ಬಿಸಿ ಬಿಸಿ ಸುದ್ದಿ

ಪಿಡಿಎ ಕಾಲೇಜಿನಲ್ಲಿ ’ಕೋಡ್ ಹ್ಯಾಕಾಥಾನ’ ಕಾರ್ಯಗಾರ

 

ಕಲಬುರಗಿ: ನಮ್ಮ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ವಿಭಾಗ ಹಾಗೂ ಗಣಕತಂತ್ರ ವಿಜ್ಞಾನ ವಿಭಾಗದ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ’ಕೋಡ್ ಹ್ಯಾಕಾಥಾನ’ ಎಂಬ ೩೬ ಗಂಟೆಗಳ ಕಾರ್ಯಗಾರವನ್ನು ಟೆಕ್ಯೂಪ್-3 ರ ಅಡಿಯಲ್ಲಿ ಹಮ್ಮಿಕೊಂಡಿದ್ದು ಮೂರು ಹಂತಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರಲಾಗುವುದು.

ಈ ನಿಮಿತ್ಯ ಎರಡನೇ ಕಾರ್ಯತಂತ್ರವಾದ ಕೋಡ್ ಹ್ಯಾಕಾಥಾನ, ಟೆಕ್ಯೂಪ್-೩ ಹಾಗೂ ಪಿ.ಡಿ.ಎ. ಕಾಲೇಜಿನ ಲಾಂಛನವುಳ್ಳ ಟೀ-ಶರ್ಟ್ ಬಿಡುಗಡೆ ಹಾಗೂ ಕೋಡ್ ಹ್ಯಾಕಾಥಾನ ತಂತ್ರೋಟ್ ನ ಸಂಪೂರ್ಣ ಮಾಹಿತಿಯುಳ್ಳ ವೆಬ್ ಸೈಟ್‌ನ್ನು ಆಗಷ್ಟ್ ೧, ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮಹಾದೇವಪ್ಪ ರಾಂಪೂರೆ ಅವರ ಜನ್ಮದಿನದಂದು ಬಿಡುಗಡೆ ಮಾಡಲಾಯಿತು.

ಅಧ್ಯಕ್ಷರಾದ ಡಾ. ಭೀಮಾಶಕರ ಸಿ. ಬಿಲಗುಂದಿ ಅವರು ಗುಂಡಿ ಒತ್ತುವುದರ ಮೂಲಕ ವೆಬ್ ಸೈಟ್ಗೆ ಚಾಲನೆ ನೀಡಿದರು ಹಾಗೂ ಟೀ ಶರ್ಟ್‌ನ್ನು ಬಿಡುಗಡೆಗೊಳಿಸಿದರು. ವೇಬ್ ಸೈಟ್ ’ಕೋಡ್ ಹ್ಯಾಕಾಥಾನ’ ನ ಸಂಪೂರ್ಣ ಮಾಹಿತಿಯನ್ನು ಹೊಂದಿದ್ದು, ಪಾಲ್ಗೋಳ್ಳುವ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ತಮ್ಮ ಹೇಸರು ಹಾಗೂ ಕಾರ್ಯರೂಪಕ್ಕೆ ತರಲಾಗುವ ಪ್ರೊಜೆಕ್ಟ್ ನ ಸಂಪೂರ್ಣ ವಿವರಣೆ ನೀಡಬಹುದಾಗಿದೆ. ಚಿಠಿಠಿs.ಠಿಜಚಿeಟಿgg.ಛಿom ವೇಬ್ ಸೈಟ್ ಅಡ್ರೆಸ್ ಇದ್ದು ಭಾಗವಹಿಸುವ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳು ಇದರ ಅನುಕೂಲ ಪಡೆದುಕೊಳ್ಳಬಹುದಾಗಿದೆ. ಈ ವೆಬ್ ಸೈಟನ್ನು ಗಣಕತಂತ್ರಜ್ಞಾನ ವಿಭಾಗದ ಸಿಸ್ಟಮ್ ಮ್ಯಾನೇಜರಾದ ಡಾ. ಪ್ರಕಾಶ ಪಟ್ಟಣ ಅವರು ವಿನ್ಯಾಸಗೊಳಿಸಿದ್ದು ಇದರಲ್ಲಿ ಬಹುವಂತಹ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯವನ್ನು ಕೂಡ ಇವರೇ ವಹಿಸಿಕೊಂಡಿರುವರು.

ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೇಯ ಅಧ್ಯಕ್ಷರಾದ ಡಾ.ಭೀಮಾಶಂಕರ ಸಿ. ಬಿಲಗುಂದಿಯವರು ಮಾತನಾಡಿ ಈ ರೀತಿಯ ಕೋಡ್ ಹ್ಯಾಕಾಥಾನ ಪಿ.ಡಿ.ಎ. ಕಾಲೇಜಿನ ಇತಿಹಾಸದಲ್ಲೆ ಮೊದಲ ಬಾರಿಗೆ ನೆರವೇರಲಿದ್ದು ಸುಮಾರು ೨೦೦ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದ್ದು ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂಧ ಇದರ ಪ್ರಯೋಜನೆಯನ್ನು ಪಡೆದುಕೊಳ್ಳಬೇಕೇಂದು ಹೇಳಿದರು.

 

ಈ ಸಮಾರಂಭದಲ್ಲಿ ಪಿ.ಡಿ.ಎ. ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್.ಎಸ್. ಹೆಬ್ಬಾಳ, ಟೆಕ್ಯೂಪ ಸಂಚಾಲಕರಾದ ಪ್ರೋ. ಶರಣ ಪಡಶೆಟ್ಟಿ, ಹ್ಯಾಕಾಥಾನ ನ ಸಂಯೋಜಕರಾದ ಮಾಹಿತಿ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಹರಸೂರ, ಗಣಕತಂತ್ರ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಸುವರ್ಣ ನಂದ್ಯಾಳ, ಸಂಯೋಜಕರಾದ ಡಾ. ಜಯಶ್ರೀ ಅಗರಖೇಡ, ಅಶೋಕ ಪಾಟೀಲ, ನಾಗೇಶ ಸಾಲಿಮಠ ಮತ್ತು ಶರಣಬಸಪ್ಪಾ ಗಂದಗೆ ಅವರು ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಡಾ ಸುಜಾತಾ ತೆರದಾಳ, ಡಾ. ಶ್ರೀದೇವಿ ಸೋಮಾ, ಡಾ. ಬಾಬುರಾವ ಶೇರಿಕಾರ, ಡಾ.ಪ್ರಕಾಶ ಪಟ್ಟಣ, ಡಾ. ವಿಶ್ವನಾಥ ಬುರಕಪಳ್ಳಿ, ಉದಯ ಬಳಗಾರ, ಚೇತನಕುಮಾರ ಕಳಸ್ಕರ, ಚಂದ್ರಕಾಂತ ಬಿರಾದಾರ, ಮುಕುಂದ ಹರವಾಳಕರ, ಗೌರಿ ಪಾಟೀಲ, ಪಲ್ಲವಿ ಪಾಟೀಲ, ಕವಿತಾ ಹಾಗೂ ಇತರರು ಉಪಸ್ಥಿತರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago