ಅಂಕಣ ಬರಹ

‘ನಮಸ್ಕಾರ ಮೈ ರವೀಶ್ ಕುಮಾರ್’ ಯಾರು ಈ ಎನ್ಡಿಟಿವಿ ರವೀಶ್ ಕುಮಾರ.?

  • ರಾಜಶೇಖರ್ ಶಕುಂತಲಾ

ಅದೊಂದು ಕಾರ್ಯಕ್ರಮ ನನಗೆ ತುಂಬಾ ಚೆನ್ನಾಗಿ ನೆನಪಿದೆ. ರೈಲ್ವೆ ಹಳಿಯ ಪಕ್ಕದಲ್ಲೊಂದು ಕಟ್ಟಡವಿತ್ತು. ಆ ಕಟ್ಟಡದಿಂದಲೇ ಕಾರ್ಯಕ್ರಮ ಆರಂಭವಾಗಿದ್ದು. ಆ ಕಾರ್ಯಕ್ರಮ ಆರಂಭವಾಗುವಾಗ ಯಾವುದೇ ಢಂ.. ಢಂ.. ಢುಂ.. ಢುಂ.. ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಇರಲಿಲ್ಲ.. ಯಾವುದೇ ಬಣ್ಣ ಬಣ್ಣದ ಬಿಜಿಗಳು ರಾಜಾಜಿಸುತ್ತಿರಲಿಲ್ಲ. ನಿರೂಪಕನ ಬೆನ್ನ ಹಿಂದೆ ಕೃತಕ ಸೌಂದರ್ಯದ ಸೃಷ್ಟಿಗಾಗಿ ಯಾವುದೇ ನಕಲಿ ಗಿಡಗಳಾಗಲಿ, ಹೂಬಳ್ಳಿಗಳಾಗಲಿ ಇರಲಿಲ್ಲ.

ಹಳಿಗಳ ಮೇಲೆ ಹಾದು ಹೋಗುತ್ತಿದ್ದ ರೈಲಿನ ಕರ್ಶಕ ಶಬ್ಧ, ಹಳಿ ಪಕ್ಕದ ರಸ್ತೆ ಮೇಲೆ ಓಡಾಡ್ತಿದ್ದ ನಾಯಿ, ಆಟೋ ರಿಕ್ಷಾ, ಬೈಕು, ಹಳೇ ಕಟ್ಟಡ, ನಿತ್ಯ ಜೀವನದ ಕಟ್.. ಕಟ್.. ದಪ್ಪ..ದಪ್ಪ ಎನ್ನುವ ಸಪ್ಪಳ ಹೀಗೆ ಎಲ್ಲಾ ದೃಶ್ಯಗಳು, ಎಲ್ಲಾ ಧ್ವನಿಗಳು ಕ್ಯಾಮರದಲ್ಲಿ ಅಷ್ಟೇ ರಾ ಆಗಿ ಸೆರೆಯಾಗುತ್ತಿದ್ದವು.. ಇದನ್ನು ಯಾಕೆ ಹೇಳ್ತೀನಿ ಅಂದ್ರೆ ಸಾಮಾನ್ಯವಾಗಿ ಸೋ ಕಾಲ್ಡ್ ಸೌಂದರ್ಯ ಎನಿಸಕೊಳ್ಳದ ಯಾವುದೇ ದೃಶ್ಯ ಕಂಡಾಕ್ಷಣ, ಭಾರತೀಯ ದೃಶ್ಯ ಮಾಧ್ಯಮದ ಕ್ಯಾಮರಾಗಳು ದೃಷ್ಟಿ ಕಳೆದುಕೊಂಡು ಕುರುಡಾಗುತ್ತವೆ.

ಆದ್ರೆ ಆ ಕಾರ್ಯಕ್ರಮದಲ್ಲಿ ಹಾಗಾಗಲಿಲ್ಲ. ಕೈಯಲ್ಲೊಂದು ಲೋಗೋ ಹಿಡಿದಿದ್ದ ಮಧ್ಯ ವಯಸ್ಕ ವ್ಯಕ್ತಿ, ರೈಲ್ವೆ ಹಳಿಯ ಪಕ್ಕದಲ್ಲಿ ಎದ್ದು ನಿಂತಿದ್ದ ಕಟ್ಟಡವನ್ನು ಏರಲು ಆರಂಭಿಸಿದ. ತುಂಬಾ ಸಾಮಾನ್ಯ ವ್ಯಕ್ತಿ. ಪಾರ್ಮಲ್ ಶರ್ಟ್ ಮತ್ತು ಪ್ಯಾಂಟ್.. ನೆರೆಯೊಡೆದಿದ್ದ ಕೂದಲು. ಮುಖದಲ್ಲಿ ಅತಿ ಎನಿಸದ ಸಣ್ಣ ನಗು ಮತ್ತು ಅಷ್ಟೇ ವಿಷಾದ ಕೂಡಾ. ಚಿಕ್ಕ ಚಿಕ್ಕ ರೂಂಗಳಿದ್ದ, ಪ್ಯಾಸೇಜ್ ತುಂಬೆಲ್ಲಾ ಚಪ್ಪಲಿಗಳೇ ತುಂಬಿದ್ದ ಕಟ್ಟಡದಲ್ಲಿ ಆ ವ್ಯಕ್ತಿಯ ಸಂಚಾರ ಆರಂಭವಾಯ್ತು. ಹೊಸ ಅತಿಥಿಯನ್ನು ಕಂಡ ಅಲ್ಲಿದ್ದ ಯುವಕರಿಗೆ ಹೇಗೆ ಸ್ವಾಗತ ಮಾಡಬೇಕು ಅಂತಾನೂ ಹೊಳೆಯಲಿಲ್ಲ ಎನಿಸುತ್ತೆ. ಈ ವ್ಯಕ್ತಿಯ ನಗುವಿಗೆ ಪ್ರತಿಕ್ರಿಯೆಯಾಗಿ ಮುಖ ಅರಳಿಸಿ ಅವರು ನಗಲೂ ಇಲ್ಲ.

ಯಾರೋ ಸೀಮೆ ಎಣ್ಣೆ ಸ್ಟೌ ಹಚ್ಚಿ ಅನ್ನ ಮಾಡ್ತಿದ್ದರು, ಯಾರೋ ಆಗಷ್ಟೇ ಓದಲು ಆರಂಭಿಸಿದ್ದರು, ಮತ್ಯಾರೋ ಆಗಷ್ಟೇ ಸ್ನಾನ ಮುಗಿಸಿ ತಲೆ ಬಾಚಿಕೊಳ್ಳುತ್ತಿದ್ದರು. ಈ ಎಲ್ಲವನ್ನೂ ಯಾವುದೇ ಆಶ್ಚರ್ಯವಿಲ್ಲದೆ ನೋಡುತ್ತಿದ್ದ ಆ ವ್ಯಕ್ತಿ ಒಂದು ರೂಂನೊಳಗಡೆ ಹೋಗಿ, ‘ಮೇ ರವೀಶ್ ಕುಮಾರ್, ಎನ್ಡಿಟಿವಿ ಸೆ ಆಯಾ ಹು’ ಎಂದರು. ಮುಂದೆ ಪತ್ರಕರ್ತರ ರವೀಶ್ ಕುಮಾರ್ ಮತ್ತು ಆ ಯುವಕರು ಮಾತುಕತೆ ಅರಂಭವಾಯ್ತು. ಒಂದು ರೂಮಿನಲ್ಲಿ ಐದಾರು ಜನ ಸೇರಿದ್ರು, ಪಕ್ಕದ ರೂಮಿನ ಯುವಕರೂ ಬಂದರು.

ಈ ಯಾರೂ ಸಹ ಸೋ ಕಾಲ್ಡ್ ಟಿವಿ ಡಿಬೇಟ್ನಲ್ಲಿ ಕಾಣಿಸಿಕೊಳ್ಳುವ ಘನವೆತ್ತ ಪಂಡಿತರಂತೆ ಮೇಕಪ್ ಆಗಲಿ, ಅತಿ ಎನಿಸುವ ಬಟ್ಟೆಗಳನ್ನಾಗಲಿ ಹಾಕಿರಲಿಲ್ಲ. ರೂಮಿನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪುಸ್ತಕಗಳು, ಬಟ್ಟೆಗಳು, ಅಡುಗೆ ಪಾತ್ರೆಗಳು, ಹೀಗೆ ಎಲ್ಲರಿಗೂ ಕ್ಯಾಮರಾ ಕಣ್ಣಲ್ಲಿ ಸಮಾನ ಜಾಗ ಸಿಕ್ಕಿತ್ತು. ಯುವಕರು ಬನಿಯಾನ್, ಟಿ-ಶರ್ಟ್, ಶಾರ್ಟ್ಸ್ ಮೇಲೆಯೇ ಇದ್ದರು. ಮುಂದೆ ನಡೆದಿದ್ದು ಮಾತ್ರ ಅತಿ ಗಂಭೀರ ಚರ್ಚೆ. ರಾಷ್ಟ್ರೀಯ ಚಾನೆಲ್ ಒಂದು ಸರ್ಕಾರಿ ಉದ್ಯೋಗ ಪಡೆಯಲು ಅಲಹಾಬಾದ್ ನಗರದಲ್ಲಿ ರೂಂ ಮಾಡಿಕೊಂಡು ಓದುತ್ತಿದ್ದ ಬಡ ವಿದ್ಯಾರ್ಥಿಗಳ ಬಳಿಗೆ ಹೋಗಿ ಅವರ ಕಷ್ಟ-ಸುಖಗಳನ್ನು ದೇಶಕ್ಕೆ ತಲುಪಿಸಿದ ಕಾರ್ಯಕ್ರಮ ಅದು.

ಸಾಮಾನ್ಯರಲ್ಲಿ ಅತಿ ಸಾಮಾನ್ಯರಂತಿದ್ದ ರವೀಶ್ ಕುಮಾರ್, ಸರ್ಕಾರಿ ಉದ್ಯೋಗ ಪಡೆಯಲು ನಗರಕ್ಕೆ ಬಂದು ಅಧ್ಯಯನ ನಡೆಸುತ್ತಿದ್ದ ಯುವಕರ ಹಳ್ಳಿ, ಅವರ ಕುಟುಂಬದ ಹಿನ್ನೆಲೆ, ಆದಾಯ, ಸದ್ಯದ ಆರ್ಥಿಕ ಸ್ಥಿತಿಗತಿ, ಅವರ ಅಣ್ಣ ತಮ್ಮ, ಅಕ್ಕ ತಂಗಿ, ಅವರ ವಿದ್ಯಾರ್ಹತೆ, ಅಧ್ಯಯನ ನಡೆಸುತ್ತಿರುವ ಅವಧಿ, ಅವರ ಗುರಿ, ಅವರ ನೋವು, ನೇಮಕಾತಿ ಪ್ರಕ್ರಿಯೆಯಲ್ಲಿ ಸರ್ಕಾರದಿಂದ ಆಗುತ್ತಿರುವ ವಿಳಂಬ, ಹೀಗೆ ಒಂದೊಂದಾಗಿ ಎಲ್ಲವನ್ನೂ ಪ್ರಶ್ನಿಸಲು ಆರಂಭಿಸಿದ್ರು. ಪ್ರಶ್ನೆ ಮಾಡುತ್ತಿದ್ದ ರವೀಶ್ ಕುಮಾರ್ ಅವರಿಗೆ ಯಾವುದೇ ಆತುರ, ಅಂಜಿಕೆ ಇರಲಿಲ್ಲ, ಆದ್ರೆ ಕೊಂಚ ಆತಂಕ ಇತ್ತು. ಅದು ಯುವಕರ ಭವಿಷ್ಯದ ಬಗೆಗಿನ ಆತಂಕ.. ಉತ್ತರ ನೀಡುತ್ತಿದ್ದ ಯುವಕರಿಗೂ ಯಾವುದೇ ಆತುರ, ಅಂಜಿಕೆ ಇರಲಿಲ್ಲ.. ಆ ಚರ್ಚೆಯಲ್ಲಿ ಯಾರಿಗೂ ತಾವೇ ಜಾಣರು, ತಮಗೆ ಎಲ್ಲಾ ಗೊತ್ತು. ತಾವು ಹೇಳಿದ್ದೇ ಸರಿ ಎನ್ನುವ ತೆವಲಾಗಲಿ, ತಿಕ್ಕಲುತನವಾಗಲಿ ಇರಲಿಲ್ಲ. ಅದೊಂದು ಕಾರ್ಯಕ್ರಮ ನಿಜವಾದ ಭಾರತದ ದರ್ಶನ ಮಾಡಿಸಿತ್ತು. ಆ ಕಾರ್ಯಕ್ರಮ ನೋಡಿದ ಯಾರೇ ಅಗಲಿ, ಭಾರತದಲ್ಲಿ ಯುವಕರು ಸರ್ಕಾರ ನೌಕರಿ ಪಡೆಯಲು ಏನೆಲ್ಲಾ ಪ್ರಯತ್ನ ಮಾಡ್ತಾರೆ.

ಹೇಗೆ ಹಳ್ಳಿಗಳನ್ನು ಬಿಟ್ಟು ಬಂದು ನಗರದಲ್ಲಿ ರೂಂ ಮಾಡಿ ಓದುತ್ತಾರೆ.. ನಗರದಲ್ಲಿ ವಾಸಿಸುವಾಗ ಅವರು ಖರ್ಚು ವೆಚ್ಚಗಳ ಕಥೆ ಏನು? ಅವರಿಗೆ ಸರಿಯಾದ ಊಟ ಸಿಗುತ್ತಾ? ಬಾಡಿಗೆ ಕಟ್ಟಲು ಏನ್ ಮಾಡ್ತಾರೆ? ನಗರದಲ್ಲಿ ರೂಂ ಮಾಡಿದ ವಿದ್ಯಾರ್ಥಿಗಳು ಎಷ್ಟು ದಿನಗಳ ಕಾಲ ಓದುತ್ತಾರೆ.. ಅವರಿಗೆ ಸರ್ಕಾರಿ ನೌಕರಿ ಸಿಗುತ್ತಾ? ಸಿಗೋದಾದ್ರೆ ಎಷ್ಟು ವರ್ಷಗಳ ಶ್ರಮ ಹಾಕಬೇಕು? ಹೀಗೆ ನಿಜವಾದ ಭಾರತದ ಕೋಟಿ ಕೋಟಿ ಯುವಕರ ನಿಜದ ಕಥೆಯನ್ನು ರವೀಶ್ ಕುಮಾರ್, ಅಷ್ಟೇ ನೈಜವಾಗಿ ದೇಶದ ಮುಂದೆ ಇಟ್ಟಿದ್ದರು.

ತಾವು ದೊಡ್ಡ ಪತ್ರಕರ್ತ ಎನ್ನುವ ಅಹಂ ಆಗಲಿ, ನಾನು ಯಾರೂ ಮಾಡದೆ ಇರೋ ಕೆಲಸ ಮಾಡುತ್ತಿದ್ದೇನೆ ಎನ್ನುವ ದೊಡ್ಡಸ್ತಿಕೆಯಾಗಲಿ ರವೀಶ್ ಕುಮಾರ್ ಮುಖದಲ್ಲಿ ಕಾಣಲಿಲ್ಲ. ಓರ್ವ ಸಾಮಾನ್ಯ ಮನುಷ್ಯ ಮತ್ತೊಬ್ಬ ಸಾಮಾನ್ಯ ಮನುಷ್ಯನ ಜೀವನವನ್ನು ತಿಳಿದುಕೊಳ್ಳುವ ಹಾಗೇ ರವೀಶ್ ಕುಮಾರ್ ಕಾರ್ಯಕ್ರಮ ನಡೆಸಿಕೊಟ್ರು.. ಆ ಸರ್ಕಾರಿ ನೌಕರಿಯ ಆಕಾಂಕ್ಷಿಗಳು ಸಹ ತಮ್ಮದೇ ಸ್ನೇಹಿತನಿಗೆ ತಮ್ಮ ಕಥೆಯನ್ನು ಹೇಳುತ್ತಿರುವಂತೆ ಮಾತಾಡಿದ್ರು.. ಸದ್ದು, ಗದ್ದವಿಲ್ಲದೆ, ಅದ್ಭುತವಾದ ಕಾರ್ಯಕ್ರಮ ಮೂಡಿಬಂತು.. ನ್ಯೂಸ್ ಚಾನೆಲ್ಗಳಲ್ಲಿ ಬರೀ ಅರಚಾಟವನ್ನೇ ಕೇಳಿದ್ದ ನನಗೆ, ನಿಜವಾದ ಪತ್ರಕರ್ತರೂ ಇದ್ದಾರೆ. ನಿಜವಾದ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ ಎನ್ನುವ ನೆಮ್ಮದಿ ಸಿಕ್ಕಿತ್ತು..

ಅಂದು ಆ ಕಾರ್ಯಕ್ರಮದ ಮೂಲಕ ನನಗೆ ನೆಮ್ಮದಿ ನೀಡಿ, ಭರವಸೆ ಮೂಡಿಸಿದ್ದ ರವೀಶ್ ಕುಮಾರ್ ಅವರಿಗೆ ಏಷ್ಯಾದ ನೋಬೆಲ್ ಅಂತಾ ಕರೆಸಿಕೊಳ್ಳುವ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ ಬಂದಿದೆ. ಇದು ಯಾವುದೇ ದೇಶದ ಅತ್ಯುನ್ನತ ಗೌರವ ಅಲ್ಲ. ಇದು ಇಡೀ ಏಷ್ಯಾ ಖಂಡದಲ್ಲಿ ನೀಡಲ್ಪಡುವ ಅತ್ಯುನ್ನತ ಗೌರವ.. ರವೀಶ್ ಕುಮಾರ್ ಅವರಿಗೆ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ ಸಿಕ್ಕಿದ್ದರಿಂದ ಪ್ರಶಸ್ತಿಯ ಮೌಲ್ಯ ಮತ್ತಷ್ಟು ಹೆಚ್ಚಾಗಿದೆ ಅಂತಾ ನನಗೆ ಎನಿಸುತ್ತೆ. ಯಾಕಂದ್ರೆ, ರವೀಶ್ ಕುಮಾರ್, ಅತಿಹೆಚ್ಚು ಸಾಮಾನ್ಯ ಜ್ಞಾನ ಹೊಂದಿರುವ ಪತ್ರಕರ್ತ. ಭಾರತದ ದೃಶ್ಯ ಮಾಧ್ಯಮದಲ್ಲಿರುವ ನಿಜವಾದ ಪತ್ರಕರ್ತ. ಇಡೀ ಪ್ರಭುತ್ವವನ್ನೇ ಎದುರು ಹಾಕಿಕೊಂಡು ರವೀಶ್ ಕುಮಾರ್, ಜನರ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ.

ಭಾರತದಲ್ಲಿ ಯಾವುದೋ ರಾಜಕೀಯ ಪಕ್ಷದ ಪತ್ರಕರ್ತರಿಗೆ, ಯಾವುದೋ ನಾಯಕನ ಪತ್ರಕರ್ತರಿಗೆ, ಯಾವುದೋ ಧರ್ಮ, ಜಾತಿಯ ಪತ್ರಕರ್ತರಿಗೆ ಕೊರತೆ ಇಲ್ಲ. ಆದ್ರೆ, ರವೀಶ್ ಕುಮಾರ್ ಮಾತ್ರ ಜನರ ಪತ್ರಕರ್ತ. ಇಂತಹ ಪತ್ರಕರ್ತ ಕೆಲಸ ಮಾಡುತ್ತಿರುವ ಎನ್ಡಿಟಿವಿ ಸಂಸ್ಥೆಯನ್ನು ಮುಗಿಸಲು ಒಂದು ಪಕ್ಷದ ನಾಯಕರು ಕೆಲಸ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಇದೆ. ಆದ್ರೆ, ರವೀಶ್ ಕುಮಾರ್ ಕೆಲಸವನ್ನು ಮೆಚ್ಚಿ ರಾಮನ್ ಮ್ಯಾಗ್ಸೇಸೆ ಒಲಿದು ಬಂದಿದೆ.

ಸಂಘರ್ಷ ಎನ್ನುವ ಪದಕ್ಕೆ ಮತ್ತೊಂದು ಹೆಸರೇ ರವೀಶ್ ಕುಮಾರ್. ಯಾಕಂದ್ರೆ, ಅವರಿಗೆ ಬರುತ್ತಿರುವ ಬೆದರಿಕೆ ಕರೆಗಳು, ನಿಂದನೆಗಳು, ಸಾಮಾಜಿಕ ಜಾಲತಾಣದಲ್ಲಿ ಅವರು ವಿರುದ್ಧ ನಡೆಯುವ ದಾಳಿ ಭಯಾನಕ. ಅವುಗಳನ್ನು ಸಹಿಸಿಕೊಂಡು ನಿಜದ ಪತ್ರಕರ್ತರಾಗಿರೋದು ಅಷ್ಟು ಸುಲಭವಲ್ಲ. ಅದನ್ನು ಸಾಧ್ಯವಾಗಿಸುತ್ತಿರುವವರು ರವೀಶ್ ಕುಮಾರ್. ಯಾವುದೋ ಪಕ್ಷ, ಸಂಘಟನೆಯ ಸಂಚಿಗೆ ಬಲಿಯಾಗಿ, ರವೀಶ್ ಕುಮಾರ್ ಅವರನ್ನು ಬಾಯಿಗೆ ಬಂದಂತೆ ಬೈದು, ಬಳಿಕ ರವೀಶ್ ಕುಮಾರ್ ಮಾಡಿದ ವರದಿಯ ಫಲಶೃತಿಯಿಂದಲೇ ಸರ್ಕಾರಿ ನೌಕರಿ ಪಡೆದು, ಕೊನೆಗೆ ರವೀಶ್ ಕುಮಾರ್ ಅವರಿಗೆ ಕ್ಷಮೆ ಕೇಳಿದ ಯುವಕರು ಭಾರತದಲ್ಲಿ ಇದ್ದಾರೆ. ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ರವೀಶ್ ಕುಮಾರ್ ಅವರಿಗೆ ಅಭಿನಂದನೆಗಳು.

emedialine

Recent Posts

ಸಂಧ್ಯಾ ಹೊನಗುಂಟಿಕರ್ ಅವರ ಹೆಸರು ಕಳೆದುಕೊಂಡ‌ ಊರು ಕಥಾ ಸಂಕಲನ ಬಿಡುಗಡೆ

ಕಲಬುರಗಿ: ಈ ಕಥಾ ಸಂಕಲವನ್ನು ಓದಿದರೆ ಮಾತು ಬಾರದ ಮೌನ ಆವರಿಸುತ್ತದೆ. ಉತ್ತರ ಕರ್ನಾಟಕದ ಜನ ಮತ್ತೆ ಮತ್ತೆ ಬರೆದು…

7 mins ago

ಖಮೀತಕರ್ ಭವನದಲ್ಲಿ ಪಂಚಗವ್ಯ ಆಧಾರಿತ ಉಚಿತ ತಪಾಸಣಾ ಶಿಬಿರ 30ರಂದು

ಕಲಬುರಗಿ: ವಿಶ್ವ ಹಿಂದೂ ಪರಿಷತ್, ಕಲಬುರಗಿ ಮಹಾನಗರ, ಗೋರಕ್ಷಾ ವಿಭಾಗ ವತಿಯಿಂದ ಸೆ.30.ರಂದು ಬೆಳಿಗ್ಗೆ 10.ರಿಂದ ಸಂಜೆ 5ರ ವರೆಗೆ…

42 mins ago

ಸಿಯುಕೆಯಲ್ಲಿ ಸ್ವಚ್ಚತಾ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕಲಬುರಗಿ: “ಸ್ವಚ್ಚತೆಯೇ ಆರೋಗ್ಯದ ಮೂಲ ಮಂತ್ರ” ಎಂದು ಶಾಂತಾ ಆಸ್ಪತ್ರೆಯ ವೈದ್ಯೆ ಡಾ. ಅಂಬಿಕಾ ಪಾಟಿಲ್ ಹೇಳಿದರು. ಇಂದು ಅವರು ಕರ್ನಾಟಕ…

49 mins ago

ಅಫಜಲಪುರ: ಸರಕಾರಿ ಪಾಲಿಟೆಕ್ನಿಕ್ ರಾಷ್ಟೀಯ ಅಭಿಯಂತರರ ದಿನಾಚರಣೆ

ಅಫಜಲಪುರ: ಇಲ್ಲಿನ ಸರಕಾರಿ ಪಾಲಿಟೆಕ್ನಿಕ್ ಅಫಜಲಪೂರ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಪ್ರಾದೇಶಿಕ ಕೇಂದ್ರ ಕಲಬುರಗಿಯ…

3 hours ago

ಪಿಎಂ ಆವಾಸ ಯೋಜನೆಯಲ್ಲಿ ಹಣಕ್ಕೆ ಬೇಡಿಕೆ- ಕ್ರಮಕ್ಕೆ ಗುತ್ತೇದಾರ ಆಗ್ರಹ

ಆಳಂದ; ಕೇಂದ್ರ ಸರ್ಕಾರದಿಂದ ಗ್ರಾಮ ಪಂಚಾಯತಗಳಿಗೆ ಮಂಜೂರಿಯಾಗಿರುವ ಪ್ರಧಾನಮಂತ್ರಿ ಆವಾಸ್ ಯೋಜನೆಯ ಮನೆಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಬಿಜೆಪಿ ಬೆಂಬಲಿತ…

3 hours ago

ಶಿಥಿಲಗೊಂಡ ಮಳಖೇಡ ಕೋಟೆ ವೀಕ್ಷಿಸಿದ ಕಸಾಪ ಜಿಲ್ಲಾಧ್ಯಕ್ಷರು, ಸಾಹಿತಿಗಳು

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶವು ಹಲವು ಹಿರಿಮೆಗಳಿಗೆ ಪ್ರಸಿದ್ಧಿಯಾಗಿದೆ. ಸ್ವತಂತ್ರ ಪೂರ್ವದ ಇತಿಹಾಸ ನೋಡಿದರೆ ಈ ಪ್ರದೇಶದಲ್ಲಿ ಅನೇಕ ರಾಜ…

3 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420