ಕಲಬುರಗಿ: ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಕಲ್ಯಾಣರಾವ. ಜಿ.ಪಾಟೀಲರವರು ಆಗಸ್ಟ್ 31 ರಂದು ನಿವೃತ್ತಿ ಹೊಂದುತ್ತಿರುವ ಪ್ರಯುಕ್ತವಾಗಿ ಅವರ ವಿದ್ಯಾರ್ಥಿ ಬಳಗ ಹಾಗೂ ಅಭಿಮಾನಿ ಬಳಗ ಸೇರಿಕೊಂಡು “ಸೌಹಾರ್ದ ಪಥ” ಎನ್ನುವ ಸಾಂದರ್ಭಿಕ ಸಂಪುಟ ಲೋಕಾರ್ಪಣೆ ಮತ್ತು ಅಭಿನಂದನ ಸಮಾರಂಭ ಜರುಗಲಿದೆ.
ನಗರದ ಜಯನಗರ ಕಾಲೋನಿಯಲ್ಲಿರುವ ಅನುಭವ ಮಂಟಪದಲ್ಲಿ ಸೆಪ್ಟೆಂಬರ್ 4 ರಂದು ಬೆಳಿಗ್ಗೆ 10:30 ಕ್ಕೆ ಹಮ್ಮಿಕೊಂಡಿದ್ದು, ಕಾರ್ಯಕ್ರಮದ ಸಾನಿಧ್ಯವನ್ನು ಭಾಲ್ಕಿ ಹಿರೇಮಠದ ಪರಮಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದೇವರು ವಹಿಸಿಕೊಳ್ಳಲಿದ್ದು, ಮಾಜಿ ಸಚಿವರಾದ ಡಾ. ಶರಣ ಪ್ರಕಾಶ ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
“ಸೌಹಾರ್ದ ಪಥ” ಸಂಪುಟವನ್ನು ಗುಲ್ಬರ್ಗ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ದಯಾನಂದ ಅಗಸರ ಅವರು ಲೋಕಾರ್ಪಣೆ ಮಾಡಲಿದ್ದು, ಡಾ. ಕಲ್ಯಾಣ ರಾವ ಪಾಟೀಲ್ ಅವರ ಸಂಕ್ಷಿಪ್ತ ಪರಿಚಯ ಹಾಗೂ ಕೃತಿ ಪರಿಚಯವುಳ್ಳ ” ಮಹಾಗುರು” ಎನ್ನುವ ಕೃತಿಯನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ. ಸತೀಶ ಕುಮಾರ ಹೊಸಮನಿ ಅವರು ಬಿಡುಗಡೆಗೊಳಿಸಲಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಯದ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಡಾ. ಎಚ್ ಟಿ ಪೋತೆ, ನಿವೃತ್ತ ಪ್ರಾಧ್ಯಾಪಕರಾದ ಡಾ. ಅಮರೇಶ್ ನುಗಡೋಣಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ಕೃತಿಯ ಕುರಿತು ಮಾತನಾಡಲಿದ್ದಾರೆ.
ಶ್ರೀ ಸಿ.ವಿ ಮಾಲಿಪಾಟೀಲ, ಡಾ. ಗುರುಲಿಂಗಪ್ಪ ದಬಾಲೆ ಹಾಗೂ ಡಾ. ಲಕ್ಷ್ಮಿಕಾಂತ ಪಂಚಾಳ ಅವರ ಉಪಸ್ಥಿತರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖುಬಾ ಅವರು ವಹಿಸಲಿದ್ದಾರೆ ಇದೇ ಸಂದರ್ಭದಲ್ಲಿ ಪ್ರಾಥಮಿಕ ಹಂತದಿಂದ ಹಿಡಿದು ಪದವಿ ಹಂತದವರೆಗೆ ಡಾ. ಕಲ್ಯಾಣ ರಾವ ಪಾಟೀಲ ರವರನ್ನು ಬೋಧಿಸಿದ ಶಿಕ್ಷಕರಿಗೆ “ಗುರುವಂದನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಡಾ. ಕಲ್ಯಾಣ ರಾವ ಪಾಟೀಲ ಅವರ ಅಭಿನಂದನ ಸಮಿತಿಯ ಅಧ್ಯಕ್ಷರಾದ ಡಾ. ಜಗನ್ನಾಥ ಹೆಬ್ಬಾಳೆ,ಉಪಾಧ್ಯಕ್ಷರಾದ ಡಾ. ರೋಳೆಕರ್ ನಾರಾಯಣ, ಕಾರ್ಯದರ್ಶಿಗಳಾದ ಡಾ. ಬಸವ ಪಾಟೀಲ ಜವಳಿ ಹಾಗೂ ಅಪಾರ ವಿದ್ಯಾರ್ಥಿ ಬಳಗ ಮತ್ತು ಅಭಿಮಾನಿ ಬಳಗ ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಡಾ. ಶರಣಬಸಪ್ಪ ವಡ್ಡನಕೇರಿ ತಿಳಿಸಿದ್ದಾರೆ.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…