ಶಹಾಬಾದ: ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದ ಚಿಂತಕರು ಹಾಗೂ ಅಭಿವೃದ್ಧಿ ಕ್ರಾಂತಿಯ ಹರಿಕಾರರಾಗಿದ್ದರು.ಇಂತಹ ಗುರುಗಳ ಆದರ್ಶಗಳ ಪಾಲನೆಯನ್ನು ಎಲ್ಲರೂ ಮಾಡಬೇಕಿದೆ ಎಂದು ಮುಖಂಡ ಸುರೇಶ ಮೆಂಗನ್ ಹೇಳಿದರು.
ಅವರು ಶನಿವಾರ ಭಂಕೂರ ಗ್ರಾಮದಲ್ಲಿ ಈಡಿಗ ಸಮಾಜದ ವತಿಯಿಂದ ಆಯೋಜಿಸಲಾದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ನಿಮಿತ್ತ ನಾರಾಯಣ ಗುರುಗಳ ನಾಮಫಲಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೇರಳದಲ್ಲಿ ಜನಿಸಿದಂತಹ ನಾರಾಯಣ ಗುರು ಅವರು ಆಗಿನ ಸಂದರ್ಭದಲ್ಲಿ ಸಮಾಜದಲ್ಲಿನ ಅಸಮಾನತೆ, ಜಾತಿ ಜಾತಿಗಳ ಮಧ್ಯ ಇದ್ದ ವೈಷಮ್ಯ ಮತ್ತು ಅಸ್ಪøಶ್ಯತೆ, ಧರ್ಮಗಳ ಬಗ್ಗೆ ಭಿನ್ನಬೇಧ, ತಾರತಮ್ಯ ನಡೆಯುತ್ತಿತ್ತು. ಅಂತಹ ಸಂದರ್ಭದಲ್ಲಿ ಅವರು ಸಮಾಜಕ್ಕೆ ತಮ್ಮದೇ ಆದ ತತ್ವ ಸಿದ್ಧಾಂತಗಳ ಮೂಲಕ ಅಸಮಾನತೆ ಹೋಗಲಾಡಿಸಲು ಸಾಕಷ್ಟು ಪ್ರಭಾವ ಬೀರಿದ್ದಾರೆ ಎಂದು ತಿಳಿಸಿದರು.
ಸ್ಪಶ್ಯತೆ, ಅಜ್ಞಾನ, ಅಂಧಶ್ರದ್ಧೆ ವಿರುದ್ಧ ಹೋರಾಟ ನಡೆಸಿ, ಸಮ ಸಮಾಜ ನಿರ್ಮಾಣಕ್ಕಾಗಿ ದಿಟ್ಟ ಹೆಜ್ಜೆ ಇಟ್ಟ ನಾರಾಯಣ ಗುರು ಅವರ ಚಿಂತನೆಗಳು, ತತ್ವಾದರ್ಶಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿವೆ. ಅವರ ತತ್ವಾದರ್ಶ, ಚಿಂತನೆ, ಸಿದ್ದಾಂತಗಳ ಮೂಲಕ ಸಮಾಜದ ಸುಧಾರಣೆ ಮಾಡಲು ನಾವೆಲ್ಲರೂ ಹೆಚ್ಚಿನ ಪ್ರಯತ್ನ ಮಾಡೋಣ ಎಂದರು.
ಗ್ರಾಪಂ ಸದಸ್ಯ ಲಕ್ಷ್ಮಿಕಾಂತ ಕಂದಗೂಳ ಹಾಗೂ ಈರಣ್ಣ ಕಾರ್ಗಿಲ್ ಮಾತನಾಡಿ, ಮಹನೀಯರ ಆದರ್ಶಗಳು ಒಂದು ಜಾತಿಗೆ ಸೀಮಿತವಲ್ಲ. ನಾರಾಯಣ ಗುರು ಅವರ ಆದರ್ಶ, ಮೌಲ್ಯಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಖಂಡರಾದ ಶರಣಬಸಪ್ಪ ಧನ್ನಾ, ಮುಜಾಹಿದ್ ಹುಸೇನ್, ಈರಣ್ಣ ಗುಡೂರ್,ಶರಣಗೌಡ ದಳಪತಿ,ಶಿವಯೋಗಿ ಬಣ್ಣಾಕರ್, ಭರತ್ ಧನ್ನಾ, ಮಲ್ಲಿಕಾರ್ಜುನ ಸಿರಗೊಂಡ, ಈಡಿಗ ಸಮಾಜದ ಉಪಾಧ್ಯಕ್ಷ ಭೀಮಯ್ಯ ಗುತ್ತೆದಾರ,ಉಮೇಶ.ಎಸ್.ಗುತ್ತೆದಾರ,ವಿಜಯಕುಮಾರ ಗುತ್ತೆದಾರ, ಶಿವಕುಮಾರ, ಸಾಬಯ್ಯ, ನಾಗೇಶ ಕಲಾಲ, ಪ್ರಶಾಂತ,ವಿಶಾಲ,ನಾಗೇಶ, ರೋಹಿತ್,ಮಾಲಿಕಯ್ಯ, ಶಿವಕುಮಾರ, ಆಕಾಶ, ತಿಪ್ಪಯ್ಯ, ರಾಜು ಬೊಮ್ಮನಳ್ಳಿ, ದೇವೆಂದ್ರಪ್ಪ, ಗಂಗಾರಾಮ, ಮುನ್ನಾ ಪಟೇಲ್,ಯಲ್ಲಾಲಿಂಗ, ಶವಯ್ಯ,ಬಸವರಾಜ ಸೇರಿದಂತೆ ಅನೇಕರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…