ಶುಕ್ರವಾರ ಸಹೋದರನ್ನ ಹತ್ತಿರ 200 ಪಡೆದು ಕೆಲಸಕ್ಕೆ ತೆರಳಿದ ಭೀಮಾಶಂಕ. ಕೆಲಸ ಬೇಕಾದರೆ ದಿನನಿತ್ಯ 200 ರೂ. ಡಿಪೋ ಅಧಿಕಾರಿಗೆ ಲಂಚ ನೀಡಿದರೆ ಮಾತ್ರ ಕೆಲಸ ಮಾಡಬೇಕಾಗಿತ್ತು. ಡಿಪೋ ಅಧಿಕಾರಿ. ಡಿಟಿಒ. ಡಿಒ ಅವರಿಂದ ದಿನನಿತ್ಯ ಕಿರುಕುಳಕ್ಕೆ ಬೇಸತ್ತು ಸಾವಿಗೆ ಶರಣರಾಗಿದ್ದಾರೆ. – ಮಂಜುಳ, ಮೃತ ಚಾಲಕನ ಪತ್ನಿ.
ಕಲಬುರಗಿ: ಬಸ್ ಡಿಪೋ ಅಧಿಕಾರಿಗಳ ಕಿರುಕುಳಕ್ಕೆ ಚಾಲಕ ಕಂ. ನಿರ್ವಾಹಕ ಸಿಬ್ಬಂದಿ ಓರ್ವ ಬಸ್ ಘಟಕದಲ್ಲಿ ಮುಖಕ್ಕೆ ಬಟ್ಟೆ ಸುತ್ತಿಕೊಂಡು ನೇಣಿಗೆ ಶರಣಾದ ಘಟನೆ ಸೇಡಂ ಪಟಣ್ಣದಲ್ಲಿ ನಡೆದಿದೆ.
ಅಫಜಲಪೂರ ತಾಲ್ಲೂಕಿನ ಗುಡೂರ ಗ್ರಾಮದ ನಿವಾಸಿ ಭೀಮಶಂಕರ್ (42) ಆತ್ಮಹತ್ಯೆಗೆ ಶರಣಾದ ಸಿಬ್ಬಂದಿ. ಈ ಹಿಂದೆ ಕಾಳಗಿ ಡಿಪೋನಲ್ಲಿ ಕಾರ್ಯಾನಿರ್ವಹಿಸುತ್ತದ್ದ. ಎರಡು ತಿಂಗಳ ಹಿಂದೆ ಸೇಡಂ ಡಿಪೋಗೆ ವರ್ಗಾವಣೆಯಾಗಿದ್ದ ಭೀಮಾಶಂಕರ. ಶುಕ್ರವಾರ ತಡ ರಾತ್ರಿ ಆತ್ಮಹತ್ಯೆಗೆ ಶರಣರಾಗಿದ್ದಾರೆ ಎನ್ನಲಾಗಿದೆ. ಮೃತ ಸಿಬ್ಬಂದಿಗೆ ಪತ್ನಿ ಮತ್ತು ಇಬ್ಬರೂ ಮಕ್ಕಳು ಇದ್ದಾರೆ.
ದಿನನಿತ್ಯ ಕೆಲಸದಿಂದ ಮನೆಗೆ ಬಂದಾಗ ಡಿಪೋ ಅಧಿಕಾರಿ ಡಿಟಿಒ ಹಾಗೂ ಡಿಒ ಅವರ ಕಿರುಕುಳಕ್ಕೆ ಬೇಸತ್ತು ಹೋಗಿದೇನೆ. ಸರಿಯಾಗಿ ಕೆಲಸ ನೀಡದೇ ಲಂಚ ಬೀಟ್ಟರೆ ಬೇರೇನೂ ಮಾತನಾಡಲ್ಲ ಎಂದು ಪತ್ನಿಯ ಎದುರು ತನ್ನ ಅಳಲು ಹೇಳಿಕೊಳ್ಳುತ್ತಿದ್ದರು ಎಂದು ಮೃತನ ಪತ್ನಿ ಮಂಜುಳ ಆರೋಪಿಸಿದ್ದಾರೆ.
ಸೇಡಂ ಡಿಪೋಗೆ ಬಂದು 2 ತಿಂಗಳು ಮೆಲ್ಪಟ್ಟಿದೆ ಇಲ್ಲ ವರೆಗು ಸಂಬಳ ನೀಡದೇ ಡಿಪೋ ಅಧಿಕಾರಿ ಕಿರುಕುಳ ನೀಡಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಡಿಪೋ ಅಧಿಕಾರಿಗಳು ಏನೋ ಮಾಡಿದ್ದಾರೆ ಎಂದು ಭೀಮಶಂಕರ್ ಸಹೋದರ ಸಿಥಾರ್ತ್ ಆರೋಪಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಸಿಪಿಐ ಆನಂದರಾವ್, ಪಿಎಸ್ಐ ಸೋಮಲಿಂಗ ಒಡೆಯರ್ ಭೇಟಿ ನೀಡಿ ಪರೀಶಿಲನೆ ನಡೆಸಿ. ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…