ಕಲಬುರಗಿ: ಭಾಷೆ ಮೇಲಿನ ಹಿಡಿತ, ಅವರದ್ದೇ ಆದ ಜೀವನಾನುಭವ, ಅಧ್ಯಾತ್ಮ, ಮನುಷ್ಯನ ಬಗೆಗೆ ಅಭೀಪ್ಸೆ ಇದೆ. ಸುಮ್ಮನೆ ಕೂತು ಕಾವ್ಯ ಬರೆಯುವ ಮನಸ್ಥಿತಿ ಭೀಜಿ ಅವರಿಗಿದೆ ಎಂದು ಸಿಯುಕೆ ಆಂಗ್ಲ ವಿಭಾಗದ ಮುಖ್ಯಸ್ಥ, ಲೇಖಕ ಡಾ.ಬಸವರಾಜ ಡೋಣೂರ ಅಭಿಪ್ರಾಯಪಟ್ಟರು.
ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ, ಸಮ ಸಾಹಿತ್ಯ ವೇದಿಕೆ ಸೇಡಂ, ಮಯೂರ ಪ್ರಕಾಶನ ಕಲಬುರಗಿ ಇವುಗಳ ಆಶ್ರಯದಲ್ಲಿ ಪ್ರತಿಭಾನ್ವಿತ ಯುವಕವಿ (ಭೀಮರಾಯ ಹೆಮನೂರ(ಭೀಜಿ) ಮುಳ್ಳು ಚೆಲ್ಲಿದ ಹಾದಿಗೆ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕೃತಿ ಕುರಿತು ಲಿಂಗಾರೆಡ್ಡಿ ಶೇರಿ ಮಾತನಾಡಿ, ಸಾಹಿತ್ಯದ ಆರಾಧನೆಯಲ್ಲಿ ತೊಡಗಿರುವ ಕವಿಯ ಈ ಕೃತಿಯಲ್ಲಿ ನಾಟಕ, ಆಧುನಿಕ ವಚನ, ಕವಿತೆ ಬರೆಯುವ ಮೂಲಕ ಮುಳ್ಳು ಚೆಲ್ಲಿದ ಹಾದಿಗೆ ಹೂ ಚೆಲ್ಲಿದವರು ಎಂದು ತಿಳಿಸಿದರು. ತೀಕ್ಷ್ಣ ಟೀಕೆ, ವಿಡಂಬನೆ ಮುಂತಾದ ಹೊಸತನಗಳನ್ನು ಪ್ರಯೋಗ ಮಾಡಿದ್ದಾರೆ ಎಂದರು.
ಬದುಕಿನ ತಲ್ಲಣಗಳಿಗೆ ಕವಿ, ಸಾಹಿತಿಯಾದವರು ತಮ್ಮ ಒಲವು-ನಿಲುವುಗಳನ್ನು ಸ್ಪಷ್ಟಪಡಿಸಬೇಕಿದೆ ಎಂಬುದನ್ನು ಹೇಳುತ್ತಾರೆ ಎಂದು ವಿವರಿಸಿದರು. ಸದ್ಗುರು ತೋಟೇಂದ್ರ ಅಂಕಿತನಾಮ ಬಳಸಿ ವಚನಗಳನ್ನು ಬರೆದಿರುವ ಇವರು, ಅಂತರಂಗ-ಬಹಿರಂಗ ಶುದ್ದಿಗೊಳಿಸುವ ಕ್ರಿಯೆ ತಮ್ಮ ಆಧುನಿಕ ವಚನಗಳಲ್ಲಿ ಮಾಡುತ್ತಾರೆ ಎಂದರು.
ಶರಣ ಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ ಸಮ್ಮುಖ ವಹಿಸಿದ್ದರು. ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ನರಸಿಂಗರಾವ ಹೆಮನೂರ, ಬಸವರಾಜ ಹೆಮನೂರ, ಸೇಡಂ ಪ್ರಾಧ್ಯಾಪಕ ಭೀಮಶಪ್ಪ, ಸಹಾಯಕ ಅಂಚೆ ಅಧೀಕ್ಷಕ ಶಿವಾನಂದ ಇದ್ದರು. ಇದ್ದರು.
ಡಾ. ರಾಜಶೇಖರ ಮಾಂಗ್ ನಿರೂಪಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್. ನಿರಗುಡಿ ಪ್ರಾಸ್ತಾವಿಕ ಮಾತನಾಡಿದರು. ಕವಿ ಭೀಮರಾಯ ಹೆಮನೂರ ಸ್ವಾಗತಿಸಿದರು. ಸುರೇಶ ಬಡಿಗೇರ, ಮಹಿಪಾಲರೆಡ್ಡಿ ಮುನ್ನೂರ್, ಚಾಮರಾಜ ದೊಡ್ಡಮನಿ, ಪ್ರೇಮಾ ಹೂಗಾರ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…