ಕಲಬುರಗಿ : ಡೊಂಗರಗಾoವ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ವತಿಯಿಂದ ನೀಡಲ್ಪಡುವ “ಅವ್ವ ಪ್ರಶಸ್ತಿ “ಪ್ರದಾನ ಹಾಗೂ ಕೃತಿ ಲೋಕಾರ್ಪಣೆ ಸಮಾರಂಭವನ್ನು ಸೆಪ್ಟೆಂಬರ 11 ರಂದು ರಂಗಾಯಣ ಸಭಾಂಗಣದಲ್ಲಿ ಬೆಳಿಗ್ಗೆ 10.45 ಕ್ಕೆ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ.ಮಲ್ಲೆಪುರಂ ಜಿ.ವೆಂಕಟೇಶ ಅವರು 6ನೇ ವರ್ಷದ ಪ್ರಶಸ್ತಿ ಪ್ರದಾನ ಮಾಡಲಿದ್ದು,ಡಾ. ಶರಣಬಸಪ್ಪ ವಡ್ಡನಕೇರಿ ಅವರು ರಚಿಸಿದ ಏಳು ಪುಸ್ತಕಗಳನ್ನು ಸಿದ್ದಲಿಂಗೇಶ್ವರ ಪ್ರಕಾಶನದ ಮಾಲಿಕರಾದ ಬಸವರಾಜ ಕೊನೇಕ ಅವರು ಬಿಡುಗಡೆಗೊಳಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಂಗಾಯಣದ ನಿರ್ದೇಶಕರಾದ ಪ್ರಭಾಕರ ಜೋಶಿ,ನೀರಾವರಿ ಇಲಾಖೆಯ ನಿವೃತ್ತ ಸಹಾಯಕ ಆಡಳಿತಾಧಿಕಾರಿ ಕೆ. ವೀರಣ್ಣ ಅವರು ಭಾಗವಹಿಸಲಿದ್ದು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಿರಿಯ ಉಪಾಧ್ಯಕ್ಷರಾದ ಅಪ್ಪಾರಾವ ಅಕ್ಕೋಣಿ ವಹಿಸಿಕೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ಡಾ. ಎಚ್. ಟಿ ಪೋತೆ, ಸಿದ್ದರಾಮ ಹೊನಕಲ್, ಡಾ.ಸತೀಶ ಕುಮಾರ ಹೊಸಮನಿ, ಡಾ. ವಿಜಯ ಕುಮಾರಿ ಕರಿಕಲ್, ಸಿದ್ದಪ್ಪ ತಳ್ಳಳ್ಳಿ, ಹಾಗೂ ಶಶಿಕಲಾ ಮಾಲಿ ಪಾಟೀಲ ಅವರಿಗೆ “ಅವ್ವ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತಿದೆ. ಎಂದು ಪ್ರತಿಷ್ಠಾನ ಅಧ್ಯಕ್ಷರಾದ ಡಾ. ಶರಣಬಸಪ್ಪ ವಡ್ಡನಕೇರಿ ಹಾಗೂ ಸಂಚಾಲಕ ಡಾ. ನಾಗಪ್ಪ ಗೋಗಿ ತಿಳಿಸಿದ್ದಾರೆ.
ಕಲಬುರಗಿ: ನಾಟ್ಯಸಾರ್ವಭೌಮ ಡಾ.ಶಿವರಾಜಕುಮಾರ ಅವರ ಅಭಿನಯದ ಅದ್ದೂರಿ ಆ್ಯಕ್ಷನ್, ಥ್ರಿಲ್ಲರ್ ಇರುವ `ಭೈರತಿ ರಣಗಲ್’ ಸಿನಿಮಾದಲ್ಲಿ ಲೇಖಕ, ಪತ್ರಕರ್ತ, ರಂಗ…
ಕಲಬುರಗಿ ನಗರದ ಗಂಜ್ ಪ್ರದೇಶದಲ್ಲಿರುವ ಲಾಹೋಟಿ ಮೋಟಾರ್ಸ್ ಶೋರೂಂನಲ್ಲಿ ಮಾರುತಿ ಅರೇನಾ ಕಂಪನಿಯ ದಿ ಡಾಸ್ಲಿಂಗ್ ನ್ಯೂ ಡಿಸೈರ್ ಕಾರ್…
ಕಲಬುರಗಿ: ನಗರದ ಜೀಮ್ಸ್ ಆಸ್ಪತ್ರೆಯಲ್ಲಿರುವ ಇಂದಿರಾ ಕ್ಯಾಂಟಿನ್‍ನಲ್ಲಿ ಕಳಪೆ ಆಹಾರ ವಿತರಣೆ ಮಾಡುತ್ತಿರುವುದನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ ಜೈ ಕನ್ನಡಿಗರ ಸೇನೆಯಿಂದ…
ಕಲಬುರಗಿ: ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾ ಸಮಿತಿವತಿಯಿಂದ ನವೆಂಬರ್ 14ರಂದು 8ನೇ ಪೀಠಾಧಿಪತಿಗಳು ಪೂಜ್ಯ ಡಾ. ಶ್ರೀ ಶರಣಬಸಪ್ಪ…
ವಿಜಯನಗರ (ಹೊಸಪೇಟೆ):ಪ್ರಸಕ್ತ ವರ್ಷದಲ್ಲಿ ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೆಕೆಆರ್ ಡಿಬಿಯಿಂದ ರೂ. 348 ಕೋಟಿ ನೀಡಲಾಗಿದೆ ಎಂದು ಕಲ್ಯಾಣ…
ಕಲಬುರಗಿ; ಮೌನವಾಗಿರುವವರೆಲ್ಲ ದಡ್ಡರಲ್ಲ, ತುಂಬಾ ಮಾತನಾಡುವವರೆಲ್ಲ ಬುದ್ಧಿವಂತರಲ್ಲ, ಮಾತಿಗೆ ಒಂದರ್ಥವಿದ್ದರೆ, ಮೌನಕ್ಕೆ ಸಾವಿರ ಅರ್ಥವಿದೆ, ಅದರಂತೆ ಬಬಲಾದ ಗುರುಪಾದಲಿಂಗ ಪೂಜ್ಯರು…