ಮೂಡಬಿದರೆಯ ಮೋಹನ್ ಆಳ್ವಾ ಅವರು ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ತಪ್ಪೇನು ? ಎಂಬ ಆಶಯಗಳ ಹಿನ್ನೆಲೆಯಲ್ಲಿ ಬರೆದ ಸಣ್ಣ ಬರಹಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಹಲವು ಪ್ರತಿಕ್ರಿಯೆಗಳು ಸೂಕ್ಷ್ಮಾತಿ ಸೂಕ್ಷ್ಮ ವಿದ್ದುದ್ದರಿಂದ ಅವರೆಲ್ಲ ನೇರ ನನ್ನನ್ನು ಸಂಪರ್ಕಿಸಿ ಮಾತಾಡಿದ್ದಾರೆ. ಅಭಿಪ್ರಾಯ ವ್ಯಕ್ತಪಡಿಸಿದ ಎಲ್ಲರಿಗೂ ನನ್ನ ಗೌರವದ ಶರಣುಗಳು.
ಮೋಹನ ಆಳ್ವಾ ಕೇವಲ ಒಬ್ಬ ವ್ಯಕ್ತಿಯಾಗಿದ್ದರೆ ಆತನನ್ನು ಪುರೋಹಿತ ಪ್ರಭಾವದ ವಿಚಾರಗಳಿಂದ ಬದಲಿಸಬಹುದಾಗಿತ್ತು. ಆತ ಕೇವಲ ಒಬ್ಬ ವ್ಯಕ್ತಿ ಅಲ್ಲ. ಫ್ಯಾಸಿಸ್ಟ್ ವಿಚಾರಗಳಿಗೆ ತನ್ನ ನೆಲದಲ್ಲಿ ಬಹುದೊಡ್ಡ ಆರ್ಥಿಕ ಸಂಪನ್ಮೂಲ ಒದಗಿಸುವ ಶಕ್ತಿ. ಇಂಥವರು ಬದಲಾಗಬಹುದೆ ? ತಮ್ಮನ್ನು ತಾವು ತಿದ್ದಿಕೊಂಡು ಜನ ಸಾಮಾನ್ಯನ ಜೊತೆ ಬರಬಹುದೆ ? ಎಂಬುದು ನನ್ನ ಪ್ರಶ್ನೆ.
ಸರಿ ತಪ್ಪುಗಳ ಅರಿವಿಲ್ಲದ, ತಾನು ನಂಬಿದ್ದೇ ಸತ್ಯ ಎಂಬ ಅಂಗುಲಿಮಾಲನನ್ನು ಬದಲಿಸಬಹುದು. ಹೊಟ್ಡೆ ಉಪ ಜೀವನಕ್ಕೆ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಬದಲಿಸಬಹುದು. ಆದರೆ ಒಂದು ಸಿದ್ಧಾಂತಕ್ಕಾಗಿ ತನ್ನ ಆರ್ಥಿಕ ಶಕ್ತಿಯನ್ನು ವ್ಯಯಮಾಡುವವರನ್ನು ಬದಲಾಯಿಸಲು ಸಾಧ್ಯವೆ ? ಎಂಬ ಪ್ರಶ್ನೆ ನನ್ನನ್ನು ಇಡೀ ರಾತ್ರಿ ಕಾಡಿತು.
ಸಮಾಜದಲ್ಲಿ ಧರ್ಮದ – ದೇವರ ಹೆಸರಿನ ನಡೆದ ನಂಗಾನಾಚುಗಳಿಗೆಲ್ಲ ತನು ಮನ ಧನ ಮೂಲಕ ಪೋಷಿಸುವ ವ್ಯಕ್ತಿ ಎಂದಾದರೂ ಬದಲಾದ ಉದಾಹರಣೆಗಳು ಇವೆಯೆ ? ಮೋಹನ ಆಳ್ವಾ ನಾವು ನೀವೆಲ್ಲ ಬಲ್ಲಂತೆ ಈ ಎಲ್ಲಾ ಗುಣಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡ ವ್ಯಕ್ತಿ.
ಮತ್ತೆ ಕಲ್ಯಾಣ ಎಂಬ ಅಭಿಯಾನದ ಮೂಲಕ ಹೊರಟ ನಾವುಗಳು ಯಾರ ಜೊತೆ ಹೊರಟಿದ್ದೇವೆ ? ನಮ್ಮ ಹೋರಾಟ ಯಾರ , ಯಾವ ಶಕ್ತಿಯ ವಿರುದ್ಧ ? ಎಂಬ ಸ್ಪಷ್ಟವಾದ ಪರಿಕ್ಪನೆ ಇಲ್ಲದೆ ಹೋದರೆ ಹೇಗೆ ? ಯಾವುದೆ ಚಳುವಳಿಯ ಮುಖಂಡ ತಾನು ಯಾವ ಶಕ್ತಿಗಳ ವಿರುದ್ಧ ತನ್ನ ಚಳುವಳಿ ? ಎಂದು ಮೊದಲು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಕಂಡ ಕಂಡವರ ಜೊತೆ ವೇದಿಕೆ ಹಂಚಿಕೊಂಡು ಆ ವೇದಿಕೆಯಲ್ಲೆ ಅವರ ವಿರುದ್ಧ ಹರಿಹಾಯ್ದರೆ ಅದನ್ನು ನಮ್ಮ ಬದ್ಧತೆ ಎಂದು ಹೇಗೆ ಅರ್ಥೈಸುವಿರಿ ?
ಬಸವಣ್ಣನವರು ಅಂದು ಪುರೋಹಿತ ಶಕ್ತಿಗಳ ವಿರುದ್ದ ನಿಲ್ಲದೆ ಅವರ ವಿರುದ್ಧ ವಿಚಾರ ಮಂಡಿಸಿದ್ದರೆ ? ಲಿಂಗಾಯತವೆಂಬ ಚಳುವಳಿ ಕಟ್ಟಲು ಸಾಧ್ಯವಿತ್ತೆ ? ಬಸವಣ್ಣನವರಿಗೆ ತಾವು ಕಟ್ಟಬೇಕಾಗಿದ್ದ ಚಳುವಳಿಯ ರೂಪುರೇಷೆಗಳ ನೀಲನಕ್ಷೆ ತಯಾರಿ ಮಾಡಿಕೊಂಡಿದ್ದರು. ಹೀಗಾಗಿಯೇ ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ ಎಂಬ ೭೭೦ ಜನ ತಳ ಸಮುದಾಯ ಬಸವಣ್ಣನವರ ಹತ್ತಿರ ಹರಿದು ಬಂತು.
ಮತ್ತೆ ಕಲ್ಯಾಣ ಅಭಿಯಾನದ ಉದ್ದೇಶವೂ ಸಹ ಜನ ಮಾನಸದಲ್ಲಿ ಶರಣರ ತತ್ವ ಪ್ರಚುರಗೊಳಿಸುವುದು ಆಗಿದೆ. ಶಾಲಾ ಕಾಲೇಜಿನ ಮಕ್ಕಳಲ್ಲಿ ವಚನ ಸಾಹಿತ್ಯದ ಆಶಯಗಳನ್ನುವಚನ ಪರಿಚಯಿಸುವುದೇ ಆಗಿದೆ. ಸಾಣೆಹಳ್ಳಿಯ ಸ್ವಾಮೀಜಿಗಳು ಇದಕ್ಕಾಗಿ ತಮ್ಮ ಮಠದ ಶಕ್ತಿಯನ್ನು ಧಾರೆ ಎರೆಯುತ್ತಿದ್ದಾರೆ. ಮಕ್ಕಳಿಗೆ ಅತ್ಯಂತ ಕಡಿಮೆ ಬೆಲೆಯ ಪುಸ್ತಕಗಳನ್ನು ಹಂಚಿ ವಿಚಾರಗಳನ್ನು ಪ್ರಚುರಪಡಿಸಲು ಉತ್ಸಾಹಿತರಾಗಿದ್ದಾರೆ.
ಶ್ರೀ ಪಂಡಿತಾರಾಧ್ಯರ ಬದ್ಧತೆಯ ಬಗೆಗೆ ನಮಗೆ ಅನುಮಾನವೇ ಇಲ್ಲ. ಆದರೆ ಮೋಹನ್ ಆಳ್ವ ಫ್ಯಾಸಿಸ್ಟ ಶಕ್ತಿಗಳ ಹೆಬ್ಬಂಡೆ.
ಎಂಬಂತೆ ಮತ್ತೆ ಕಲ್ಯಾಣದ ಶ್ರಮ ವ್ಯರ್ಥವಾಗುವುದಿಲ್ಲವೆ ? ಇಂದು ಮತ್ತೆ ಕಲ್ಯಾಣದ ವೇದಿಕೆ ಹತ್ತಿ ಮೋಹನ್ ಆಳ್ವಾ ಸ್ವಾಮೀಜಿಗಳಿಗಿಂತಲೂ ಸುಂದರವಾಗಿ ಮಾತನಾಡಬಹುದು. ಸೇರಿದ ಜನರೆಲ್ಲ ವಾಹ್ವಾ ಅನ್ನುವಂತೆ ವಚನಗಳನ್ನೂ ಉದಾಹರಿಸಿ ಹೇಳಲೂ ಬಹುದು. ಆದರೆ
ಎಷ್ಟೋ ಜನ ಮಠಾಧೀಶರು ಮಠಗಳಲ್ಲಿ ಕುಳಿತು ಕೊಳೆತು ಹೋಗಿದ್ದಾರೆ. ಮಠದ ಸ್ವಾಮಿಗಳು ಬೆಳೆದಿದ್ದಾರೆ, ಶರಣರ ಆಶಯಗಳು ಸೊರಗಿ ಹೋಗಿವೆ. ಆದರೆ ಪಂಡಿತಾರಾಧ್ಯರು ಮಠದಲ್ಲಿ ಕುಳಿತು ಕೊಬ್ಬಿ ಹೋದವರಲ್ಲ. ಜನ ಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವ ಬಲವಾದ ತುಡಿತ ಇರುವವರು. ಜಿಲ್ಲಾ ಸಂಘಟಕರು ಕಾರ್ಯಕ್ರಮಗಳನ್ನು ರೂಪಿಸುವ ಸ್ವಾಸತಂತ್ರ್ಯ ನೀಡಿದಾಗ ಇಂಥ ಅವಗಡಗಳು ನಡೆದಿವೆ.
ಇದನ್ನು ನಾವು ನೀವೆಲ್ಲ ಪ್ರಜ್ಞಾವಂತಿಕೆಯಿಂದ ತಡೆ ಹಿಡಿಯಬೇಕು. ಎಲ್ಲವನ್ನೂ ಪಂಡಿತಾರಾಧ್ಯರ ತಲೆಗೆ ಕಟ್ಟಿ ಸುಮ್ಮನೆ ಕೂತು ನಂತರ, ಹಾರಾಟ ಚೀರಾಟ ಮಾಡಿದರೆ ಏನೂ ಆಗದು. ಮತ್ತೆ ಕಲ್ಯಾಣ ಯಶಸ್ವಿಯಾಗಲಿ. ಜನ ಮಾನಸಕ್ಕೆ ಬಸವಾದಿ ಶರಣರ ಆಶಯ ತಲುಪಲಿ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…