ಬಿಸಿ ಬಿಸಿ ಸುದ್ದಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ | ಸ್ಕಾಲರ್‍ಶಿಪ್‍ನಿಂದ ವಂಚಿತರಾಗುತ್ತಿದ್ದಾರಾ? ವಿದ್ಯಾರ್ಥಿಗಳು!

  • ಸಾಜಿದ್ ಅಲಿ

ಕಲಬುರಗಿ: ಅಲ್ಪಸಂಖ್ಯಾತರಕಲ್ಯಾಣಇಲಾಖೆಯಿಂದ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನಕ್ಕೆ ಇದೀಗ ಹಲವು ಎಡರು ತೊಡರುಗಳು ಎದುರಾಗಿವೆ. ದೇವರು ವರಕೊಟ್ಟರೂ ಪೂಜಾರಿ ವರಕೊಡಲಿಲ್ಲ ಎನ್ನುವಂತೆ ಖಾಸಗಿ ಶಾಲೆಗಳು ವಿದ್ಯಾರ್ಥಿ ವೇತನ ಹೆಸರಲ್ಲಿ ಸುಲಿಗೆ ಆರಂಭಿಸಿರುವ ಆರೋಪಗಳು ಸಹ ಕೇಳಿಬರುತ್ತಿವೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ಹಾಗೂ ಮೆರಿಟ್‍ಕಮ್ ಮೀನ್ಸ್ (ತಾಂತ್ರಿಕ ಕೋರ್ಸ್‍ಗಳು) ವಿದ್ಯಾರ್ಥಿ ವೇತನಕ್ಕೆ ಈಗಾಗಲೇ ಅರ್ಜಿಆಹ್ವಾನಿಸಲಾಗಿದ್ದು, ಮೆಟ್ರಿಕ್ ನಂತರ ಮತ್ತು ಮೆಟ್ರಿಕ್‍ ಕಮ್ ಮಿನ್ಸ್ ವೇತನಕ್ಕೆಅರ್ಜಿ ಸಲ್ಲಿಸುವ ದಿನಾಂಕ 31 ಅಕ್ಟೋಬರ್‍ಆಗಿದೆ. ಮೆಟ್ರಿಕ್ ಪೂರ್ವ ವೇತನಕ್ಕೆ ಅಕ್ಟೋಬರ್ 15 ಆಗಿದೆ.

ಬಿ.ಎ, ಬಿ.ಕಾಂ., ಬಿ.ಎಸ್.ಸಿ ಮತ್ತುತಾಂತ್ರಿಕ ಶಿಕ್ಷಣಗಳಾದ ಬಿ.ಎಸ್ಸಿ ನರ್ಸಿಂಗ್, ಡಿಪೆÇ್ಲಮಾ, ಇಂಜಿನಿಯರಿಂಗ್‍ಓದುತ್ತಿರುವ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳು ಈಗಾಗಲೇ ವಿದ್ಯಾರ್ಥಿ ವೇತನ ಪಡೆದಿದ್ದು, ದ್ವಿತೀಯ ವರ್ಷಕ್ಕೆಅರ್ಜಿ ಸಲ್ಲಿಸಲು ಪ್ರಥಮ ವರ್ಷದ ಅಂಕಪಟ್ಟಿ ಅಗತ್ಯವಿದೆ. ಆದರೆಆದರೆ ಪ್ರಥಮ ಸೆಮಿಸ್ಟರ್‍ಅಂಕಪಟ್ಟಿ ಈವರೆಗೆ ಬಂದಿರುವುದಿಲ್ಲ. ಅದರಂತೆ ಎರಡನೇ ಸೆಮಿಸ್ಟರ್ ಪರೀಕ್ಷೆ ಬರೆದರೂ ಈವರೆಗೆ ಫಲಿತಾಂಶ ಬಂದಿರುವುದಿಲ್ಲ. ಹೀಗಾಗಿ ಸಾವಿರಾರು ವಿದ್ಯಾರ್ಥಿಗಳು ವೇತನ ಪಡೆಯಲು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಮೆಟ್ರಿಕ್ ನಂತರ ಮತ್ತು ಮೆರಿಟ್‍ಕಮ್ ಮೀನ್ಸ್ ವಿದ್ಯಾರ್ಥಿ ವೇತನಕ್ಕೆಅರ್ಜಿ ಸಲ್ಲಿಸಿ ಬೋನಾಫೈಡ್ ಮೇಲೆ ಸಹಿ ಮಾಡಲು ಪ್ರಾಚಾರ್ಯರು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ಒಂದು ಅಂಕಪಟ್ಟಿಯ ಮೇಲೆ ಒಂದು ಬಾರಿ ಮಾತ್ರ ವೇತನ ಸಲ್ಲಿಸಲು ಅರ್ಹರು ಎಂಬ ನಿರ್ದೇಶನ ಇದೆ. ಅಂಕಪಟ್ಟಿ ಬರುವರೆಗೆ ಕಾಯಿರಿ ಎಂದು ಕಾಲೇಜಿನ ಅಡಳಿತ ವರ್ಗ ಮತ್ತು ಸಿಬ್ಬಂದಿ ತಿಳಿಸುತ್ತಿರುವುದರಿಂದ ವಿದ್ಯಾರ್ಥಿಗಳನ್ನು ಗೊಂದಲಕ್ಕೀಡಾಗುವಂತೆ ಮಾಡಿದೆ.

ಮೆಟ್ರಿಕ್ ನಂತರ ಮತ್ತು ಮೆಟ್ರಿಕ್ ಮೀನ್ಸ್ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಈ ರೀತಿಯ ಸಮಸ್ಯೆಯಾಗುತ್ತಿರುವುದು ಕೇಳಿ ಬಂದಿದೆ.ಈ ಕುರಿತಾಗಿ ಮೇಲಧೀಕಾರಿಗಳ ಗಮನಕ್ಕೆ ಕೂಡ ತರಲಾಗಿದೆ. ಖಾಸಗಿ ಶಾಲೆಗಳು ಪೆÇಷಕರಿಂದ ಹಣ ಪಡೆಯುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಪೆÇಷಕರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸಹಕರಿಸಬೇಕು. ಹಣ ಪಡೆಯಬಾರದು. ವೇತನ ಹೆಸರಲ್ಲಿ ಹಣ ಹೇಳುತ್ತಿರುವ ಶಾಲೆಗಳ ಬಗ್ಗೆ ಮಾಹಿತಿ ಅಥವಾ ದೂರು ನೀಡಿದರೆ ಅಂತಹ ಶಾಲೆಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು. – ಭಕ್ತಮಾಕರ್ಂಡೇಯ, ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕಲಬುರಗಿ.

ಇನ್ನೊಂದೆಡೆ ಖಾಸಗಿ ಶಾಲೆಗಳು ಪ್ರಿ ಮ್ಯಾಟ್ರಿಕ್ ವಿದ್ಯಾರ್ಥಿ ವೇತನದ ಹೆಸರಲ್ಲಿ ಶಾಲೆಯ ಶುಲ್ಕ ಭರಿಸಬೇಕೆಂದು ಪೋಷಕರ ಮೇಲೆ ಒತ್ತಡ ಹಾಕುತ್ತಿರುವ ಘಟನೆಗಳು ಜಿಲ್ಲೆಯ ಹಲವು ಕಡೆ ನಡೆಯುತ್ತಿವೆ. ಎನ್.ಎಸ್.ಪಿ (ನ್ಯಾಷನಲ್ ಸ್ಕಾಲರ್‍ಶಿಪ್ ಪೋರ್ಟ್‍ಲ್ ) ಹಾಗೂ ಎಸ್.ಎಸ್.ಪಿ (ಸ್ಟೇಟ್ ಸ್ಕಾಲರ್‍ಶಿಪ್ ಪೋರ್ಟ್‍ಲ್) ಹೆಸರಲ್ಲಿ ಪೆÇಷಕರಿಂದ 200ರಿಂದ 500ರ ವರೆಗೆ ಶಾಲೆಗಳು ಹಣ ಪಡೆಯುತ್ತಿವೆ. ಶಿಕ್ಷಣ ಇಲಾಖೆಯಾಗಲಿ ಅಥವಾ ಸ್ಕಾಲರ್‍ಶಿಪ್ ನೀಡುವಅಲ್ಪಸಂಖ್ಯಾತರ ಇಲಾಖೆ ನಿರ್ದೇಶನಇಲ್ಲದೇ ವಿದ್ಯಾರ್ಥಿಗಳಿಂದ ಅಂಕಪಟ್ಟಿ, ಅಧಾರಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಇನ್‍ಕಮ್, ಕಾಸ್ಟ್ ಸೆರ್ಟಿಫಿಕೆಟ್ ಸೇರಿದಂತೆ ಹಲವು ದಾಖಲೆಗಳು ಕೇಳುತ್ತಿವೆ. ಒಟ್ಟಾರೆಯಾಗಿಅಲ್ಪಸಂಖ್ಯಾತರ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಹೆಸರಲ್ಲಿ ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಹಣ ಕೀಳಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ವಿದ್ಯಾರ್ಥಿಗಳು ವೇತನ ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.

ನಾನು ಮೊದಲನೆ ಮತ್ತುಎರಡನೇ ಸೆಮಿಸ್ಟ್ ಪರೀಕ್ಷೆ ಬರೆದಿದ್ದು, ಮೊದಲನೆ ಸಮಿಸ್ಟರ್‍ ಅಂಕಪಟ್ಟಿ ಸಿಕ್ಕಿಲ್ಲ. ಎರಡನೇ ಸೆಮಿಸ್ಟರ್ ಪರೀಕ್ಷೆ ಬರೆದಿದ್ದೇನೆ. ಫಲಿತಾಂಶ ಬಂದಿಲ್ಲ. ಇದೀಗ ವಿದ್ಯಾರ್ಥಿ ವೇತನಕ್ಕೆಅರ್ಜಿ ಹಾಕಬೇಕು. ಅಂಕಪಟ್ಟಿ ಇಲ್ಲದರುವುದುರಿಂದ ಈ ಬಾರಿ ನಾನು ವೇತನಕ್ಕೆಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ.  -ಮುಸ್ಕಾನ್, ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ಕಲಬುರಗಿ.
ಮೆಟ್ರಿಕ್ ನಂತರ ಹಾಗೂ ಮೆರಿಟ್‍ಕಮ್ ಮೀನ್ಸ್ ತಾಂತ್ರಿಕ ಕೋರ್ಸ್‍ಗಳಿಗೆ ವಿದ್ಯಾರ್ಥಿಗಳು ಫಲಿತಾಂಶ ಮತ್ತು ಅಂಕಪಟ್ಟಿ ಸಿಗದಿರುವ ಸಮಸ್ಯೆಗಳು ಆಗುತ್ತಿದೆ. ಈಗಾಗಲೇ ಇಂತಹ ಕಾಲೇಜುಗಳಿಗೆ ಪರಿಯಾಯ ನಿರ್ದೇಶನ ನೀಡಲು ಮುಂದಾಗಿದ್ದೇವೆ. ಸಮಸ್ಯೆ ಅನುಭವಿಸುವ ವಿದ್ಯಾರ್ಥಿಗಳು ಇಲಾಖೆಗೆ ಭೇಟಿ ಮಾಹಿತಿ ನೀಡಿ. ಸೋಹೆಲ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿದ್ಯಾರ್ಥಿವೇತನ ಕೇಸ್ ವರ್ಕರ್.
emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

6 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

17 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

17 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

19 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

19 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

19 hours ago