ಶಹಾಬಾದ: ಶ್ರಾವಣ ನೊಂದ, ಬೆಂದ ಮನಗಳಿಗೆ ಭರವಸೆಯ ಟಾನಿಕ್ ಆಗಿದೆ ಎಂದು ನಿಜಾಮ ಬಜಾರ ಬೆಂಕಿ ತಾತನವರ ಮಠದ ಪೀಠಾಧಿಪತಿ ಸದ್ಗುರು ಮಂಗಲಸಿಂಗ ತಾತನವರು ಹೇಳಿದರು.
ಅವರು ಬುಧವಾರ ನಗರದ ನಿಜಾಮ ಬಜಾರನ ಬೆಂಕಿತಾತನವರ ಮಠದಲ್ಲಿ ಆಯೋಜಿಸಲಾದ ಶ್ರಾವಣ ಮಾಸದ ಮಹಾಮಂಗಲೋತ್ಸವ ಕಾರ್ಯಕ್ರಮ ಹಾಗೂ ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಶ್ರಾವಣ ಮಾಸ ಭಾರತೀಯರಿಗೆ ಒಳ್ಳೆಯದನ್ನು ಕೇಳುವ ಮಾಸವಲ್ಲದೇ ನಮ್ಮೊಳಗಿರುವ ಅಜ್ಞಾನವನ್ನು ಕಳೆಯುವ ಕಾಲವಾಗಿದೆ.ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಎಂಬ ಹೆಮ್ಮಾರಿ ಈಡೀ ವಿಶ್ವವನ್ನೇ ಕಾಡಿತು.ಇದರಿಂದ ಧಾರ್ಮಿಕ ಆಚರಣೆಗೆ ನಿರ್ಬಂಧ ಹೇರಲಾಯಿತು.ಕೊರೊನಾ ಹಾವಳಿಗೆ ಜನರು ಜೀವ ಭಯ ಉಂಟಾಗಿ ಭಯಬೀತರಾಗಿದ್ದರು.ಆದರೆ ದೇವರಿಗೆ ತನ್ನನ್ನು ಸಮರ್ಪಿಸಿಕೊಂಡ ಭಕ್ತ ಯಾವುದಕ್ಕೂ ಅಂಜಬೇಕಾಗಿಲ್ಲ. ಹುಟ್ಟಿದಮೇಲೆ ಸಾವು ಖಚಿತ. ನಮ್ಮ ಆಯು? ಮುಗಿಯುತ್ತಲೇ ಇಲ್ಲಿ ಒಂದು ಕ್ಷಣವೂ ಇರಲು ಸಾಧ್ಯವಿಲ್ಲ. ಅದಕ್ಕಾಗಿ ಭಯಭೀತರಾಗಿ ಸಾವು ಬರುವ ಮುನ್ನ ನಾವೇ ಸಾವಿನ ಮನೆಯ ಕದ ತಟ್ಟುವುದಲ್ಲ.
ಸತ್ಯಸಂಧನಾಗಿ ನಡೆದುಕೊಂಡಾಗ ದಾರಿದ್ರ್ಯ, ಬಡತನ ಬರಲು ಸಾಧ್ಯವಿಲ್ಲ. ಕಾರಣ ನಮ್ಮ ಸಂರಕ್ಷಕ ಆ ಶಿವ ಎನ್ನುವ ಅಚಲ ವಿಶ್ವಾಸ. ಈ ನೆಲೆಯಲ್ಲಿ ಮನು? ದೇವರನ್ನು, ಗುರುಗಳನ್ನು ನಂಬಿ ಕಾಯಕ ಮಾಡಬೇಕು. ಆಗ ಮನದಲ್ಲಿ ಯಾವುದೇ ದುಗುಡವಿರಬಾರದು. ಆಯು? ತೀರದೆ ಯಮ ನಮ್ಮನ್ನು ಮುಟ್ಟಲು ಸಾಧ್ಯವಿಲ್ಲ. ಎ? ಸಂದರ್ಭಗಳಲ್ಲಿ ಭೀತಿಯೇ ಭೂತವಾಗಿ ಕಾಡಬಹುದು. ಏನಾಗಬೇಕೆಂದಿದೆಯೋ ಅದು ಆಗೇ ಆಗುತ್ತದೆ. ಅದನ್ನು ಮನಸ್ಸಿಗೆ ಹಚ್ಚಿಕೊಂಡು ಕೊರಗುವ, ಮರುಗುವ, ಭ್ರಮೆಗೆ ಒಳಗಾಗಿ ಬದುಕನ್ನೇ ನರಕ ಮಾಡಿಕೊಳ್ಳುವ ಅಗತ್ಯವಿಲ್ಲ. ಬದಲಾಗಿ ಬಂದದ್ದು ಬರಲಿ.
ದೇವರ ದಯೆ ಇರಲಿ ಎನ್ನುವ ಮನೋಬಲ ಬೆಳೆಸಿಕೊಂಡು ಆಶಾವಾದದಿಂದಲೇ ಜೀವನ ಸಾಗಿಸಬೇಕು. ಇದರ ಜೊತೆಗೆ ಸತ್ಸಂಗ, ಕಾಯಕ ಶ್ರದ್ಧೆ, ಭಜನೆ ಮತ್ತು ನಿರ್ಭೀತಿಯ ಬದುಕು ಸಹ ಅ? ಮುಖ್ಯ. ಆಗ ಸಾವಿನ ಭಯದಿಂದ ಹೊರಬರಬಹುದು. ಇದಕ್ಕೆ ಬೇಕಾದುದು ಶುದ್ಧ ಜೀವನ. ಹಾಗೆ ನೋಡಿದರೆ ವೈರಿಗಳು ಹೊರಗೆ ಇಲ್ಲ. ಅವರು ನಮ್ಮೊಳಗೇ ಇದ್ದಾರೆ. ಈ ಸತ್ಯವನ್ನು ಅರಿತು ಒಳಗೆ ಅಡಗಿರುವ ವೈರಿಗಳನ್ನು ದಮನ ಮಾಡುವ ಪ್ರಯತ್ನ ಮಾಡಬೇಕು. ಆಗ ಬದುಕು ಹ?ದಾಯಕವಾಗಲು ಸಾಧ್ಯ ಎಂದರು.
ರೇವಣಸಿದ್ಧ ಮಾಣಿಕ್, ನಿಂಗಣ್ಣ ಹುಳಗೋಳಕರ್,ಮರಲಿಂಗ ವಾಲೀಕಾರ,ದೇವೆಂದ್ರ ಅಣಕಲ್,ಭೀಮರಾಯ ಪೂಜಾರಿ ಮದ್ರಿ,ಮಹೇಶ ಹೊಸೂರ್, ಮಲ್ಲು(ಕೆ), ಪ್ರಕಾಶಸಿಂಗ ಬಿಜಾಪೂರ, ಗೋಪಾಲಸಿಂಗ ಶಹಾಪೂರ, ಟಿಪ್ಪು ಬಿಜಾಪೂರ, ಬಂದೆನವಾಜ ಭೌರಿ, ರಾಜು ಹೊಸಮನಿ, ಈರಣ್ಣ ಕುಂಬಾರ, ಕಾಶಿನಾಥ ಇಂಗಳಗಿ, ಭೀಮರಾಯ ತಳವಾರ, ರಾಜೇಶ ಗೋಳಾ, ನಾಗಣ್ಣ ರಾಂಪೂರೆ, ಬಸವರಾಜ ಮದ್ರಿಕಿ,ರಾಜು ಕುಂಬಾರ, ಮಂಜುಳಾ ಕುಲಕರ್ಣಿ, ದೇವೆಂದ್ರ ಯಲಗೋಡಕರ್, ರಾಜು ಕುಂಬಾರ, ರಾಜು ಹೊಸಮನಿ, ಮಹ್ಮದ್ ದಾವೂದ್,ಫಜಲ್ ಪಟೇಲ್, ಮಲ್ಲಯ್ಯ ಗುತ್ತೆದಾರ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…