ಸುರಪುರ: ನಗರದಲ್ಲಿನ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‍ನ ವಿವಿಧ ಮುಖಂಡರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎಬಿವಿಪಿ ಸಂಘಟನೆ ಯ ಕಲಬುರಗಿ ವಿಭಾಗ ಸಂಘಟನಾ ಕಾರ್ಯದರ್ಶಿ ಧನಂಜಯ ಮತ್ತು ವಿಭಾಗ ಸಹ ಪ್ರಮುಖ ಮತ್ತು ಉಪನ್ಯಾಸಕ ಡಾ: ಉಪೇಂದ್ರ ನಾಯಕ ಸುಬೇದಾರ್ ಮತ್ತು ನಗರ ಅಧ್ಯಕ್ಷರಾದ ಹನುಮಂತ ಶಿಂಗೆ ಅವರು ನಗರದ ಎಲ್ಲಾ ವಿದ್ಯಾರ್ಥಿ ನಿಲಯಗಳನ್ನು ಸಮೀಕ್ಷೆ ಮಾಡಿ ಊಟದ ವ್ಯವಸ್ಥೆ ಳ ಶೌಚಾಲಯಗಳ ನಿರ್ವಹಣೆ ಮತ್ತು ಗ್ರಂಥಾಲಯಗಳ ವ್ಯವಸ್ಥೆ ನೋಡಿ ಸಂತಸ ವ್ಯಕ್ತ ಪಡಿಸಿದರು.ಜೊತೆಗೆ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಸ್ವಚ್ಛತೆಯ ವಿಷಯದ ಕುರಿತು ಸಲಹೆ ನೀಡಿದರು.
ಬಾಲಕರ ವಸತಿ ನಿಲಯದ ಹಿಂದುಗಡೆ ಕೊಳಚೆ ಇಂದ ಕೂಡಿದ್ದು ನಗರ ಸಭೆ ಅಧಿಕಾರಿಗಳ ಗಮನಕ್ಕೆ ತಂದರು ಇಲ್ಲಿಯ ವರೆಗೆ ಸ್ವಚ್ಛ ಗೊಳಿಸಿಲ್ಲ ಇದರಿಂದ ಅನೇಕ ರೋಗಗಳು ಉಲ್ಬಣ ಆಗುವ ಸಂಭವ ಇದೆ ಎಂದು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಹೇಳಿದರು ಕೆಲವು ಹೊಸ ಕಟ್ಟಡಗಳು ಶಿಥಿಲ ಅವಸ್ತೆ ಆಗಿರುವುದನ್ನು ನೋಡಿ ಬೇಸರ ವ್ಯಕ್ತ ಪಡಿಸಿದರು…ಕೆಲವು ಸಲ ಆಹಾರ ಧಾನ್ಯಗಳಲ್ಲಿ ಹುಳುಗಳು ಬರುವ ಸಂಭವ ಇರುತ್ತದೆ ಒಳ್ಳೆ ರೀತಿ ಸ್ವಚ್ಛ ಮಾಡಿ ಎಂದು ಸಲಹೆ ನೀಡಿದರು.
10 ವರ್ಷದ ಹಿಂದೆ ಎಬಿವಿಪಿ ಇಡೀ ರಾಜ್ಯಾದ್ಯಂತ ಸಮೀಕ್ಷೆ ಮಾಡಿ ಒಂದು ಪುಸ್ತಕ ಹೊರ ತಂದು ಸರಕಾರಕ್ಕೆ ವಿದ್ಯಾರ್ಥಿ ವಸತಿ ನಿಲಯಗಳ ಸಮಸ್ಯೆ ಕುರಿತು ಗಮನಕ್ಕೆ ತಂದಿತ್ತು.ಪ್ರಸ್ತುತ ಈಗ ಸುರಪುರ ತಾಲ್ಲೂಕಿನ ಲ್ಲಿ,ಒಳ್ಳೆಯ ಸುಸಜ್ಜಿತ ನಿಲಯಗಳು ಆಗಿವೆ .ಊಟ ದ ವ್ಯವಸ್ಥೆಯು ಕೂಡ ಚೆನ್ನಾಗಿದೆ ಎಂದು ಸಂತೋಷವನ್ನು ವ್ಯಕ್ತ ಪಡಿಸಿದರು.
ಮುಂಬರುವ ದಿನಗಳಲ್ಲಿ ಶೈಕ್ಷಣಿಕ ಸಮಸ್ಯೆ ಇದ್ದಲ್ಲಿ ಎಬಿವಿಪಿ ಗಮನಕ್ಕೆ ತನ್ನಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.ಈ ಸಂದರ್ಭದಲ್ಲಿ ಬಿಸಿಎಮ್ ಅಧಿಕಾರಿ ತಿಪ್ಪಾರಡ್ಡಿ ಪಾಟೀಲ್ ಸೇರಿದಂತೆ ಅನೇಕ ವಿದ್ಯಾರ್ಥಿಗಳಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…