ಯಾದಗಿರಿ: ಜಿಲ್ಲೆಯ ಯುವ, ಉತ್ಸಾಹಿ ನಾಯಕ, ಈಗಾಗಲೇ ಸಚಿವರಾಗಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದ ಹಾಲಿ ಸುರಪೂರ ಶಾಸಕರಾದ ನರಸಿಂಹನಾಯಕ ರಾಜೂಗೌಡ ರವರಿಗೆ ಸಚಿವ ಸ್ಥಾನ ನೀಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾದ್ಯಕ್ಷ ಟಿ.ಎನ್. ಭೀಮುನಾಯಕ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ರಾಜೂಗೌಡ ಅತ್ಯುತ್ತಮ ಆಡಳಿತ ನಡೆಸಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಶ್ರಮ, ಕಾಳಜಿ ವಹಿಸಿ ಕೆಲಸ ಮಾಡಿದ್ದನ್ನು ಜಿಲ್ಲೆಯಲ್ಲಿ ಜನ ನೆನಪಿಸಿಕೊಳ್ಳುತ್ತಾರೆ.
ಅಲ್ಲದೇ ಯುವಕರು, ಉತ್ಸಾಹಿಗಳು, ಎಲ್ಲ ಸಮುದಾಯದವರನ್ನು ಜೊತೆಗೆ ಕರೆದುಕೊಂಡು ಹೋಗುವ ಗುಣವುಳ್ಳ ನಾಯಕರಾಗಿರುವ ರಾಜೂಗೌಡ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಿ ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡಿದಲ್ಲಿ ಜಿಲ್ಲೆಯ ಅಭಿವೃದ್ದಿ ಮತ್ತೆ ವೇಗ ಪಡೆದುಕೊಳ್ಳುತ್ತದೆ.
ಬಿಜೆಪಿ ಸರ್ಕಾರವಿದ್ದಾಗಲೇ ಜಿಲ್ಲೆ ಘೋಷಣೆಯಾದ ಮೇಲೆ ಕೆಲವು ಅಭಿವೃದ್ಧಿ ಕೆಲಸಗಳಾದ ನಂತರ ಮತ್ತೆ ಬೇರೆ ಸರ್ಕಾರಗಳ ಕಾಲದಲ್ಲಿ ಅಭಿವೃದ್ದಿ ಕುಂಠಿತಗೊಂಡಿದ್ದು ಬಿಜೆಪಿ ಸರ್ಕಾರ ಈದೀಗ ರಚನೆಯಾಗಿರುವುದರಿಂದ ಬಿಜೆಪಿಯಲ್ಲಿಯೇ ಹಿರಿತನ ಹೊಂದಿರುವ ರಾಜೂಗೌಡರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಅಸ್ತಿತ್ವಕ್ಕೆ ಬಂದ ಜಿಲ್ಲೆ ಇದುವರೆಗೆ ನಿರ್ಲಕ್ಷಕ್ಕೆ ತುತ್ತಾಗಿದ್ದು ಮುಖ್ಯಮಂತ್ರಿಗಳು ತಮ್ಮ ಇಚ್ಛೆಯಂತೆ ಜಿಲ್ಲೆ ಅಭಿವೃದ್ದಿ ಹೊಂದಬೇಕಾದರೆ ರಾಜೂಗೌಡರೇ ಮಂತ್ರಿಯಾಗಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡರೆ ಸಾಧ್ಯವಾಗಲಿದೆ ಇದನ್ನು ಮನಗಂಡು ಬಿಜೆಪಿ ಪಕ್ಷ ಹಾಗೂ ಹೈಕಮಾಂಡ್ ರಾಜೂಗೌಡರಿಗೆ ಸಚಿವರನ್ನಾಗಿ ಮಾಡಲಿ ಎಂದು ಮುಖಂಡರಾದ ಮಲ್ಲು ಮಾಳಿಕೇರಿ, ಚೌಡಯ್ಯ, ಭೀಮಾಶಂಕರ ಹತ್ತಿಕುಣಿ, ಸಿದ್ದು ನಾಯಕ ಹತ್ತಿಕುಣಿ, ತೇಜರಾಜ್ ರಾಠೋಡ, ರಾಜು ಚವ್ಹಾಣ, ಅಬ್ದುಲ್ ಚಿಗಾನೂರು, ಶಿವುಕುಮಾರ ವಡಗೇರಾ, ಸಾಹೇಬಗೌಡ, ರಾಜು ಪಗಲಾಪುರ, ಭೀಮು ಬಸಂತಪುರ ಇನ್ನಿತರರು ಆಗ್ರಹಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…