ಬಿಸಿ ಬಿಸಿ ಸುದ್ದಿ

ಶಿಕ್ಷಕಕರೇ ನಿಜವಾದ ಜಗದ್ಗುರುಗಳು

ಕಲಬುರಗಿ: ವಿಶ್ವದಜ್ಞಾನಅರಿಯುವ ಮೂಲಕ ಇತರರಿಗೆಜ್ಞಾನ ನೀಡುವ ಶಿಕ್ಷಕರು ಮಾತೃಹೃದಯಿಗಳು. ನಿಸ್ವಾರ್ಥ ಸೇವಾ ಭಾವನೆಇರುವ ಶಿಕ್ಷಕರೇ ನಿಜವಾದ ಜಗದ್ಗುರುಗಳು ಎಂದು ಮುಗಳನಾಗವಿ ಸಂಸ್ಥಾನ ಹಿರೇಮಠದಅಭಿನವ ಸಿದ್ಧಲಿಂಗ ಸ್ವಾಮಿಗಳು ನುಡಿದರು.

ನಗರದಎನ್.ಜೆ.ಕಲ್ಯಾಣ ಮಂಟಪದಲ್ಲಿ ಮಹಾಜನ ಪೌಂಡೇಶನ್‍ಚಾರಿಟೇಬಲ್ ಮತ್ತು ವೆಲ್‍ಫೇರ್‍ಟ್ರಸ್ಟ್ ವತಿಯಿಂದರಾಷ್ಟ್ರ ಮತ್ತುರಾಜ್ಯ ಪ್ರಶಸ್ತಿ ಪುರಸ್ಕøತರಿಗೆ ಮತ್ತು ಪ್ರಾಥಮಿಕ ಹಾಗೂ ಪೌಢಶಾಲಾ ಶಿಕ್ಷಕರಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಸನ್ಮಾನಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಡಿದಅವರು, ನಮಗೆಲ್ಲರಿಗೂ ಬಾಲ್ಯದಿಂದಎದೆಗೆಅಕ್ಷರದ ಬೀಜ ಬಿತ್ತಿದ ಶ್ರೇಯಸ್ಸು ಶಿಕ್ಷಕರಿಗೆ ಸಲ್ಲುತ್ತದೆಅವರ ಸೇವೆ ಪರಿಶ್ರಮ ಗುರುತಿಸಿ ಗೌರವಿಸುವ ಮೂಲಕ ಮಹಾಜನ ಫೌಂಡೇಶನ್‍ಆದರ್ಶದಕಾರ್ಯ ಮಾಡುತ್ತಿದೆಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಮಾತನಾಡಿ, ಸರಳ ಸಾತ್ವಿಕ, ಯಾವುದೇ ಹಮ್ಮು ಬಿಮ್ಮುಗಳಿಲ್ಲದ ಶಿವಕಾಂತ ಮಹಾಜನಅವರುಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿಯಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದಜಿಲ್ಲಾಧ್ಯಕ್ಷ ಮಹೇಶ ಹೂಗರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಜಿಲ್ಲಾಧ್ಯಕ್ಷ ಮಲ್ಲಯ್ಯಗುತ್ತೇದಾರ, ಸರ್ಕಾರಿ ನೌಕರರ ಸಂಘದಜಿಲ್ಲಾಧ್ಯಕ್ಷರಾಜು ಲೇಂಗಟಿ ಮಾತನಾಡಿದರು.ಅಜೀಮ್ ಪ್ರೇಮ್‍ಜಿ ಫೌಂಡೇಶನ್‍ರಾಜ್ಯ ಮುಖ್ಯಸ್ಥರುದ್ರೇಶಎಸ್. ಮಾತನಾಡಿದರು.ಚವದಾಪುರಿ ಹಿರೇಮಠದರಾಜಶೇಖರ ಶಿವಾಚಾರ್ಯರು, ಚಿಂಚನಸೂರು ಶ್ರೀಗಳು, ಕರ್ನಾಟಕ ಲೋಕಸೇವಾ ಆಯೋಗದಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹು, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಜಿಲ್ಲಾಉಪಾಧ್ಯಕ್ಷ ವೀರಣ್ಣ ಗೋಳೆದ, ಮುಖಂಡರಾದಕಲ್ಯಾಣಪ್ಪ ಪಾಟೀಲ ಮಳಖೇಡ, ವಿದ್ಯಾಸಗರ ಶಾಬಾದಿ, ಅಂಕುಶ ಮಹಾಜನ, ಶರಣು ಮಹಾಜನ ಇತರರಿದ್ದರು.. ಸಂಗೀತಾಕಂತಿ ನಿರೂಪಿಸಿದರು. ಶಿವಶಂಕರ ಬಿರಾದಾರ ಸಂಗೀತಕಾರ್ಯಕ್ರಮ ನಡೆಸಿಕೊಟ್ಟರು.

ಸಾಮಾಜಿಕ ಸೇವೆಯಜೊತೆಗೆ ಶಿಕ್ಷಕರಿಗೆ ಸನ್ಮಾನಿಸುತ್ತಿರುವುದು ಶ್ಲಾಘನೀಯಕಾರ್ಯ.ಅವರ ಈ ನಿಷ್ಪøಹ ಸೇವಾ ಕಾರ್ಯಕ್ಕೆ ಶಿಕ್ಷಕರು ಸಹ ಕೈ ಜೋಡಿಸಬೇಕು.ಸಮಾಜ ಸೇವೆಯಜೊತೆಗೆ ಶಿಕ್ಷಕರ ಮತ್ತು ಗುರುಗಳ ಆಶೀರ್ವಾದದಿಂದ ಜೀವನದ ಸಾರ್ತಕತೆ ಪಡೆದುಕೊಳ್ಳಬೇಕು.ಶಿವಕಾಂತ ಮಹಾಜನಅವರ ಸಮಾಜಮುಖಿ ಕಾರ್ಯಗಳಿಗೆ ಸದಾ ನಮ್ಮ ಬೆಂಬಲವಿರುತ್ತದೆ. -ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮಿಗಳು, ಶ್ರೀಶೈಲಂ-ಸುಲಫಲ ಮಠ, ಕಲಬುರಗಿ.
ವಿದ್ಯೆ ಕಲಿಸಿದ ಗುರುಗಳನ್ನು ಗೌರವಿಸುವ ಮೂಲಕ ಸಮಾಜದಲ್ಲಿಉತ್ತಮ ಸಂಸ್ಕಾರ ಬೆಳೆಯಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಫೌಂಡೇಶನ್ ವತಿಯಿಂದ ಈಗಾಘಲೇ ಇತರೆ ಜಿಲ್ಲೆಗಳಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗಿದ್ದು, ಜಿಲ್ಲೆಯಲ್ಲಿ ಇದೀಗ ಇಂತಹ ಬೃಹತ್ ಸಮಾರಂಭಆಯೋಜಿಸುವ ಮೂಲಕ ಸಮಾಜಕ್ಕೆಉತ್ತಮ ಸಂದೇಶ ಸಾರುವುದು ನನ್ನಉದ್ದೇಶವಾಗಿದೆ. ನೂರಾರುಜನ ಶಿಕ್ಷಕರು ಹಾಗೂ ಶಿಕ್ಷಕಿಯರು ಆಗಮಿಸಿ ಸತ್ಕಾರ ಸ್ವೀಕರಿಸಿರುವುದು ನನಗೆ ಎಲ್ಲಿಲ್ಲದ ಸಂತೋಷತಂದಿದೆ. -ಶಿವಕಾಂತ ಸಿ. ಮಹಾಜನ, ಅಧ್ಯಕ್ಷ
emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

22 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago