ಕಲಬುರಗಿ: ಸುಲಫಲ, ಶ್ರೀಶೈಲಂ ಪೀಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಇಂದು ಸುಲಫಲಮಠದಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮದ ಎರಡನೆ ಸಭೆ ನಡೆಯಿತು.
ಮತ್ತೆ ಕಲ್ಯಾಣ ಅದ್ಭುತ ಕಾರ್ಯಕ್ರಮ. ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರೂ ಕೈಜೋಡಿಸಬೇಕು. ಈಗಿನ ಸಂದರ್ಭದಲ್ಲಿ ಇದು ಅವಶ್ಯವಾಗಿದೆ. ಲಿಬರಲ್ ಆಗಿ ಈ ಕಾರ್ಯಕ್ರಮ ಮುಗಿಸೋಣ ಎಂದು ಮಾಜಿ ಸ್ಪೀಕರ್ ಬಿ.ಆರ್. ಪಾಟೀಲ ಹೇಳಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಹಲವು ಭಿನ್ನಾಭಿಪ್ರಾಯಗಳ ಮಧ್ಯೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವವರು ಎಲ್ಲರೂ ಒಂದಾಗಿ ಸಮಾಜ ಅಭಿವೃದ್ಧಿಗೆ ಎಲ್ಲರೂ ಪಣತೊಡಬೇಕು ಎಂದರು.
ಚೌದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯ ರು, ಗುರುಬಸವ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಬಸವ ಕೇಂದ್ರದ ಸೋಮಣ್ಣ ನಡಕಟ್ಟಿ, ರವೀಂದ್ರ ಶಾಬಾದಿ, ಪ್ರಭುಲಿಂಗ ಮಹಾಗಾಂವಕರ್, ದೇವೆಗೌಡ ತೆಲ್ಲೂರ, ಬಸವರಾಜ ತಡಕಲ್, ಸಿದ್ಧರಾಮ ಪ್ಯಾಟಿ, ಶರಣು ಪಪ್ಪಾ, ಶರಣು ಮೋದಿ, ಆರ್.ಕೆ. ಹುಡಗಿ, ಆರ್.ಜಿ. ಶೆಟಗಾರ, ಮಾಲತಿ ರೇಶ್ಮಿ, ಮಲ್ಲಪ್ಪ ಹೊಸಮನಿ, ಸುನಿಲ ಹುಡಗಿ, ಶಿವರಂಜನ್ ಸತ್ಯಂಪೇಟೆ, ವಿಜಯಕುಮಾರ ತೇಗಲತಿಪ್ಪಿ, ಪರಮೇಶ್ವರ ಶೆಟಕಾರ, ಮಹಾಂತೇಶ ಕಲ್ಬುರ್ಗಿ, ಅಯ್ಯನಗೌಡ ಪಾಟೀಲ, ಬಿ.ಎಂ. ಪಾಟೀಲ ಕಲ್ಲೂರ, ಶಿವಶರಣಪ್ಪ ದೇಗಾಂವ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…