ವಿಶ್ವ ಆಘಾತ ದಿನದ ಅಂಗವಾಗಿ ಮನ್ನೂರ ಆಸ್ಪತ್ರೆವತಿಯಿಂದ ಕಲಬುರಗಿ ಸಂಚಾರಿ ಪೊಲೀಸ್ ಸಿಬ್ಬಂದಿಯವರಿಗೆ 100 ಕ್ಕೂ ಅಧಿಕ ಹೆಲ್ಮೆಟ್ ವಿತರಿಸಿದ್ದರು.
ಕಲಬುರಗಿ : ತುರ್ತು ಸಂದರ್ಭದಲ್ಲಿ ಜೀವಗಳನ್ನು ಉಳಿಸುವ ಮಹತ್ವವನ್ನು ತಿಳಿಸುವ ಹಾಗೂ ಅಘಾತಗಳನ್ನು ಹೇಗೆ ನಿಭಾಯಿಸಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ಆಘಾತ ಜಾಗೃತಿದಿನ (ಟ್ರೋಮಾ ಡೇ)ಪ್ರಯುಕ್ತ ನಗರದ ಪ್ರತಿಷ್ಠಿತ ಮನ್ನೂರ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆವತಿಯಿಂದ ನಗರದಲ್ಲಿ ಜಾಗೃತಿ ಜಾಥಾ ನಡೆಸಿದ್ದರು.
ಮನ್ನೂರ ಆಸ್ಪತ್ರೆಯಿಂದ ಖರ್ಗೆ ವೃತದಿಂದ ಅ್ರನಪೂರ್ಣಕ್ರಾಸ ಮಾರ್ಗಾವಾಗಿ ನಗರದ ಜಗತ್ ವೃತದ ವರೆಗೆ ಜಾಗೃತಿ ಜಾಥಾ ಹಾಗೂ ವಿವಿಧ ಕಲಾ ತಂಡದಿಂದ ಬೀದಿ ನಾಟಕ ಪ್ರರ್ಶಗನದ ಜೊತೆಗೆ ಜಾಗೃತಿ ಫಲಕಗಳನ್ನು ಜಾಥಾದಲ್ಲಿ ಪ್ರದರ್ಶಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಆಸ್ಪತ್ರೆಯ ಮುಖ್ಯಸ್ಥ ಡಾ ಫಾರೂಕ್ ಮನ್ನೂರ ಮಾತನಾಡಿ ನಮ್ಮ ಸುತ್ತಮುತ್ತ ಇರುವ ವ್ಯಕ್ತಿಗಳಿಗೆ ಹಠಾತ್ತಾಗಿ ಹೃದಯಾಘಾತ, ಅಪಘಾತ ಅಥವಾ ಇನ್ನು ಯಾವುದಾದರೂ ಅವಘಡಗಳಾಗಿ ಅಫಘಾತಕ್ಕೀಡಾದಾಗಏನು ಮಾಡಬೇಕು ಎಂದು ತೋಚುವುದೇ ಇಲ್ಲ ಹೀಗಾಗಿ ಆ ಒಂದು ತುರ್ತು ಸಂದರ್ಭದಲ್ಲಿ ವೈದ್ಯಕೀಯ ಸೌಲಭ್ಯಕ್ಕೆ ಅವರನ್ನು ಸಾಗಿಸಲು ಕೈ ಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಮ್ಮ ಆಸ್ಪತ್ರೆವತಿಯಿಂದ ಈ ಒಂದು ವಿಶ್ವ ಅಘಾತ ದಿನದ ಅಂಗವಾಗಿ ಜನ ಜಾಗೃತಿ ಮೂಡಿಸುವ ಪರಿಣಾಮ ಕಾರಿ ಪ್ರಯತ್ನ ಮಾಡಿದ್ದೇವೆ ಎಂದರು.
ಎ.ಸಿ.ಪಿ ಗಿರೀಶ್ ಸೋಮನಳ್ಳಿ ಮಾತನಾಡಿ ಮನ್ನೂರ ಆಸ್ಪತ್ರೆಯ ವೈದ್ಯರ ತಂಡ ಚಿಕಿತ್ಸೆ ನೀಡುವುದಕ್ಕೆ ಸಿಮಿತವಾಗದೆ ಸಾರ್ವಜನಿಕರಿಗೆ ಅನೂಕೂಲ ಆಗೂವ ದೃಷ್ಠಿಯಿಂದ ಆಘಾತ ದಿನದ ಅಂಗವಾಗಿ ನಗರದಲ್ಲಿ ಸಾರ್ವಜನಿಕರಿಗೆ ಜಾಗೃತಿ ಜಾಥಾ ಮೂಡಿಸಿರುವು ಶಾಘ್ಲನೀಯವಾಗಿದೆ ಎಂದರು.
ಇದೇ ವೇಳೆ ವಿಶ್ವ ಆಘಾತ ದಿನದ ಅಂಗವಾಗಿ ಸಂಚಾರಿ ಪೊಲೀಸ್ ಸಿಬ್ಬಂದಿಯವರಿಗೆ ಹೆಲ್ಮೆಟ್ ವಿತರಿಸಿದ್ದರು. ಈ ಸಂದರ್ಭ ಸಂಚಾರಿ ಸಿಪಿಐ ಶಾಂತಿನಾಥ , ಡಾ.ಮಿರ್ಜಾ ಉಸ್ಮಾನ ಬೇಗ, ಕೆ.ಎಮ್.ಡಿ.ಸಿ ರಾಜ್ಯ ನಿರ್ದೆಶಕ ಸದ್ದಾಂ ವಜೀರಗಾವ, ಉದಯ್ ಪಾಟೀಲ್. ಡ್ರಾ ಅನಿಲ್ ಎಸ್.ಕೆ, ಡಾ. ಮತಿನ್ ಅಲಿ, ಡಾ. ಅನಿಲ್ ಮಲ್ಹರಿ , ಡಾ.ಸಾಗರ್ ಕಟರೆ , ಡಾ ಮುಜಮಿಲ್ಲ . ಹಾಗೂ ನಗರ ಸಂಚಾರಿ ಪೊಲೀಸ್ ಇಲಾಖೆ ಸಿಬ್ಬದಿಂಗಳು ಹಾಗೂ ಮನೂರ್ ಆಸ್ಪತ್ರೆಯ ಸಿಬ್ಬಂದಿ ರ್ಗಾದವರು ಹಾಜರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…