ಕಲಬುರಗಿ: ಎ.ಜೆ. ಸದಾಶಿವ ಆಯೋಗ ಜಾರಿ ಮಾಡಬೇಕು ಎಂದು ಆಗ್ರಹಿಸಿ ಇದೇ 15 ರಂದು ಅಫಜಲಪುರದಿಂದ ಕಲಬುರಗಿ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಡಿಎಂಎಂಎಸ್ ತಾಲ್ಲೂಕು ಸಮಿತಿಯ ಅಧ್ಯಕ್ಷ ದತ್ತು ಕೆ.ಐ ಹೊಳೆ ತಿಳಿಸಿದರು.
ಎ.ಜೆ ಸದಾಶಿವ ಆಯೋಗಜಾರಿ ಮಾಡಬೇಕೆಂದು ಕಳೆದ 3 ದಶಕಗಳಿಂದ ರಾಜ್ಯದಲ್ಲಿಇದುವರೆಗೂ ಅನೇಕ ರೀತಿಯಿಂದ ಹೋರಾಟ ಮಾಡಲಾಗಿದೆ.ಆದರೆ ಸರ್ಕಾರ ಮಾತ್ರಇದಕ್ಕೆಯಾವುದೇರೀತಿಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸದಿರುವುದು ಮಾದಿಗ ಸಮಾಜದ ಹೋರಾಟಗಾರರಆಕ್ರೋಶಕ್ಕೆ ಸರ್ಕಾರಕಾರಣವಾಗಿದೆಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸದಾಶಿವ ಆಯೋಗಜಾರಿಯಾದರೆ ಲಂಬಾಣಿ ಮತ್ತು ಭೋವಿ ಜನಾಂಗದವರು ಎಸ್‍ಸ್ಸಿ ಪಟ್ಟಿಯಿಂದ ಹೊರಗುಳಿಯುತ್ತಾರೆ ಎಂಬ ಅಪ ನಂಬಿಕೆ ಹೊಂದಿದ್ದಾರೆ. ಸದಾಶಿವ ಆಯೋಗದ ಪ್ರಕಾರಜನ ಸಂಖ್ಯಾಗನುಗುಣವಾಗಿ ಒಳ ಮೀಸಲಾತಿಯನ್ನುಅತ್ಯಂತ ಪಾರದರ್ಶಕತೆಯಿಂದಎಲ್ಲರಿಗೂ ಸಮಾನವಾದ ನ್ಯಾಯವನ್ನು ನೀಡುವಂತಹ ವರದಿ ಎ.ಜೆ ಸದಾಶಿವ ಆಯೋಗದ ವರದಿಯಾಗಿದೆ ಆದ್ದರಿಂದ ಇದರ ಜಾರಿ ಕುರಿತು 15 ರಂದು ಸುಮಾರು 200 ಜನರನ್ನೊಳಗೊಂಡು ಅಫಜಲಪುರದಿಂದ ಪಾದಯಾತ್ರೆ ಆರಂಭಿಸಿ 17 ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿಗೆ ಆಗಮಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದುಎಂದು ತಿಳಿಸಿದರು.
ಶ್ರೀಮಂತ ಭಂಡಾರಿ, ಶಿವಶಂಕರ ಐಹೊಳೆ, ಯಮನಪ್ಪಎಸ್. ಪಾಟೋಳಿ, ಪರಶುರಾಮ ಡಿ.ಹಡಲಗಿ, ನಿಂಗಪ್ಪ ಪಾಟೋಳಿ ಗುಂಡಪ್ಪಗಂಧೇನವರ ಸೇರಿದಂತೆ ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…