ಕಲಬುರಗಿ: ರಾಜ್ಯ ಸರಕಾರದ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿಯಲ್ಲಿ ಅಡುಗೆಯವರಾಗಿ ಕೆಲಸ ನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರಿಗೆ ಮತ್ತು ಸಹಾಯಕ ಅಡುಗೆಯವರಿಗೆ ಕಳೆದ 6 ತಿಂಗಳುಗಳ ವೇತನ ಪಾವತಿಸಿಲ್ಲ. ವೇತನ ದೊರೆಯದೆ ಬಿಸಿಯೂಟ ತಯ್ಯಾರಕರು ಸಂಕಷ್ಟಕ್ಕೊಳಗಾಗಿದ್ದು, ಕೂಡಲೇ ಜಿಲ್ಲೆಯಲ್ಲಿ ಬಾಕಿ ಉಳಿದಿರುವ ತಿಂಗಳುಗಳ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕ್ಕೆಗೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡೆರೇಷನ್ ಮನವಿ ಸಲ್ಲಿಸಿದರು.
ಸಂಘಟನೆ ನಿಯೋಗ ಮಂಗಳವಾರ ಶಿಕ್ಷಣ ಅಕ್ಷರ ದಾಸೋಹ ಯೋಜನಾ ಅಧಿಕಾರಿಗಳಿಗೆ ಭೇಟಿ ನೀಡಿದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಬಿ.ಟಿ ಮೂಲಕ ವೇತನ ಪಾವತಿಸುವ ವಿಧಾನದಲ್ಲಿ ಆಗುತ್ತಿರುವ ತೊಂದರೆಗಳನ್ನು ಸರಳ ರೀತಿಯಲ್ಲಿ ವೇತನ ಪಾವತಿಯಾಗುವಂತೆ ಕ್ರಮ ಜರುಗಿಸುವುದು, ಬಾಕಿ ಉಳಿದಿರುವ ಅಡುಗೆ ಸಾಮಗ್ರಿ ಮತ್ತು ತರಕಾರಿ ವೇತನ ಪಾವತಿ, ಬಿಸಿಯೂಟ ತಯಾರಿಕರಿಗೆ ರೂ.2.00 ಲಕ್ಷ ರೂ. ಅಪಘಾತ ಪರಿಹಾರ ಜಾರಿ, ಬಿಸಿಯೂಟ ತಯಾರಿಕರಿಗೆ ಕೆಲಸದ ಸಂದರ್ಭದಲ್ಲಿ ಆಗುವ ಅಪಘಾತ ಪರಿಹಾರ ಹಣ ಪಡೆಯಲು ಇಲಾಖೆ ಕಡ್ಡಾಯಗೊಳಿಸಿರುವ ಪೋಲಿಸ್ ಠಾಣೆಯಲ್ಲಿ ಎಫ್.ಐ.ಆರ್ ಮಾಡುವುದನ್ನು ರದ್ದುಗೊಳಿಸಿ, ಪರಿಹಾರ ಹಣ ಪಡೆಯಲು ಸರಳೀಕರಣಗೊಳಿಸಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭುದೇವ ಯಳಸಂಗಿ ಒತ್ತಾಯಿಸಿದ್ದಾರೆ.
ಬಿಸಿಯೂಟ ತಯ್ಯಾರಕರಿಗೆ ದಸರಾ ರಜೆ, ಬೇಸಿಗೆ ರಜೆ ಸೇರಿದಂತೆ ಒಟ್ಟು 12 ತಿಂಗಳುಗಳ ಸಂಬಳ, ಹಾಲಿ ಇರುವ ನಿಯದಂತೆ ಬಿಸಿಯೂಟ ತಯ್ಯಾರಕರಿಗೆ ಪ್ರತಿ ತಿಂಗಳು 5ನೇ ತಾರಿಖಿನಂದು ಸಂಬಳ ಪಾವತಿ, 60 ವರ್ಷ ಆದ ನಂತರ ಬಿಸಿಯೂಟದಿಂದ ನಿವೃತ್ತಿ ಆಗುತ್ತಿರುವ ಬಿಸಿಯೂಟ ತಯ್ಯಾರಕರು ಮತ್ತು ಸಹಾಯಕರಿಗೆ ಇಡುಗಂಟು 2.00 ಲಕ್ಷ ರೂಪಾಯಿ ಸಹಾಯಧನವನ್ನು ಪಾವತಿಗೆ ಸರಕಾರ ಮುಂದಾಗಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಈ ವೇಳೆಯಲ್ಲಿ ಮಹಾದೇವಿ ಜಾಧವ್, ಯಶೋದಾ ರಾಠೋಡ, ಅಂಬಿಕಾ.ಪಿ.ಶ್ರೀಗಣಿ, ಸುಜಾತಾ ದೊಡ್ಡಮನಿ, ಜಗದೇವಿ ಕಮಲಾಪೂರ, ಅನೀತಾ ಗೋಪಾಲ ಜಾಧವ,ಅಂಬಿಕಾ ಅಷ್ಟಗಿ, ಅಂಬಿಕಾ ರೇವೂರಕರ್, ಶಿವಲಿಂಗಮ್ಮ ನಾಗನಹಳ್ಳಿ, ಶಿವಲಿಂಗಮ್ಮ ಸಾವಳಗಿ ಸೇರಿದಂತೆ ಹಲವರು ಇದ್ದರು.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…