ಕಲಬುರಗಿ: ವಿಶ್ವದಜ್ಞಾನಅರಿಯುವ ಮೂಲಕ ಇತರರಿಗೆಜ್ಞಾನ ನೀಡುವ ಶಿಕ್ಷಕರು ಮಾತೃಹೃದಯಿಗಳು. ನಿಸ್ವಾರ್ಥ ಸೇವಾ ಭಾವನೆಇರುವ ಶಿಕ್ಷಕರೇ ನಿಜವಾದ ಜಗದ್ಗುರುಗಳು ಎಂದು ಮುಗಳನಾಗವಿ ಸಂಸ್ಥಾನ ಹಿರೇಮಠದಅಭಿನವ ಸಿದ್ಧಲಿಂಗ ಸ್ವಾಮಿಗಳು ನುಡಿದರು.
ನಗರದಎನ್.ಜೆ.ಕಲ್ಯಾಣ ಮಂಟಪದಲ್ಲಿ ಮಹಾಜನ ಪೌಂಡೇಶನ್‍ಚಾರಿಟೇಬಲ್ ಮತ್ತು ವೆಲ್‍ಫೇರ್‍ಟ್ರಸ್ಟ್ ವತಿಯಿಂದರಾಷ್ಟ್ರ ಮತ್ತುರಾಜ್ಯ ಪ್ರಶಸ್ತಿ ಪುರಸ್ಕøತರಿಗೆ ಮತ್ತು ಪ್ರಾಥಮಿಕ ಹಾಗೂ ಪೌಢಶಾಲಾ ಶಿಕ್ಷಕರಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಸನ್ಮಾನಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಡಿದಅವರು, ನಮಗೆಲ್ಲರಿಗೂ ಬಾಲ್ಯದಿಂದಎದೆಗೆಅಕ್ಷರದ ಬೀಜ ಬಿತ್ತಿದ ಶ್ರೇಯಸ್ಸು ಶಿಕ್ಷಕರಿಗೆ ಸಲ್ಲುತ್ತದೆಅವರ ಸೇವೆ ಪರಿಶ್ರಮ ಗುರುತಿಸಿ ಗೌರವಿಸುವ ಮೂಲಕ ಮಹಾಜನ ಫೌಂಡೇಶನ್‍ಆದರ್ಶದಕಾರ್ಯ ಮಾಡುತ್ತಿದೆಎಂದರು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಮಾತನಾಡಿ, ಸರಳ ಸಾತ್ವಿಕ, ಯಾವುದೇ ಹಮ್ಮು ಬಿಮ್ಮುಗಳಿಲ್ಲದ ಶಿವಕಾಂತ ಮಹಾಜನಅವರುಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿಯಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದಜಿಲ್ಲಾಧ್ಯಕ್ಷ ಮಹೇಶ ಹೂಗರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಜಿಲ್ಲಾಧ್ಯಕ್ಷ ಮಲ್ಲಯ್ಯಗುತ್ತೇದಾರ, ಸರ್ಕಾರಿ ನೌಕರರ ಸಂಘದಜಿಲ್ಲಾಧ್ಯಕ್ಷರಾಜು ಲೇಂಗಟಿ ಮಾತನಾಡಿದರು.ಅಜೀಮ್ ಪ್ರೇಮ್‍ಜಿ ಫೌಂಡೇಶನ್‍ರಾಜ್ಯ ಮುಖ್ಯಸ್ಥರುದ್ರೇಶಎಸ್. ಮಾತನಾಡಿದರು.ಚವದಾಪುರಿ ಹಿರೇಮಠದರಾಜಶೇಖರ ಶಿವಾಚಾರ್ಯರು, ಚಿಂಚನಸೂರು ಶ್ರೀಗಳು, ಕರ್ನಾಟಕ ಲೋಕಸೇವಾ ಆಯೋಗದಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹು, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಜಿಲ್ಲಾಉಪಾಧ್ಯಕ್ಷ ವೀರಣ್ಣ ಗೋಳೆದ, ಮುಖಂಡರಾದಕಲ್ಯಾಣಪ್ಪ ಪಾಟೀಲ ಮಳಖೇಡ, ವಿದ್ಯಾಸಗರ ಶಾಬಾದಿ, ಅಂಕುಶ ಮಹಾಜನ, ಶರಣು ಮಹಾಜನ ಇತರರಿದ್ದರು.. ಸಂಗೀತಾಕಂತಿ ನಿರೂಪಿಸಿದರು. ಶಿವಶಂಕರ ಬಿರಾದಾರ ಸಂಗೀತಕಾರ್ಯಕ್ರಮ ನಡೆಸಿಕೊಟ್ಟರು.