ಕಲಬುರಗಿ: ಕಲ್ಯಾಣಕರ್ನಾಟಕದಎಲ್ಲತಾಲೂಕು ಹೂಗಾರ ಸಮಾಜದಿಂದ ಸೆ.18ರಂದು ಮಧ್ಯಾಹ್ನ 1.30ಕ್ಕೆ ನಗರದ ವೀರಶೈವಕಲ್ಯಾಣ ಮಂಟಪದಲ್ಲಿ ಕಾಯಕಯೋಗಿ ಶರಣ ಹೂಗಾರ ಮಾದಯ್ಯನವರ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣಕರ್ನಾಟ ಹೂಗಾರ ಸಮಾಜದರಾಜ್ಯಗೌರವಾಧ್ಯಕ್ಷ ಶ್ರೀಗುರು ರಾಜೇಂದ್ರ ಶಿವಯೋಗಿಗಳು ತಿಳಿಸಿದರು.
ಅಂದು ಬೆಳಗ್ಗೆ 10ಕ್ಕೆ ನಗರದ ನೆಹರುಗಂಜ್‍ನ ನಗರೇಶ್ವರ ಶಾಲೆಯಿಂದ ವೀರಶೈವಕಲ್ಯಾಣ ಮಂಟಪದವರೆಗೆ ಶರಣ ಹೂಗಾರ ಮಾದಯ್ಯನವರ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ.ಈ ಮೆರವಣಿಗೆಗೆ ಹೂಗಾರ ಸಮಾಜದ ಹಿರಿಯ ಮುಖಂಡರಾದ ಶಿವಶರಣಪ್ಪ ಹೂಗಾರ ನದಿಸಿನ್ನೂರ, ಬಸವರಾಜ ಹೂಗಾರರಾಯಚೂರುಅವರು ಚಾಲನೆ ನೀಡಲಿದ್ದಾರೆಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಾಲಕ್ಷ್ಮಿದೇವಿ, ನದಿ ಸಿನ್ನೂರನ ಶರಣ ಹೂಗಾರ ಮಾದಯ್ಯ ಶಕ್ತಿ ಪೀಠದ ಶ್ರೀಗುರು ರಾಜೇಂದ್ರ ಶಿವಯೋಗಿಗಳು ಸಾನ್ನಿಧ್ಯ ವಹಿಸಲಿದ್ದಾರೆ.ಶಿವಮೂರ್ತಿ ಶಿವಾಚಾರ್ಯರು, ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು, ಶರಣಬಸವ ಶರಣರು ನೇತೃತ್ವ ವಹಿಸಲಿದ್ದಾರೆ.ಸಂಸದ ಉಮೇಶ ಜಾಧವಉದ್ಘಾಟಿಸಲಿದ್ದಾರೆ.
ಕಲ್ಯಾಣಕರ್ನಾಟಕದ ಹೂಗಾರ ಸಮಾಜಜಿಲ್ಲಾಧ್ಯಕ್ಷ ಪ್ರಕಾಶ ಫುಲಾರಿಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ದತ್ತಾತ್ರೇಯ ಸಿ.ಪಾಟೀಲ್ ರೇವೂರ, ಬಿಜೆಪಿ ರಾಜ್ಯಉಪಾಧ್ಯಕ್ಷ ಮಾಲೀಕಯ್ಯಗುತ್ತೇದಾರ್‍ಜ್ಯೋತಿ ಬೆಳಗಿಸಲಿದ್ದಾರೆ. ಶಾಸಕರಾದ ಡಾ.ಅಜಯಸಿಂಗ್, ರಾಜಕುಮಾರ ಪಾಟೀಲ್‍ತೇಲ್ಕೂರ್, ಎಂ.ವೈ.ಪಾಟೀಲ್, ಸುಭಾಷಗುತ್ತೇದಾರ್, ಪ್ರಿಯಾಂಕ್‍ಖರ್ಗೆ, ಬಸವರಾಜ ಮತ್ತಿಮೂಡ್ ಸೇರಿದಂತೆಅನೇಕರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಬೇಡಿಕೆಗಳು:
ಹೂಗಾರ ಮಾದಯ್ಯನವರಜಯಂತಿ ಸರಕಾರದಿಂದಆಚರಿಸಬೇಕು. ಹೂಗಾರಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಹೂಗಾರ ಮಾದಯ್ಯನವರಗುರುಪೀಠ ಕಲಬುರಗಿಯಲ್ಲಿ ಸ್ಥಾಪಿಸಬೇಕು. ಬಸ್ ನಿಲ್ದಾಣದಎದುರು ಹೂವು ಮಾರಲಿಕ್ಕೆ ಮಳಿಗೆಗಳನ್ನು ನಿಡಬೇಕು. ಹೂಗಾರ ಸಮಾಜವನ್ನು ಎಸ್ಟಿಗೆ ಸೇರಿಸಬೇಕು. ಹೂಗಾರ ಸಮಾಜದ ಪೂಜೆ ಮಡುವ ಪೂಜಾರಿಗಳಿಗೆ ರೂ.10ರಿಂದ 12 ಸಾವಿರ ಪ್ರತಿ ತಿಂಗಳು ಭತ್ತೆ ನೀಡಬೇಕು. ದೇವರ ಹೆಸರಿನ ಮೇಲೆ ಇದ್ದ ಆಸ್ತಿಯನ್ನು ಪೂಜಾರಿಗಳ ಹೆಸರಿಗೆ ವರ್ಗಾಯಿಸಬೇಕುಎಂದುರಾಜೇಂದ್ರ ಶಿವಯೋಗಿಗಳು ಒತ್ತಾಯಿಸಿದರು.ದತ್ತು ಹೂಗಾರ, ಬಸವರಾಜ ಹೂಗಾರ, ಚನ್ನಬಸಪ್ಪ ಹೂಗಾರ, ಬಿ.ಪಿ.ಹೂಗಾರಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
View Comments
Vishnu Hugar