ಬಿಸಿ ಬಿಸಿ ಸುದ್ದಿ

ಆನಂದದಾಸರ ಸ್ಮರಣೋತ್ಸವ: ಕವನ ಸಂಕಲನ ಬಿಡುಗಡೆ

ಸುರಪುರ: ನಗರದ ಕನ್ನಡ ಸಾಹಿತ್ಯ ಸಂಘದ ಶ್ರೀ ರಾಜಾ ಮದನಗೋಪಾಲ ಗೋಪಾಲ ನಾಯಕ ಸಭಾಂಗಣದಲ್ಲಿ ಶನಿವಾರದಂದು ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಸಂಘ ಸಹಸ್ರ ಚಂದ್ರಮಾನೋತ್ಸವ ಉದ್ಘಾಟನೆ ಹಾಗೂ ಸುರಪುರ ಆನಂದದಾಸರ ಸ್ಮರಣೋತ್ಸವ ಮತ್ತು ಸಾಹಿತಿ ದಿ.ಬೀರಣ್ಣ ಕೆ ವಿರಚಿತ “ಬಾಬಸಿರಿ” ಕವನ ಸಂಕಲನ ಬಿಡುಗಡೆ ಸಮಾರಂಭ ಜರುಗಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಹಿತಿ ಹಾಗೂ ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಮಾತನಾಡಿ, ಸುರಪುರ ತಾಲೂಕು ಕೇವಲ ರಾಜ್ಯ ಹಾಗೂ ದೇಶ ಮಾತ್ರವಲ್ಲ ಇಡೀ ವಿಶ್ವದಲ್ಲಿ ಪ್ರಮುಖವಾದ ಸ್ಥಳವಾಗಿದ್ದು ಈ ತಾಲೂಕಿನ ಗ್ರಾಮಗಳಾದ ಬೂದಿಹಾಳ ಮತ್ತು ಇಸ್ಲಾಂಪುರ ಅತ್ಯಂತ ಪುರಾತನ ಸ್ಥಳಗಳೆಂದು ಗುರುತಿಸಲಾಗಿವೆ,ಪುರಾತತ್ವ ಇತಿಹಾಸಕಾರರು ಕೈಗೊಂಡ ಸಂಶೋಧನೆಯಿಂದ ಬೂದಿಹಾಳ ಗ್ರಾಮದಲ್ಲಿನ ಬೂದಿಗುಡ್ಡಗಳು ೩ಲಕ್ಷ ವರ್ಷಗಳು ಹಳೆಯವು ಎಂದು ಗುರುತಿಸಲಾಗಿದ್ದು ದ್ವಾಪರಯುಗ ಕಾಲದ್ದಾಗಿರಬಹುದು ಊಹಿಸಲಾಗಿದ್ದು ಹಾಗೂ ಇಸ್ಲಾಂಪುರ ಗ್ರಾಮದಲ್ಲಿ ದೊರೆತಿರುವ ಪ್ರಾಣಿಯ ಪಳೆಯುಳಿಕೆ ೧೨ಲಕ್ಷ ವರ್ಷಗಳ ಹಿಂದಿನದ್ದಾಗಿದೆ ಎಂದು ಗುರುತಿಸಲಾಗಿದೆ ಹೀಗಾಗಿ ಸುರಪುರ ಇಡೀ ವಿಶ್ವದಲ್ಲಿ ಪ್ರಮುಖ ಸ್ಥಳವಾಗಿದೆ ಎಂದರು.

ರಾಜಾಶ್ರಯ ಪಡೆದಿದ್ದ ದಾಸರು ಆನಂದದಾಸರು ಆನಂದ ದಾಸರ ಕುರಿತು ಮಾತನಾಡಿ ಕಲೆ,ಸಾಹಿತ್ಯ,ಸಂಗೀತದಲ್ಲಿ ಸಮೃದ್ಧ ಪರಂಪರೆಯನ್ನು ಹೊಂದಿರುವ ಸುರಪುರ ಸಂಸ್ಥಾನದ ರಾಜಾಶ್ರಯ ಪಡೆದಿದ್ದ ಸುರಪುರದ ಆನಂದದಾಸರು ಮೂಲತ: ಮಾನ್ವಿ ತಾಲೂಕಿನ ಚೀಕಲಪರ್ವಿ ಗ್ರಾಮದವಾಗಿದ್ದು ರಾಜಾಶ್ರಯ ಪಡೆದುಕೊಂಡಿರುವ ಏಕೈಕ ದಾಸರಾಗಿದ್ದಾರೆ ಎಂದು ಹೇಳಿದ ಅವರು, ಇವರಲ್ಲಿದ್ದ ಅಪಾರ ಪಾಂಡಿತ್ಯವನ್ನು ಕಂಡು ಸುರಪುರ ಅರಸರು ಹಾಗೂ ಮೈಸೂರು ಮಹಾರಾಜರು ಕನಕಾಭಿಷೇಕ ನೆರವೇರಿಸಿದರು ಅವಿಭಜಿತ ಕಲಬುರಗಿ ಜಿಲ್ಲೆಗೆ ದಾಸ ಸಾಹಿತ್ಯ ಪರಂಪರೆ ಶುರುವಾಗಿದ್ದು ಆನಂದದಾಸರಿಂದಲೇ ಎಂದು ಹೇಳಿದ ಅವರು ಆನಂದದಾಸರ ಸಾಹಿತ್ಯವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಈ ದಿಸೆಯಲ್ಲಿ ಸಾಹಿತ್ಯ ಹಾಗೂ ಇವರ ಪರಂಪರೆ ಕುರಿತು ಯುವಕರು ಸಂಶೋಧನೆ ಕೈಗೊಳ್ಳಬೇಕು ಎಂದರು.

ಲಕ್ಷ್ಮಣ ಶಾಸ್ತ್ರಿ ಹೆಬ್ಬಾಳ ಕಾರ್ಯಕ್ರಮು ಉದ್ಘಾಟಿಸಿದರು, ಸಾಹಿತಿ ದಿ.ಬೀರಣ್ಣ.ಬಿ.ಕೆ ವಿರಚಿತ “ಬಾಬಸಿರಿ” ಕವನ ಸಂಕಲನವನ್ನು ಹೈದ್ರಾಬಾದ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಲಿಂಗಪ್ಪ ಗೋನಾಲ ಬಿಡುಗಡೆಗೊಳಿಸಿದರು, ಸಾಹಿರಿ ಕನಕಪ್ಪ ವಾಗಣಗೇರಿ ಪುಸ್ತಕ ಪರಿಚಯ ನಡೆಸಿಕೊಟ್ಟರು, ಕಲಬುರಗಿಯ ಸಾಹಿತಿ ಸಂಧ್ಯಾ ಹೊನಗುಂಟಿಕರ್, ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಹಾಗೂ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಂಗೀತ ವಿದುಷಿ ನಿರ್ಮಲಾ ರಾಜಗುರು ಹಾಗೂ ಶ್ರೀಹರಿರಾವ ಆದವಾನಿರವರು ಆನಂದದಾಸರ ರಚನೆಗಳನ್ನು ಹಾಡಿದರು, ಸಂಘದ ಅಧ್ಯಕ್ಷ ಹಾಗೂ ಹೈಕೋರ್ಟ ನ್ಯಾಯವಾದಿ ಜೆ.ಅಗಸ್ಟಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಜಾಲವಾದಿ ನಿರೂಪಿಸಿದರು ರಾಜಶೇಖರ ದೇಸಾಯಿ ಸ್ವಾಗತಿಸಿದರು ಜಯಲಲಿತಾ ಪಾಟೀಲ ವಂದಿಸಿದರು, ಭಾಗ್ಯಶ್ರೀ ಕೆ.ಬೀರಣ್ಣ, ಕನ್ನಡ ಸಾಹಿತ್ಯ ಪರಿಷತ್ ಅಧ್ಕಕ್ಷ ಶರಣಬಸವ ಯಾಳವಾರ, ಸಾಹಿತಿಗಳಾದ ಡಾ.ಸತ್ಯನಾರಾಯಣ ಆಲದಾರ್ತಿ, ಪ್ರಕಾಶಚಂದ ಜೈನ, ಡಾ.ಮಹಾದೇವ ಪಟ್ಟಣಶೆಟ್ಟಿ, ನಬೀಲಾಲ್ ಮಕಾನದಾರ್, ಕುತುಬುದ್ದಿನ್ ಅಮ್ಮಾಪುರ, ಮಹಾಂತೇಶ ಗೋನಾಲ, ಎ.ಕಮಲಾಕರ, ಹೆಚ್.ರಾಠೋಡ, ದೇವು ಹೆಬ್ಬಾಳ, ರಾಘವೇಂದ್ರ ಭಕ್ರಿ, ರವಿಕಾಂತ ಹಾಗೂ ಇತರರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

10 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

20 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

20 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

20 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago