ಕಲಬುರಗಿ : ಶ್ರೀ ಕೇರಿ ಬಸಮ್ಮ ದೇವಿ ಸುಕ್ಷೇತ್ರ ನಂದಿಕೂರ ವತಿಯಿಂದ ಶ್ರೀ ಮರಗಮ್ಮ ಮತ್ತು ದುರ್ಗಾಮ್ಮ ದೇವಿ ದೇವಸ್ಥಾನ ನಗರದ ರಾಮ ಮಂದಿರ ವೃತ್ತದಲ್ಲಿ ಹಾಗೂ ಶ್ರೀ ಹನುಮಾನ ದೇವಸ್ಥಾನ ನವದಗಿ ಉದನೂರ ಕ್ರಾಸ್‌ನಲ್ಲಿ ೩೦ ದಿವಸಗಳ ಶ್ರಾವಣ ಮಾಸದ ಪ್ರಯುಕ್ತ ದಿನಾಲೂ ಅನ್ನ ದಾಸೋಹವನ್ನು ಶ್ರೀಶ್ರೀಶ್ರೀ ಶಿವಲಿಂಗ ಶರಣರು ನಂದಿಕೂರ ಇವರ ಅಮೃತ ಹಸ್ತಾದಿಂದ ಪ್ರಾರಂಭವಾಗಿದ್ದು ಮತ್ತು ಶ್ರಾವಣ ಮಾಸದ ಮುಕ್ತಾಯ ದಿನದಂದು ಅನ್ನ ದಾಸೋಹಕ್ಕೆ ಸರ್ವರೀತಿಯಿಂದ ಸಹಾಯ ಮಾಡಿದ ಭಕ್ತರಿಗೆ ಆಶಿರ್ವಾದ ಮಾಡಿದಾರೆ.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯ ಪವನಕುಮಾರ ವಳಕೇರಿ ಮಾತನಾಡಿ ಶ್ರೀಶ್ರೀಶ್ರೀ ಶಿವಲಿಂಗ ಶರಣರು ನೇತೃತ್ವದಲ್ಲಿ ರಾಮಮಂದಿರ ವೃತ್ತ ಹಾಗೂ ಉದನೂರ ಕ್ರಾಸ್‌ನಲ್ಲಿ ೩೦ ದಿನಗಳಕಾಲ ಎರಡು ಕಡೆ ಪ್ರಸಾದವನ್ನು ಸಾವಿರಾರು ಭಕ್ತರಿಗೆ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೇರವೆರಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಲ್ಲಣಗೌಡ ಪೋಲಿಸ್ ಪಾಟೀಲ ನಂದಿಕೂರ, ಗ್ರಾಮ ಪಂಚಾಯತ ಅಧ್ಯಕ್ಷ ಸಂಗಣಗೌಡ ಮಾಲಿಪಾಟೀಲ, ಸಾತಖೇಡ, ಈಶಣಗೌಡ ಪೋಲಿಸ ಪಾಟೀಲ ಪಡದಳ್ಳಿ, ಶ್ರೀಮಂತ ರಾಠೋಡ ನಂದಿಕೂರ ತಾಂಡಾ ಸೇರಿ ವಿವಿಧ ಗ್ರಾಮಸ್ಥರು, ಭಕ್ತಾಧಿಗಳು ಇದ್ದರು
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…