ಬಿಸಿ ಬಿಸಿ ಸುದ್ದಿ

ದುಡಿಯುವ ಜನ ಒಂದಾಗಿ ಬಾಳುವುದರಿಂದ ಸಮಸ್ಯೆ ಪರಿಹಾರ: ವೀರುಪಾಕ್ಷಪ್ಪ ಚೆಟ್ಟಿ

ಕಲಬುರಗಿ: ದುಡಿಯುವ ಜನ ಒಂದಾಗಿ ಬಾಳುವುದರಿಂದ ಸಮಸ್ಯೆ ಪರಿಹರಿಸುವಕೊಳ್ಳುವ ಶಕ್ತಿ ಇಮ್ಮಡಿಗೊಳಿಸುವದಲ್ಲದೆ ದೇಶದ ಆರ್ಥಿಕ ಸ್ಥಿತಿ ಸುಭದ್ರಗೊಳಿಸುತ್ತದೆ ಎಂದು ಅಖಿಲ ಭಾರತ ಜೀವ ವಿಮಾ ನಿಗಮದ ಪ್ರತಿನಿಧಿಗಳ ಸಂಘಟನೆಯ (LICAOI)) ಸಿ.ಎ.ಬಿ. ಶಾಖೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವೀರುಪಾಕ್ಷಪ್ಪ ಚೆಟ್ಟಿ ಹೇಳಿದರು.

ನಿನ್ನೆ ಎಲ್.ಐ.ಸಿ. ವೃತ್ತಿಪರ ಪ್ರತಿನಿದಿ ಶಾಖೆಯಲ್ಲಿ ನೂತನ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಾ ಪ್ರತಿಯೊಂದು ಕ್ಷೇತ್ರದಲ್ಲಿ ದುಡಿಯುವ ಜನ ಸಂಘಟನಾತ್ಮಕವಾಗಿ ಹೋರಾಟ ಮಾಡುವುದರೊಂದಿಗೆ ತಮ್ಮ ಹಕ್ಕುಗಳನ್ನು ಪಡೆಯುವ ಕಾರ್ಯವಾಗಬೇಕಾಗಿದೆ. ಏಕೆಂದರೆ ಯಾವುದೇ ಸೌಲಭ್ಯಗಳು ಪಡೆಯಬೇಕಾದರೆ ಕೇಳಿ ಪಡೆಯುವದಕ್ಕಿಂತ ಹೋರಾಟ ಮಾಡಿ ಪಡೆಯುವ ಪರಿಸ್ಥಿತಿ ಬಂದಿದೆ. ಇಂದಿನ ಕಾಲದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯು ಸಂಘಟನೆ, ಹೋರಾಟವಿಲ್ಲದೆ ಬದುಕು ಸಾಗಿಸುವುದ ಕಠಿಣವಾಗಿದೆ. ಹೋರಾಟದಿಂದ ಪಡೆದ ಸುಖ, ಸಂತೋಷ ನಮ್ಮ ಬದುಕು ಸುಂದರಗೊಳಿಸುತ್ತದೆ ಅದಕ್ಕಾಗಿ ನಾವೆಲ್ಲರೂ ಒಂದಾಗಿ ಕೆಲಸ ಮಾಡುವುದರೊಂದಿಗೆ ಸಮೃದ್ಧ ಸಮಾಜ ಕಟ್ಟೋಣ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಪದಾಧಿಕಾರಿಗಳಾದ ಅಧ್ಯಕ್ಷ ವೀರುಪಾಕ್ಷಪ್ಪ ಚೆಟ್ಟಿ, ಉಪಾಧ್ಯಕ್ಷ ರವೀಂದ್ರಕುಮಾರ ಮುಕಾಶಿ, ಕಾರ್ಯದರ್ಶಿ ಶರಣಬಸಪ್ಪ ಬಿರಾದಾರ, ಸಹ ಕಾರ್ಯದರ್ಶಿ ಆನಂದಕುಮಾರ ಜಿ., ಖಜಾಂಚಿ ಮಲ್ಲಿನಾಥ ಬೆಣ್ಣೆಶಿರೂರ, ಕಾನೂನು ಸಲಹೆಗಾರರಾಗಿ ಹಣಮಂತರಾಯ ಎಸ್. ಅಟ್ಟೂರ, ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ರಘುನಂದನ ಕುಲಕರ್ಣಿ, ಕಲ್ಲಪ್ಪಾ ಮಿತ್ರ, ಮಲ್ಲಯ್ಯ ಸ್ವಾಮಿ, ಅಮೃತಪ್ಪಾ ಬಿರಾದಾರ, ಮಾಣಿಕ ಪತಂಗೆ, ಬಸವರಾಜ ಟೆಂಗಳಿ ಮಹಿಳಾ ಸದಸ್ಯರಾಗಿ ರಾಜೇಶ್ವರಿ ಜೇವರ್ಗಿ ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ಮಶಾಕ್ ಸಾಬ್ ತೊನಸಳ್ಳಿ, ದಶರಥ ದುಮ್ಮನಸುರ, ವಿಜಯಕುಮಾರ ಹೊಸಮನಿ, ಪರಮೇಶ್ವರ ಚಿಂಚೋಳಿ, ಶಿವಶರಣಪ್ಪ ಬಿರಾಳ, ಪರಮೇಶ್ವರ ಮಡ್ಡೆ, ಶಿವರಾಜ ಪೂಜಾರಿ, ಸಂಗಣ್ಣ ನಾಗಶೆಟ್ಟಿ, ಸಿದ್ದಯ್ಯ ಸ್ವಾಮಿ, ನಿಂಗಮ್ಮ ಇದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago