ಸ್ಮಿತ್, ಪ್ರಶಾಂತ ಕಂಬಾರ, ನಾಗೇಶ್ರೀ ಕೋಣೆ, ಲವಕುಶ ಪಾಳಾ,ಹಿಂದೂಸ್ತಾನಿ ವಾದ್ಯ, ಜಾನಪದ ಗೀತೆ,ಸುಗಮ ಸಂಗೀತ,ದೇಶ ಭಕ್ತಿ ಗೀತೆ, ತತ್ವ ಪದಗಳು, ವಚನ ಗಾಯನ ದಾಸವಾಣಿ ಕುರಿತು ಕಲಾವಿದರು ತಮ್ಮ ಕಲೆ ಪ್ರದರ್ಶನ ಮಾಡಿದರು.
ಶಿವುಕುಮಾರ್ ಬಾಳಿ, ಸುಭಾಷ್ ಚಂದ್ರ ಹೊಟ್ಟೆ,ವೀರಣ್ಣ ಕಂಬಾರ ಮತ್ತಿತರರು ಉಪಸ್ಥಿತರಿದ್ದರು. ಪ್ರಾಣೇಶ ವಿಶ್ವಕರ್ಮ ನಿರೂಪಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…