ಬಿಸಿ ಬಿಸಿ ಸುದ್ದಿ

ಬಹುಮನಿ ರಾಜ್ಯದ ಸ್ಥಾಪನೆಯ ದಿನದ ಅಂಗವಾಗಿ ಇನ್‌ಟ್ಯಾಕ್ ವತಿಯಿಂದ ಐತಿಹಾಸಿಕ ಸ್ಮಾರಕಗಳ ಜಾಗೃತ ಅಭಿಯಾನ

ಕಲಬುರಗಿ: ಇನ್‌ಟ್ಯಾಕ್ ಅಧ್ಯಯದ ವತಿಯಿಂದ ಬಹಮನಿ ರಾಜ್ಯದ ಸಂಸ್ಥಾಪನೆಯ ದಿನಾಚರಣೆಯ ಅಂಗವಾಗಿ ಐತಿಹಾಸಿಕ ಸ್ಮಾರಕಗಳ ಜಾಗೃತಿ ಕಾರ್ಯಕ್ರಮದ ಅಡಿಯಲ್ಲಿ ಕೋಟೆಯ ದರ್ಶನ ಹಾಗೂ ಬಹಮನಿ ರಾಜ್ಯದ ಕುರಿತು ವಿಶೇಷ ಉಪನ್ಯಾಸವನ್ನು ಹಮ್ಮಿಕೊಳ್ಳಲಾಯಿತು.

ಸರಕಾರಿ ಕಾಲೇಜಿನ ಇತಿಹಾಸ ವಿಭಾಗದ ಪ್ರದ್ಯಾಪಕರಾದ ಡಾ.ಶಂಭುಲಿಂಗ ವಾಣಿಯವರು ಬಹಮನಿ ರಾಜ್ಯದ ಕುರಿತು ಉಪನ್ಯಾಸದಲ್ಲಿ ಮಾತನಾಡುತ್ತಾ ಈ ರಾಜ್ಯ ಕ್ರಿ.ಶ. ೧೩೪೭ ದೌಲತಾಬಾದನಲ್ಲಿ ಸ್ಥಾಪನಗೊಂಡಿತ್ತು. ರಾಜ್ಯದ ಸ್ಥಾಪನೆಗೆ ಕಾರಣಿಭೂತನಾದ ವ್ಯಕ್ತಿ ’ಇಸ್ಮಾಯಿಲ್ ಖಾನ್’ ಆದರೆ ಇತನಿಗೆ ಗಂಡು ಮಕ್ಕಳಿಲ್ಲದ ಕಾರಣ ತನ್ನ ನಿಷ್ಠಾವಂತ ಸೇನಾ ಅಧಿಕಾರಿಯಾದ ಹಸನ್‌ಖಾನ್ (ಜಾಫರ್ ಖಾನ್) ನನ್ನು ಆಯ್ಕೆ ಮಾಡಿ ಆತನಿಗೆ ಅಲ್ಲಾವುದ್ದೀನ್ ಹಸನ್ ಬಹಮನ್ ಶಹಾ ಎಂದು ಬಿರುದು ನೀಡಿ, ಆತನ ಹೆಸರಿನಲ್ಲಿ ಕುತವಾ ಪಠಿಸಿ ಬಹಮನಿ ಗದ್ದುಗೆಯ ಮೇಲೆ ಕುಳ್ಳರಿಸಲಾಯಿತು ಎಂದು ಡಾ.ವಾಣಿಯವರು ತಮ್ಮ ಉಪನ್ಯಾಸದಲ್ಲಿ ವಿವರಿಸಿದರು.

ದೌಲತಾಬಾದ ಮಹಮ್ಮದ್-ಬಿನ್-ತುಘಲಕನ್ ಅಧೀನದಲ್ಲಿರುವುದರಿಂದ ಇದು ತನಗೆ ಸುರಕ್ಷಿತ ಸ್ಥಳ ಅಲ್ಲ ಎಂದು, ಸುರಕ್ಷಿತ ಸ್ಥಳವಾದ ಇಂದಿನ ಕಲಬುರಗಿಯನ್ನೇ ತನ್ನ ಹೊಸ ರಾಜ್ಯಧಾನಿಯನ್ನಾಗಿ ಆಯ್ಕೆ ಮಾಡಿಕೊಂಡು ರಾಜ್ಯಧಾನಿಯನ್ನು ಕ್ರಿ.ಶ. ೧೩೫೦-೫೧ ರಲ್ಲಿ ಇಲ್ಲಿಗೆ ವರ್ಗಾಯಿಸಿ ಇದನ್ನು ’ಅಹಸನಾಬಾದ’ ಎಂದು ಪುನರ್ ನಾಮಕರಣ ಮಾಡಿದ. ಈಗಾಗಲೇ ಆಸ್ತಿತ್ವದಲ್ಲಿದ್ದ ಕಲಬುರಗಿ ಕೋಟೆಯನ್ನು ಮುಂದೆ ಬಂದ ಸುಲ್ತಾನರು ತಮ್ಮ ಅನುಕೂಲಕ್ಕೆ ತಕ್ಕಂತೆ ಪುನರ್ ರಚಿಸಿ, ಇದರ ಒಳಗಡೆ ಮತ್ತು ನಗರದ ಹಲವು ಭಾಗಗಳಲ್ಲಿ ಕಟ್ಟಡಗಳನ್ನು ನಿರ್ಮಿಸಿದರು ಅಲ್ಲದೆ ಮುಂದಿನ ದಿನಗಳಲ್ಲಿ ರಾಜ್ಯಧಾನಿಯನ್ನು ಫಿರೋಜಾಬಾದ್, ಬೀದರಗಳಿಗೆ ವರ್ಗಾಯಿಸಿ, ಕ್ರಿ.ಶ. ೧೫೩೦ ರವರೆಗೆ ಒಟ್ಟು ೧೮ ಜನ ಸುಲ್ತಾನರು ಆಲ್ವೀಕೆ ಮಾಡಿರುವ ವಿಷಯವನ್ನು ಕುರಿತು ವಿವರಿಸಿದರು.

ಇನ್‌ಟ್ಯಾಕನ್ ಸಹಾಯಕ ಸಂಯೋಜಕರು ಹಾಗೂ ಇತಿಹಾಸ ಪ್ರಾಧ್ಯಾಪಕ ಡಾ.ಶಶಿಶೇಖರ ರೆಡ್ಡಿ ಮಾತನಾಡಿ ಇವರು ’ಕೋಟೆಯದಶೇನ ಕುರಿತು ವಿದ್ಯಾರ್ಥಿಗಳಿಗೆ ಕೋಟೆಯ ಒಳಗಡೆ ನಿರ್ಮಾಣಗೊಂಡ ಜಾಮಿಮಸೀದಿ, ರಣಮಂಡಲ, ಕಾವಲು ಗೋಪುರಗಳು ಹಾಗೂ ಇತರ ಕಟ್ಟಡಗಳ ಮಾಹಿತಿ ನೀಡಿದರು. ಸಹ-ಸಂಯೋಜಕರಾದ ಡಾ.ಎಂ.ಎಸ್.ಕುಂಬಾರ ಇವರು ಇನ್‌ಟ್ಯಾಕನ ಕಾರ್ಯ ಸಾಧನೆಗಳನ್ನು ಕುರಿತು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ಭೀಮಣ್ಣಾ ಘನಾತೆ, ಪ್ರೊ.ಚಂದ್ರಶೇಖರ ಅನಾದಿ, ಪ್ರೊ.ಚನ್ನಕ್ಕಿ ನಾಗಪ್ಪ, ಪ್ರೊ.ಖಾಜಿ ಅತಿಯಾ ಪರ್ವಿನ್, ಶ್ರೀ ರವಿಕುಮಾರ ಹಾಗೂ ಸರಕಾರಿ ಪದವಿ ಕಾಲೇಜು ಮತ್ತು ಸರಕಾರಿ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಹಾಜರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

6 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

16 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

16 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

16 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago