ಬಿಸಿ ಬಿಸಿ ಸುದ್ದಿ

ಆ.6 ರಿಂದ ‘ಸಮತತ್ವ ಬಿತ್ತ ಬನ್ನಿ ಸರ್ವೋದಯಕ್ಕಾಗಿ’ ಎಂಬ ವಚನ ಚಳವಳಿ ರೂಪದ ಆಂದೋಲನ

ಶರಣರಾದ ಲಿಂಗಣ್ಣ ಸತ್ಯಂಪೇಟೆ ಹಾಗೂ ಸಿದ್ರಾಮಪ್ಪಾ ಬಾಲಪ್ಪಗೋಳ ಸ್ಮರಣಾರ್ಥ:

ಕಲಬುರಗಿ: ಹನ್ನೇರಡನೇ ಶತಮಾನದ ಬಸವಾದಿ ಶರಣರ ವಿಶ್ವಮಾನ್ಯ ಸಂದೇಶಗಳನ್ನು ಇಂದಿನ ಯುವ ಜನರಿಗೆ ಮುಟ್ಟಿಸಬೇಕೆಂಬ ಉದ್ದೇಶದಿಂದ ಬಸವವಾದಿಗಳಾಗಿದ್ದ ಶರಣರಾದ ಲಿಂಗಣ್ಣ ಸತ್ಯಂಪೇಟೆ ಹಾಗೂ ಸಿದ್ರಾಮಪ್ಪಾ ಬಾಲಪ್ಪಗೋಳ ಸ್ಮರಣಾರ್ಥ ಇಲ್ಲಿನ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯು ಆಗಷ್ಟ್ ೬ ರಿಂದ ೨೮ ರ ವರೆಗೆ ‘ಸಮತತ್ವ ಬಿತ್ತ ಬನ್ನಿ ಸರ್ವೋದಯಕ್ಕಾಗಿ’ (ಮನಬೆಸೆದು ಮಾಡೋದಿದೆ ಮಾನವೀಕರಣ) ಎಂಬ ವಚನ ಚಳವಳಿ ರೂಪದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.

ನಗರದ ಖಾಸಗಿ ಹೋಟೆಲ್ ವೊಂದರಲ್ಲಿ ಕರೆದಿದ್ದ ಪತ್ರಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತೇಗಲತಿಪ್ಪಿ, ನಿರ್ಭೀಡೆ ಹಾಗೂ ನಿಷ್ಠುರ ನಡೆಯ ಲಿಂಗಣ್ಣ ಸತ್ಯಂಪೇಟೆ ಹಾಗೂ ಸಿದ್ರಾಮಪ್ಪಾ ಬಾಲಪ್ಪಗೋಳ ರವರು ಶತಣ ತತ್ವಗಳನ್ನು ಮೈಗೂಡಿಸಿಕೊಂಡಿರುವ ಕಾಯಕ ಜೀವಿಗಳು. ಸಮಾಜದಲ್ಲಿ ಅನಿಷ್ಟ ಪದ್ಧತಿಗಳನ್ನು ಸ್ಪಷ್ಟವಾಗಿ ಖಂಡಿಸುವ ಮತ್ತು ಪ್ರಶ್ನಿಸುವ ಎದೆಗಾರಿಕೆಯುಳ್ಳವರಾಗಿದ್ದರು. ಅಂಥ ಶ್ರೇಷ್ಟ ಶರಣ ಚಿಂತಕರನ್ನು ಸ್ಮರಿಸುವ ಕಾರ್ಯ ಇಂಥ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅಕಾಡೆಮಿ ಮಾಡುತ್ತಿದೆ ಎಂದು ವಿವರಿಸಿದರು.

ವಚನಗಳು ಮಾನವನ ಮನವನ್ನು ಶುದ್ಧಗೊಳಿಸುವ ಸಂಜೀವಿನಿಗಳಾಗಿದ್ದು, ಹಾಗಾಗಿ, ಅಂಥ ವಚನಗಳಲ್ಲಿನ ಮೌಲ್ಯಗಳನ್ನು ಮುಟ್ಟಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು. ಆ.೬ ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಗುಬ್ಬಿ ಕಾಲೋನಿಯಲ್ಲಿರುವ ಎಸ್.ಎಸ್.ತೆಗನೂರ ಪದವಿ ಮಹಾವಿದ್ಯಾಲಯದಲ್ಲಿ ಜರುಗಲಿರುವ ಆರಂಭದ ಸಮಾರಂಭವನ್ನು ಬೆಳಗಾವಿ ಸಿ.ಐ.ಡಿ.ವಿಭಾಗದ ಸಿ.ಪಿ.ಐ. ಜ್ಯೋತಿರ್ಲಿಂಗ ಹೊನಕಟ್ಟಿ ಉದ್ಘಾಟಿಸಲಿದ್ದು, ಕಾಲೇಜಿನ ಪ್ರಿನ್ಸಿಪಾಲ್ ಡಾ.ಜ್ಯೋತಿ ತೆಗನೂರ ಅಧ್ಯಕ್ಷತೆ ವಹಿಸಲಿದ್ದಾರೆ. ಶರಣ ಸಾಹಿತಿ ಡಾ.ಇಂದುಮತಿ ಪಾಟೀಲ ‘ಪುರುಷ ಪ್ರಧಾನ ಸಮಾಜದಲ್ಲಿ ಮಹಿಳಾ ತಲ್ಲಣಗಳು’ ವಿಷಯದ ಕುರಿತು ಮಾತನಾಡಲಿದ್ದಾರೆ. ಶರಣಗೌಡ ಪಾಟೀಲ ಪಾಳಾ, ಮಲ್ಲಮ್ಮ ಸಿದ್ರಾಮಪ್ಪಾ ಬಾಲಪ್ಪಗೋಳ, ಡಾ.ಅಮೃತಪ್ಪ ಅಣೂರ ಕವಿಗಳು ಉಪಸ್ಥಿತರಿರುವರು.

ಆ.೧೦ ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಪಿಲ್ಲೂ ಹೋಮಿ ಇರಾಣಿ ಪದವಿ ಕಾಲೇಜಿನಲ್ಲಿ ‘ಮಾನವ ಕಲ್ಯಾಣಕ್ಕೆ ಮತ್ತೆ ಕಲ್ಯಾಣ’ ಕುರಿತ ಕಾರ್ಯಕ್ರಮಕ್ಕೆ ಜೆಸ್ಕಾಂನ ಪ್ರಧಾನ ವ್ಯವಸ್ಥಾಪಕಿ ಪ್ರಮೀಳಾ.ಎಂ.ಕೆ. ಚಾಲನೆ ನೀಡಲಿದ್ದು, ಶರಣ ಚಿಂತಕಿ ಸಾಕ್ಷಿ ಸತ್ಯಂಪೇಟೆ ಉಪನ್ಯಾಸ ನೀಡಲಿದ್ದಾರೆ. ಕಾಲೇಜಿನ ಪ್ರಿನ್ಸಿಪಾಲ್ ಕವಿತಾ ಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ಉದಯಕುಮಾರ ಸಾಲಿ, ಸಿದ್ಧಾರ್ಥ ಚಿಮ್ಮಾ ಇದಲಾಯಿ ಉಪಸ್ಥಿತರಿರುವರು. ಆ,೧೭ ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಹೆಚ್.ಕೆ.ಇ.ಸಂಸ್ಥೆಯ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ವಚನಕಾರರ ದೃಷ್ಟಿಯಲ್ಲಿ ಮನುಷ್ಯ ಸಂಬಂಧ’ ಕುರಿತ ಕಾರ್ಯಕ್ರಮಕ್ಕೆ ನಗರ ಪೊಲೀಸ್ ಉಪ ಆಯುಕ್ತ ಡಿ.ಕಿಶೋರಬಾಬು ಚಾಲನೆ ನೀಡಲಿದ್ದು, ಹೆಚ್.ಕೆ.ಇ.ಸಂಸ್ಥೆ ಸದಸ್ಯ ಅರುಣಕುಮಾರ ಎಂ.ಪಾಟೀಲ, ಚಿಂತಕ ಅನೀಲಕುಮಾರ ಟೆಂಗಳಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಶರಣ ಚಿಂತಕಿ ಜಯಶ್ರೀ ಚಟ್ನಳ್ಳಿ ಉಪನ್ಯಾಸ ನೀಡಲಿದ್ದು, ಕಾಲೇಜಿನ ಪ್ರಿನ್ಸಿಪಾಲ್ ಎನ್.ಜಿ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.

ಆ.೨೨ ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಾನವೀಯ ಚಿಂತನೆಯಲ್ಲಿ ವಚನ ಮತ್ತು ಸಂವಿಧಾನ ವಿಷಯದ ಕುರಿತು ನಡೆಯುವ ಕಾರ್ಯಕ್ರಮಕ್ಕೆ ಜಿಪಂ ನ ಸಿ.ಇ.ಓ. ಡಾ.ರಾಜಾ ಪಿ. ಚಾಲನೆ ನೀಡಲಿದ್ದು, ಕಾಲೇಜಿನ ಪ್ರಿನ್ಸಿಪಾಲ್ ಜಯಲಕ್ಷ್ಮೀ ಎಲ್.ಕೆ. ಅಧ್ಯಕ್ಷತೆ ವಹಿಸಲಿದ್ದಾರೆ. ಬೀದರಿನ ಶರಣ ಸಾಹಿತಿ ವಿಜಯಲಕ್ಷ್ಮೀ ಸಿ.ಕೌಟಗೆ ಉಪನ್ಯಾಸ ನೀಡಲಿದ್ದು, ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ಸಚೀನ್ ಫರಹತಾಬಾದ ಉಪಸ್ಥಿತರಿರುವರು. ಆ.೨೮ ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ಮೂಢನಂಬಿಕೆ ಮೀರಿ-ಮೂಲ ನಂಬಿಕೆ ತೋರಿ’ ವಿಷಯದ ಕುರಿತ ಕಾರ್ಯಕ್ರಮಕ್ಕೆ ದಸಂಸ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ ಚಾಲನೆ ನೀಡಲಿದ್ದು, ಗುಲಬರ್ಗ ವಿವಿಯ ಕುಲಸಚಿವ ಡಾ.ಸಿ.ಸೋಮಶೇಖರ, ಶರಣಬಸವ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಚಿದಾನಂದ ಚಿಕ್ಕಮಠ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾಲೇಜಿನ ಪ್ರಿನ್ಸಿಪಾಲ್ ಬಸವರಾಜ ಗೌನಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಹೆಚ್.ಕೆ.ಇ. ಸಂಸ್ಥೆಯ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಡಾ.ಸುಜಾತಾ ಡಿ.ಪಾಟೀಲ ಉಪನ್ಯಾಸ ನೀಡಲಿದ್ದಾರೆ.

ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಹಾಗೂ ವಿಶ್ವಜ್ಯೋತಿ ಪ್ರತಿಷ್ಠಾನದ ಅಡಿಯಲ್ಲಿ ಇಲ್ಲಿಯವರೆಗೆ ನಡೆದ ವಿಶೇಷ ಕಾರ್ಯಕ್ರಮಗಳ ವೈಚಾರಿಕ ಚಿಂತನೆಗಳ ಲೇಖನಗಳನ್ನು ದಾಖಲೀಕರಣಗೊಳಿಸುವ ನಿಟ್ಟಿನಲ್ಲಿ ಸಮೃದ್ಧಿ ಫೌಂಡೇಷನ್ ಪ್ರಕಾಶನ ವತಿಯಿಂದ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರ ಸಂಪಾದಕತ್ವದಲ್ಲಿ ಪುಸ್ತಕವೊಂದನ್ನು ಇದೇ ಸಂದರ್ಭದಲ್ಲಿ ಹೊರತರಲಾಗುತ್ತಿದೆ.

ತಿಂಗಳಪರ್ಯಂತವಾಗಿ ನಡೆಯಲಿರುವ ಈ ವೈಚಾರಿಕ ಕಾರ್ಯಕ್ರಮಗಳಲ್ಲಿ ವಿಷಯಗಳ ಮಂಡನೆ ಮಹಿಳೆಯರೇ ನೀಡುತ್ತಿರುವುದು ಅಕಾಡೆಮಿಯು ಮಹಿಳೆಯರಿಗೆ ಕೊಡುತ್ತಿರುವ ಗೌರವ ಎತ್ತಿ ತೋರಿಸುತ್ತದೆ.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಪರಮೇಶ್ವರ ಶಟಕಾರ, ಸತೀಶ ಸಜ್ಜನ್, ಶಿವರಾಜ ಅಂಡಗಿ, ಶ್ರೀಕಾಂತ ಪಾಟೀಲ ತಿಳಗೂಳ, ರವೀಂದ್ರಕುಮಾರ ಭಂಟನಳ್ಳಿ, ಜಗದೀಶ ಮರಪಳ್ಳಿ, ಶಿವಾನಂದ ಮಠಪತಿ ಇತರರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

19 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

19 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

19 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago