ಶಹಾಬಾದ: ದೈಹಿಕ ಶಿಕ್ಷಣ ಶಿಕ್ಷಕರ ವೃಂದ & ನೇಮಕಾತಿ ನಿಯಮಗಳ ತಿದ್ದುಪಡಿ ಆದೇಶ ಜಾರಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಮಾಡುವಂತೆ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಚನ್ನಬಸಪ್ಪ ಕೊಲ್ಲೂರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕನಿಷ್ಠ ಈ ಶಿಕ್ಷಣ ದಿನಾಚರಣೆಯೆಂದಾದರೂ ದೈಹಿಕ ಶಿಕ್ಷಣ ಶಿಕ್ಷಕರ ಬೇಡಿಕೆ ಈಡೇರಬಹುದೆಂದು ಆಶಾಭಾವನೆಯಿತ್ತು ಆದರೆ ಆಗಲಿಲ್ಲ ಎಂದು ವಿಷಾದಿಸಿದ್ದಾರೆ.
ರಾಜ್ಯದ ದೈಹಿಕ ಶಿಕ್ಷಣದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರವು ೨೦೦೬ರಲ್ಲಿ ಪ್ರೊ. ಎಲ್.ಆರ್.ವೈದ್ಯನಾಥನ್ ಅಧ್ಯಕ್ಷತೆಯಲ್ಲಿ ೭ ಜನ ದೈಹಿಕ ಶಿಕ್ಷಣ ತಜ್ಞರನ್ನು ನೇಮಿಸಿ ಸಮಿತಿಯನ್ನು ರಚಿಸಲಾಯಿತು, ಸಮಿತಿಯು ವರದಿಯನ್ನು ನೀಡಿತು, ಸದರಿ ಸಮಿತಿಯು ನೀಡಿದ ವರದಿಯನ್ನು ಪರಿಶೀಲಿಸಲು ಡಾ.ಆನಂದ್ ನಾಡಗೀರ ಅಧ್ಯಕ್ಷತೆಯಲ್ಲಿ ೮ ಜನ ದೈಹಿಕ ಶಿಕ್ಷಣ ತಜ್ಙರ ಸಮಿತಿಯನ್ನು ರಚಿಸಲಾಯಿತು ಎಂದರು.
ಈ ಸಮಿತಿಯು ಕೂಲಂಕಷವಾಗಿ ಸಮಿತಿ ನೀಡಿದ ವರದಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ೧೪ ಅಂಶಗಳನ್ನು ಶಿಫಾರಸ್ಸು ಮಾಡಿದ್ದು ಸದರಿ ಶಿಫಾರಸ್ಸನ್ನು ಸರ್ಕಾರವು ಸಂಪೂರ್ಣವಾಗಿ ಒಪ್ಪಿಕೊಂಡು ಸಂಪುಟ ಅನುಮೋದನೆ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಸರ್ಕಾರದ ಆದೇಶವಾಗಿದೆ.
ಆದರೆ ಸದರಿ ವರದಿಯಲ್ಲಿನ ೧೪ ಅಂಶಗಳ ಪೈಕಿ ೧೩ ಅಂಶಗಳನ್ನು ಜಾರಿಗೊಳಿಸಲಾಗಿದ್ದು, ೧೪ನೇ ಅಂಶವಾದ ದೈಹಿಕ ಶಿಕ್ಷಣ ಶಿಕ್ಷಕರುಗಳ ಪದನಾಮವನ್ನು ಸಹ ಶಿಕ್ಷಕರು ಎಂದು ಪರಿಗಣಿಸಿ ಸಹ ಶಿಕ್ಷಕರಿಗೆ ದೊರೆಯುವ ಎಲ್ಲಾ ಸೌಲಭ್ಯವನ್ನು ದೈಹಿಕ ಶಿಕ್ಷಣ ಶಿಕ್ಷಕರಿಗೂ ನೀಡಲು ವಿಳಂಬದ ಕಾರಣ ದೈಹಿಕ ಶಿಕ್ಷಣ ಶಿಕ್ಷಕರ ವೃಂದ & ನೇಮಕಾತಿ ನಿಯಮಗಳ ತಿದ್ದುಪಡಿಯ ಸಲುವಾಗಿ ಭರವಸೆ ಸಮಿತಿ ರಚಿಸಿದ್ದು ಭರವಸೆ ಸಮಿತಿ ೨೦೧೮ರಲ್ಲಿ ಅನುಮೋದನೆಯನ್ನು ನೀಡಿದೆ.
ವಿಧಾನ ಪರಿಷತ್ತಿನ ಶಾಸಕರು ಸದನದ ಒಳಗೆ ಮತ್ತು ಹೊರಗೆ ವೃಂದ ಮತ್ತು ನೇಮಕಾತಿ ತಿದ್ದುಪಡಿ ಪ್ರಶ್ನೆವಾಳಿಗಳನ್ನು ಕೇಳಿದಾಗ ಇಲ್ಲಿಯ ತನಕ ಪ್ರತಿ ಬಾರಿಯೂ ಇಲಾಖೆಯಿಂದ ನೀಡುವ ಉತ್ತರ ಅಂತಿಮ ಹಂತದಲ್ಲಿದೆ ಎಂದು ಆದರೆ ಇಲ್ಲಿಯ ತನಕ ಸಚಿವ ಸಂಪುಟದ ಅನುಮೋದನೆ ಪಡೆದು, ಕರಡು ನಿಯಮಗಳನ್ನು ಪ್ರಕಟಿಸಿ ಆದೇಶ ಮಾಡಲಿಲ್ಲ ಎಂದು ವಿಷಾಧಿಸಿದ್ದಾರೆ.
ಕೇಂದ್ರ ಸರ್ಕಾರವು ಫಿಟ್ ಇಂಡಿಯಾ ಮತ್ತು ಖೇಲೋ ಇಂಡಿಯಾ ಕ್ರೀಡಾ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದು ಇದರ ಜೊತೆಯಲ್ಲಿ ಯೋಗ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಆದರೆ ಶಾಲೆಗಳಲ್ಲಿ ಬೋಧನೆ ಮಾಡಲು ಬಹುತೇಕ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಹುದ್ದೆಗಳನ್ನು ಸೃಜನೆಯಾಗಿರುವುದಿಲ್ಲ ಎಂದರು.
ಮುಖ್ಯ ಮಂತ್ರಿಗಳು, ಶಿಕ್ಷಣ ಸಚಿವರು, ವಿಧಾನ ಸಭೆ, ವಿಧಾನ ಪರಿಷತ್ತಿನ ಶಾಸಕರು ಹಾಗೂ ಇಲಾಖೆಯ ಅಧಿಕಾರಿಗಳು ಈ ರಾಜ್ಯದ ದೈಹಿಕ ಶಿಕ್ಷಣ ಶಿಕ್ಷಕರನ್ನು ಹೋರಾಟಕ್ಕೆ ಅವಕಾಶ ನೀಡದೆ ನಮ್ಮ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸುವ ಮೂಲಕ ರಾಜ್ಯದ ಸಮಸ್ತ ದೈಹಿಕ ಶಿಕ್ಷಣ ಶಿಕ್ಷಕರ ಹಿತ ಕಾಯಲು ಮನವಿ ಮಾಡಿದ್ದಾರೆ.
ಕಲಬುರಗಿ: ವೀರಶೈವ ಲಿಂಗಾಯತ ಮಹಾ ವೇದಿಕೆ ಕಲಬುರ್ಗಿ (ರಿ )ಜಿಲ್ಲಾ ಸಮಿತಿವತಿಯಿಂದ ನವೆಂಬರ್ 14ರಂದು 8ನೇ ಪೀಠಾಧಿಪತಿಗಳು ಪೂಜ್ಯ ಡಾ.…
ಕಲಬುರಗಿ: ಜಾನಪದ ಕಲಾವಿದರಿಗೆ ಸರ್ಕಾರ ಮೀಸಲಾತಿ ಕಲ್ಪಿಸಲಿ ಕಲಾವಿದರು ಇವತ್ತು ಸಂಕಷ್ಟ ಪರಿಸ್ಥಿತಿಯಲ್ಲಿದಾರೆಂದು ಡಾ.ವಾಸುದೇವ ಸೇಡಂ ಕಳವಳ ವ್ಯಕ್ತಪಡಿಸಿದರು. ನಗರದ…
ಕಲಬುರಗಿ: ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿರುವ ಮೆ. ಸಿದ್ದಸಿರಿ ಸೌಹಾರ್ದ ಸಹಕಾರಿ ನಿಯಮಿತ ಎಥೆನಾಲ್ ಕಾರ್ಖಾನೆಯು ಸ್ಥಗಿತಗೊಂಡಿದ್ದರಿಂದ ರೈತರ ಹಿತದೃಷ್ಠಿಯಿಂದ ಪ್ರಸಕ್ತ…
ಕಲಬುರಗಿ; ನವೆಂಬರ್ 14ರಂದು ನಡೆಯಲಿರುವ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರ 90ನೇ ಜನ್ಮದಿನಾಚರಣೆ, ನವೆಂಬರ್ 22ರಂದು ಶರಣಬಸವೇಶ್ವರ…
ಕಲಬುರಗಿ: ನಾಟ್ಯಸಾರ್ವಭೌಮ ಡಾ.ಶಿವರಾಜಕುಮಾರ ಅವರ ಅಭಿನಯದ ಅದ್ದೂರಿ ಆ್ಯಕ್ಷನ್, ಥ್ರಿಲ್ಲರ್ ಇರುವ `ಭೈರತಿ ರಣಗಲ್’ ಸಿನಿಮಾದಲ್ಲಿ ಲೇಖಕ, ಪತ್ರಕರ್ತ, ರಂಗ…
ಕಲಬುರಗಿ ನಗರದ ಗಂಜ್ ಪ್ರದೇಶದಲ್ಲಿರುವ ಲಾಹೋಟಿ ಮೋಟಾರ್ಸ್ ಶೋರೂಂನಲ್ಲಿ ಮಾರುತಿ ಅರೇನಾ ಕಂಪನಿಯ ದಿ ಡಾಸ್ಲಿಂಗ್ ನ್ಯೂ ಡಿಸೈರ್ ಕಾರ್…