ಬಿಸಿ ಬಿಸಿ ಸುದ್ದಿ

ಅ.16ಕ್ಕೆ ಕಸಾಪದಿಂದ ಕಾವ್ಯ ಕಮ್ಮಟ

ಕಲಬುರಗಿ: ವಿಭಿನ್ನ ಮತ್ತು ವೈವಿದ್ಮಮಯ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇಂದಿನ ಉದಯೋನ್ಮುಖ ಕವಿಗಳಿಗೆ ಕಾವ್ಯ ರಚನೆ ಮತ್ತು ಕಾವ್ಯ ಪರಂಪರೆ ತಿಳಿಸುವ ನಿಟ್ಟಿನಲ್ಲಿ ಒಂದು ದಿನದ ಕಾವ್ಯ ಕಮ್ಮಟ-2022 ನ್ನು ಅ.16 ರಂದು ಬೆಳಗ್ಗೆ 10.15 ಕ್ಕೆ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರಣೆ ನೀಡಿದ ತೇಗಲತಿಪ್ಪಿ, ಕಲ್ಯಾಣ ಕರ್ನಾಟಕ ಪ್ರತಿಭಾನ್ವಿತರ ನಾಡು. ಇಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಅವರಿಗೆ ಅವಕಾಶಗಳು ಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಇತ್ತೀಚಿನ ದಿನಗಳಲ್ಲಿ ಅನೇಕ ಹೊಸ ಕವಿಗಳು, ಬರಹಗಾರರು ಅನೇಕ ಪುಸ್ತಕಗಳನ್ನು ಪ್ರಕಟ ಮಾಡುತ್ತಿರುವುದು ಸಾಹಿತ್ಯಿಕವಾಗಿ ಉತ್ತಮ ಬೆಳವಣಿಗೆಯಾಗಿದೆ. ಪ್ರಕಟವಾದ ಉದಯೋನ್ಮುಖ ಬರಹಗಾರರ ಪುಸ್ತಕಗಳಲ್ಲಿ ಹೆಚ್ಚಿನವು ಕವನ ಸಂಕಲನಗಳೇ ಆಗಿರುತ್ತವೆ ಎಂಬುದು ವಿಶೇಷ . ಅಂದರೆ ಬಹುತೇಕ ಹೊಸ ಕವಿಗಳ ಉದಯ ಕವನಗಳಿಂದಲೇ ಆಗುತ್ತದೆ.

ಆ ಉತ್ಸಾಹ ತುಂಬಿದ ಇಂದಿನ ಯುವ ಕವಿಗಳಿಗೆ ಬರಹ ಕೌಶಲ್ಯದ ಜತೆಗೆ ಕಾವ್ಯ ಸಾಹಿತ್ಯದ ಕುರಿತು ಅರಿವು ಮೂಡಿಸುವ ಪ್ರಯತ್ನವೇ ಕಾವ್ಯ ಕಮ್ಮಟದ ಉದ್ದೇಶವಾಗಿದೆ. ಕವಿಗಳ ಕಾವ್ಯ ರಚನೆಯಲ್ಲಿ ವೈವಿಧ್ಯತೆ, ಶೈಲಿ, ರಚನಾ ಕ್ರಮದ ರೀತಿಯಲ್ಲಿ ಸುಧಾರಣೆಯಾಗಿ ಉತ್ತಮ ರಸಭರಿತ ಕಾವ್ಯ ರಸ ಸಹೃದಯರಿಗೆ ತಲುಪಿದರೆ ಕಾವ್ಯ ಕಮ್ಮಟ ಸಾರ್ಥಕ ಎಂಬುದು ಪರಿಷತ್ತಿನ ಆಶಯವಾಗಿದೆ ಎಂದು ವಿವರಿಸಿದರು.

ಅಂದು ಬೆಳಗ್ಗೆ 10.15 ಕ್ಕೆ ಜರುಗಲಿರುವ ಕಾವ್ಯ ಕಮ್ಮಟ-2022 ನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಉದ್ಘಾಟಿಸಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ. ಅನೇಕ ಗಣ್ಯರು ಉಪಸ್ಥಿತರಿರುವರು.

ಬೆಳಗ್ಗೆ 11.30 ಕ್ಕೆ ಇರುವಂತೆ ಎರೆಯುವೆ ಎಂಬ ಗೋಷ್ಠಿಯಲ್ಲಿ ಕಾವ್ಯ ಸ್ಪೂರ್ತಿ ವಿಷಯ ಕುರಿತು ಹಿರಿಯ ಸಾಹಿತಿ ಭಂಟನೂರ ಗುರುಶಾಂತಯ್ಯಾ, ಕಾವ್ಯ ಗರಿಮೆ ವಿಷಯದ ಕುರಿತು ಲೇಖಕ ಡಾ. ಕೆ.ಗಿರಿಮಲ್ಲ ಮತ್ತು ಕಾವ್ಯ ಸ್ವರೂಪ ವಿಷಯದ ಕುರಿತು ಲೇಖಕಿ ಕಾವ್ಯಶ್ರೀ ಮಹಾಗಾಂವಕರ್ ಅವರು ಮಾತನಾಡಲಿದ್ದಾರೆ. ಅನೇಕ ಸಾಹಿತ್ಯ ಪ್ರೇರಕರು ಉಪಸ್ಥಿತರಿರುವರು.

ಮಧ್ಯಾಹ್ನ 2.45 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸರಕಾರಿ ಶಿಕ್ಷಣ ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಸಿದ್ರಾಮಯ್ಯಾ ಮಠ ಸಮಾರೋಪ ನುಡಗಳನ್ನಾಡಲಿದ್ದಾರೆ. ಅನೇಕ ಲೇಖಕರು ಉಪಸ್ಥಿತರಿರುವರು. ಕಾರ್ಯಕ್ರಮದ ಮಧ್ಯದಲ್ಲಿ ಅನೇಕ ಹಿರಿಯ ಮತ್ತು ಕಿರಿಯ ಕಲಾವಿದರು ಪ್ರಸಿದ್ಧ ಕನ್ನಡ ಗೀತೆಗಳ ಪ್ರಸ್ತುತಪಡಿಸಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮುಂಬರುವ ದಿನಗಳಲ್ಲಿ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ತತ್ವಪದ, ಜಾನಪದ, ವಿದ್ಯಾರ್ಥಿ, ಪೊಲೀಸ್ ಸಾಹಿತ್ಯ ಸಮಾವೇಶಗಳ ಜತೆಗೆ ಇನ್ನೂ ಅನೇಕ ವೈವಿದ್ಯಮಯ ಕಾರ್ಯಕ್ರಮಗಳ ರೂಪುರೇಷೆ ಹಾಕಿಕೊಂಡಿದ್ದೇವೆ. ಇವುಗಳನ್ನು ಅರ್ಥಪೂರ್ಣವಾಗಿ ಆಯೋಜಿಸಿ ಸಮಾಜಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಸಮಾವೇಶ ಮಾಡುತ್ತೇವೆ. – ವಿಜಯಕುಮಾರ ಪಾಟೀಲ ತೇಗಲತಿಪ್ಪಿ. ಅಧ್ಯಕ್ಷ, ಜಿಲ್ಲಾ ಕಸಾಪ, ಕಲಬುರಗಿ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಠಗಿ, ಡಾ. ಕೆ.ಗಿರಿಮಲ್ಲ, ಶಕುಂತಲಾ ಪಾಟೀಲ ಜಾವಳಿ, ಸಿದ್ಧಲಿಂಗ ಬಾಳಿ, ಶರಣಬಸವ ಜಂಗಿನಮ ಠ, ರಾಜೇಂದ್ರ ಮಾಡಬೂಳ, ನಾಗಣ್ಣಾ ರಾಂಪೂರೆ, ಸ್ನೇಹಲತಾ ಕಮಕನೂರ, ಶಿಲ್ಪಾ ಜೋಶಿ ಇತರರಿದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

10 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

21 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

21 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

23 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

23 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

24 hours ago