ಕಲಬುರಗಿ: ಸ್ವಾಮಿ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ಕಸ್ತೂರಿಬಾಯಿ ಪಿ.ಬುಳ್ಳಾ ಸಾಂಸ್ಕøತಿಕ ಸಭಾ ಭವನದಲ್ಲಿ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿಯ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ನೌಕರ ಬಾಂಧವರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ನಿವೃತ್ತ ಪ್ರಾಧ್ಯಾಪಕರು, ಹಿರಿಯ ಸಾಹಿತಿಗಳು ಹಾಗೂ ಕರ್ನಾಟಕ ಲೋಕಸೇವಾ ಆಯೋಗ ಬೆಂಗಳೂರು ಮಾಜಿ ಸದಸ್ಯರಾದ ಡಾ.ನಾಗಬಾಯಿ.ಬಿ.ಬುಳ್ಳಾ ಅವರು ಉದ್ಘಾಟಿಸಿ ಮಾತನಾಡುತ್ತಾ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ಸಂಸ್ಥೆಯು ಸಮಾಜದ ಪದವಿದರರ ಸಂಸ್ಥೆ ಆಗಿದ್ದು, ಸಂಸ್ಥೆಗೆ ಹೆಚ್ಚಿನ ಜವಾಬ್ದಾರಿ ಇದ್ದು ಈ ಸಂಸ್ಥೆ ಹಲವಾರು ಸಮಾಜದ ಗಣ್ಯರ ಪರಿಶ್ರಮ ಮತ್ತು ಕಷ್ಟಕಾಲದಲ್ಲಿ ಕಟ್ಟಿದ ಸಂಸ್ಥೆ ಆಗಿದ್ದು ಇದನ್ನು ಬೆಳಗಿಸಿ ಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಸಮಾಜವನ್ನು ಎಲ್ಲರು ಒಟ್ಟಿಗೆ ಸೇರಿ ಬೆಳೆಸಬೇಕು ಶಿಕ್ಷಣ ಪಡೆದ ನಾವುಗಳೆಲ್ಲರು ದ್ವೇಷ ರಹಿತವಾದ ಸಮಾಜವನ್ನು ಕಟ್ಟಲು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶರಣಪ್ಪ ಕುಮಸಗಿ, ನೀಲಕಂಠ ಎಂ ಜಮಾದಾರ, ಅಂಬರೀಶ ಪಾಟೀಲ, ರಾಜಶೇಖರ ಕೋಲಾರ, ಬಸಂತಭಾಯಿ ಅಕ್ಕಿ, ನಾಮದೇವ ಕಡಕೋಳ ಆಗಮಿಸಿದ್ದರು. ಗೌರವ ಉಪಸ್ಥಿತಿ ಪಿ.ಕೆ.ಚೌದರಿ ಕಾರ್ಯಕ್ರಮ ಅಧ್ಯಕ್ಷತೆಯನ್ನು ಸೈಬಣ್ಣಾ ವಡಗೇರಿ ವಹಿಸಿದ್ದರು. ವಿವಿಧ ಸಾಧಕರಿಗೆ ಸನ್ಮಾನಿಸಲಾಯಿತು.
ಮಾರುತಿ ಹುಜರಾತಿ, ಸೋಮಶೇಖರ ಹಂಚಿನಾಳ, ಕಾಶಿನಾಥ ಡಿ ಆಲೂರು, ಪ್ರಕಾಶ ನಾಯಿಕೋಡಿ, ವಿಜಯಲಕ್ಷ್ಮೀ ಕಂದಳ್ಳಿ, ಡಾ ಭೀಮರಾಯ ಅರಕೇರಿ, ಧರ್ಮರಾಜ ಜವಳಿ, ರಾಮಚಂದ್ರ ಹಕ್ಕಿ, ಬಸವರಾಜ ನಿಂಬರಗಿ, ಅಂಜುಭಾಯಿ ಜಾಲವಾದಿ, ಸಿದ್ದಮ್ಮಾ ಬೆಣ್ಣೂರ, ಚಂದ್ರಕಾಂತ ತಳವಾರ, ಮಲ್ಲಿಕಾರ್ಜುನ ಜಮಾದಾರ, ರಾಜೇಂದ್ರ ಪ್ರಸಾದ್, ಗುರುಶಾಂತಪ್ಪ ಎಸ್ ನಾಟೀಕಾರ, ವಿಷ್ಣುತಿರ್ಥ, ಶರಣಬಸಪ್ಪ ನಾಟೀಕಾರ, ವಿದ್ಯಾಸಾಗರ ಚಿಣಮಗೇರಿ, ಮಹಾದೇವ ಮಣ್ಣೂರ, ಯಲ್ಲಾಲಿಂಗ ಕೋಬಾಳ, ರಾಜೇಂದ್ರ ಝಳಕಿ,ವೀರನಾಥ ಕೋಠಾರಿ, ವಾಣಿಶ್ರೀ ರಮೇಶ ದಾಸ, ಹಣಮಂತ ಮಂತಟ್ಟಿ, ಅಶೋಕ ಸೋನ್ನ, ಅಮೃತ ಮಾಲಿಪಾಟೀಲ, ಬಸವರಾಜ ಹೇರೂರ, ಸಂಜುಕುಮಾರ ಪಟ್ಟೇದಾರ ಹಾಗೂ ಇತರ ಸಮಾಜದ ಗಣ್ಯರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಕು.ಸೋನಾಲಿ ಬೆಟಗೇರಿ ನೇರವೆರಿಸಿದರು. ಶ್ರೀನಿವಾಸ ಅಕ್ಕಿ ಎಲ್ಲರಿಗೂ ಸ್ವಾಗತ ಕೋರಿದರು.ಕು.ರೇಣುಕಾ ಕೋತ್ತಲಿ ವಂದಿಸಿದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…