ಬಿಸಿ ಬಿಸಿ ಸುದ್ದಿ

ಬಸವಣ್ಣನವರು ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟವರು: ಉಪನ್ಯಾಸಕ ರವಿ ನರೋಣಿ

ಶಹಾಬಾದ: ಪ್ರಪಂಚಕ್ಕೆ ಸಮಾನತೆ ಸಂದೇಶ ಸಾರುವ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೊಟ್ಟ ಮೊದಲು ಬಾರಿ ಜಾಗತಿಕ ಪ್ರಪಂಚಕ್ಕೆ ಕೊಟ್ಟವರು, ಅದನ್ನು ಜಾರಿಗೆ ತಂದವರು ಅಣ್ಣ ಬಸವಣ್ಣನವರು ಎಂದು ಉಪನ್ಯಾಸಕರಾದ ರವಿ ನರೋಣಿ ಹೇಳಿದರು.

ಅವರು ಹಳೆಶಹಾಬಾದನ ಮಹಾನಂದಿ ಪಾರಾ ಅವರ ಮನೆಯಲ್ಲಿ ವಚನೋತ್ಸವ ಕಮಿಟಿ ವತಿಯಿಂದ ಶ್ರಾವಣ ಮಾಸದ ನಿಮಿತ್ತ ಆಯೋಜಿಸಲಾದ ೮೯೫ನೇ ವಚನ ಅಂಗಳ ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.

ವಚನ ಮತ್ತು ಸಂವಿಧಾನ ಎರಡೂ ಒಂದೇ, ಅವು ಬೇರೆ, ಬೇರೆ ಅಲ್ಲ. ವಚನಗಳಲ್ಲಿರುವ ಅಂಶಗಳು ಸಂವಿಧಾನದಲ್ಲಿವೆ. ದೇಶದ ಪ್ರಗತಿಗೆ ವಚನ ಸಾಹಿತ್ಯ ಎ? ಪ್ರಮುಖ್ಯವೋ ಅ? ಮುಖ್ಯ ನಮ್ಮ ಭಾರತ ದೇಶದ ಸಂವಿಧಾನದ ಎನ್ನುವುದು ನಾವೆಲ್ಲರೂ ತಿಳಿದುಕೊಳ್ಳುವುದು ಅತಿ ಅವಶ್ಯ. ಹಾಗಾಗಿ ಈ ಎರಡು ತತ್ವಗಳಿಂದ ದೇಶದ ಸವಾಂಗೀಣ ಅಭಿವೃದ್ಧಿ ಸಾಧ್ಯವಲ್ಲದೆ, ಪೂರಕ ಹಾಗೂ ಮಾರ್ಗದರ್ಶನ ಎನ್ನುವುದು ನಾವ್ಯಾರು ಮರೆಯಬಾರದು.ಆದ್ದರಿಂದ ದೇಶದ ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ಸಮಾನತೆ, ಸ್ವಾತಂತ್ರ್ಯ ನೀಡಿದೆ.ವಚನ ಸಾಹಿತ್ಯ ವಿಶ್ವ ಶ್ರೇಷ್ಠ ಸಾಹಿತ್ಯ,ಪ್ರಜಾಪ್ರಭುತ್ವ ಮೌಲ್ಯಗಳನ್ನು ಸಾರುವ ವಿಶ್ವ ಸಂವಿಧಾನವಾಗಿದ್ದು, ವಚನಗಳಲ್ಲಿರುವ ಅಂಶಗಳು ಸಂವಿಧಾನದ ಚೌಕಟ್ಟಿನಲ್ಲಿ ಕಾಣುತ್ತೇವೆ ಎಂದರು.

ಲಕ್ಷ್ಮಿ ದಯಾಮಣಿ ಮಾತನಾಡಿ, ಅನುಭವ ಮಂಟಪದ ಮೂಲಕ ಇಡೀ ಮನುಕುಲದ ಉದ್ಧಾರಕ್ಕಾಗಿ,ಸರ್ವರ ಕಲ್ಯಾಣಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ತಂದ ಕೀರ್ತಿ ಮತ್ತು ಶ್ರೇಯಸ್ಸು ಬಸವಣ್ಣನವರ ಆದಿಯಾಗಿ ಇಡೀ ಶರಣ ಸಂಕುಲಕ್ಕೆ ಸಲ್ಲುತ್ತದೆ ಜೊತೆಗೆ ಸಕಲ ಜೀವಾತ್ಮರೆಲ್ಲರಿಗೂ ಲೇಸು ಬಯಸಿದ ಜಗತ್ತಿನ ಮೊಟ್ಟ ಮೊದಲ ಸಮತವಾದಿ ಬಸವಣ್ಣನವರು ಎಂಬುದು ಯಾರು ಅಲ್ಲಗಳೆಯುವಂತಿಲ್ಲ. ಹಾಗಾಗಿ ಮೌಲ್ಯಾಧಾರಿತ ಸಾಮರಸ್ಯ ಸಮೃದ್ಧ ನಾಡು ಕಟ್ಟುವ ಕನಸು ಕಂಡು ಬಸವಣ್ಣನವರು.ಅದೇ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ಸಿದ್ಧಾಂತವನ್ನು ಜಾಗತಿಕ ಮಟ್ಟದಲ್ಲಿ ಪ್ರತಿಪಾದಿಸಿದ್ದಾರೆ.ಜೊತೆಗೆ ಶಾಂತಿ,ಸಹಬಾಳ್ವೆ,ಕಾಯಕ,ದಯೇ,ಕರುಣೆ, ದಾಸೋಹ, ಅರಿವು, ಸಮಾನತೆಯ ವೈಚಾರಿಕ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.

ವಚನೋತ್ಸವ ಕಮಿಟಿಯ ಶರಣಗೌಡ ಪಾಟೀಲ, ಗಿರಿಮಲ್ಲಪ್ಪ ವಳಸಂಗ, ಮರತೂರಿನ ಮಲ್ಲಣ್ಣ ಅಣಕಲ್, ಬಸವರಾಜ ತರನಳ್ಳಿ, ಮಹಾನಂದಿ ಪಾರಾ, ಬಸವರಾಜ ಶಹಾಪೂರ, ದೂಳಪ್ಪ ಹಡಪದ,ಶರಣು ಕೌಲಗಿ, ರೇವಣಸಿದ್ದ ಮತ್ತಿಮಡು, ರಾಜು ಕುಂಬಾರ,ಬಸವರಾಜ ಪಾಟೀಲ, ಶಿವಕುಮಾರ ತುಪ್ಪದ್,ಶರಣಪ್ಪ.ಎಮ್.ಕೊಡದೂರ,ಅರುಣ ಜಾಯಿ,ಕಿರಣಕುಮಾರ,ಸುಭಾಷ ತುಪ್ಪದ್, ನಾಗೇಶ ತುಪ್ಪದ್ ಸೇರಿದಂತೆ ಮಹಿಳೆಯರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

11 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

21 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

21 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

21 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago