ಕಲಬುರಗಿ: ಕರ್ನಾಟಕ ರಾಜ್ಯ ಸರಕಾರದ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿಯಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರಿಗೆ ಮತ್ತು ಸಹಾಯಕ ಅಡುಗೆಯವರಿಗೆ ಕಳೆದ 6 ತಿಂಗಳುಗಳ ವೇತನ ಪಾವತಿಸಿಲ್ಲ. ವೇತನ ಇಲ್ಲದೇ ಜೀವನ ಹೇಗೆ ನಡೆಸಬೇಕು?ಎನ್ನುವದಕ್ಕೆ ಮುಖ್ಯಮಂತ್ರಿ ಉತ್ತರಿಸಬೇಕೆಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ನ ರಾಜ್ಯ ನಾಯಕಿಕಲ್ಪನಾ ಗುರುಸಿಣಗಿ ಒತ್ತಾಯಿಸಿದರು.
ನಗರದ ಎ.ಐ.ಟಿ.ಯು.ಸಿ. ಕಚೇರಿ ಆವರಣದಲ್ಲಿ ಭಾನುವಾರ ನಡೆದ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕಲ್ಪನಾ ಸರಕಾರ ಕೂಡಲೇ ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ವೇತನಗಳನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತಕಮ್ಯೂನಿಸ್ಟ್ ಪಕ್ಷದಜಿಲ್ಲಾ ಕಾರ್ಯದರ್ಶಿ ಡಾ. ಮಹೇಶಕುಮಾರರಾಠೋಡಅವರು, ಡಿಜಿಟಲ್‍ಇಂಡಿಯಾಆದ ಮೇಲೆ ವೇತನ ಪಾವತಿಯಂತಹ ಕೆಲಸಗಳು ಸುಲಲಿತವಾಗಬೇಕುಆದರೆಡಿಜಿಟಲ್‍ಇಂಡಿಯಾದಲ್ಲಿ ವೇತನವೇ ಸರಿಯಾಗಿ ಪಾವತಿಯಾಗುತ್ತಿಲ್ಲ, ವೇತನ ಅಷ್ಟೇ ಅಲ್ಲಅಡುಗೆಯ ಸಾಮಗ್ರಿ ಹಣ ಸೇರಿದಂತೆಅಕ್ಷರದಾಸೋಹ ಬಿಸಿಯೂಟ ತಯಾರಕರಎಲ್ಲಾ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರಕೂಡಲೇ ಬಗೆಹರಿಸಬೇಕುಎಂದು ಒತ್ತಾಯಿಸಿದರು.
ಇನ್ನೊಬ್ಬ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಎಐಟಿಯುಸಿ ರಾಜ್ಯಉಪಾದ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಪ್ರಭುದೇವ ಯಳಸಂಗಿಯವರು, ಬಿಸಿಯೂಟ ನೌಕರರಿಗೆ ಕನಿಷ್ಟ ವೇತನಕಾಯ್ದೆಯನ್ವಯ ವೇತನ ಪಾವತಿಸಬೇಕೆಂದು ಆಗ್ರಹಿಸಿದರು.
ಎ.ಐ.ಟಿಯುಸಿ ಜಿಲ್ಲಾಅದ್ಯಕ್ಷರಾದ ಹೆಚ್.ಎಸ್.ಪತಕಿ, ಭಾರತೀಯ ಮಹಿಳಾ ಒಕ್ಕೂಟದಜಿಲ್ಲಾ ಮುಖಂಡರಾದ ಪದ್ಮಾವತಿ ಮಾಲಿಪಾಟೀಲ್, ಅಖಿಲ ಭಾರತ ಕಿಸಾನ ಸಭಾದಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಎಊಟಿಯುಸಿ ಕಾರ್ಯದರ್ಶಿಗಳಾದ ಹಣಮಂತರಾಯಅಟ್ಟೂರ, ಶಿವಲಿಂಗಮ್ಮ ಲೆಂಗಟೆಕರ್, ಶ್ರೀದೇವಿ ಕುಡಲಗಿ, ಬಸ್ಸಮ್ಮತಡಬಿಡಿ, ಅನಿತಾ ಭಕರೆ, ಲಕ್ಷೀದೊಡ್ಡಮನಿ, ಯಶೋಧಾರಾಠೋಡ, ಮುಂತಾದವರು ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಸಮಾವೇಶದಅದ್ಯಕ್ಷತೆಯನ್ನು ಮಹಾದೇವಿ ಜಾಧವಅವರು ವಹಿಸಿದ್ದರು.ಈ ಸಮಾವೇಶದಲ್ಲಿ ಈ ಕೆಳಗಿನ ನಿರ್ಣಯಗಳನ್ನು ಅಂಗೀಕರಿಸಲಾಯಿತು. ಹಾಗೂ ಮುಂದಿನ ದಿನಗಳಲ್ಲಿ ನಿರ್ಣಯಗಳ ಅನುಷ್ಟಾನಕ್ಕಾಗಿ ಹೋರಾಟಗಳನ್ನು ತೀವೃಗೊಳಿಸಲು ತೀರ್ಮಾನಿಸಲಾಯಿತು.
ಅಂಬಿಕಾ ಪಿ ಶ್ರೀಗಾಣಿ, ಸುಜಾತಾದೊಡ್ಮನಿ, ಜಗದೇವಿ ಕಮಲಾಪೂರ, ಅನಿತಾ ಗೋಪಾಲ ಜಾಧವ್, ಅಂಬಿಕಾ ಅಷ್ಟಗಿ, ಅಂಬಿಕಾ ರೇವೂರಕರ್, ಶಿವಲಿಂಗಮ್ಮ ನಾಗನಳ್ಳಿ, ಶ್ರೀಮತಿ ಶಿವಲಿಂಗಮ್ಮ ಸಾವಳಗಿ, ಪದ್ಮಾವತಿಈಟಿ, ಮಹಾದೇವಿ ಬಾಪುನಗರ, ರಂಗಮ್ಮ, ಸಂಗೀತಾ ಅಷ್ಟಗಿ ಮುಂತಾದವರು ಉಪಸ್ಥಿತರಿದ್ದರು.
ಶಿವಲಿಂಗಮ್ಮ ಲೆಂಗಟೇಕರ್ ಸ್ವಾಗತಿಸಿದರು, ಯಶೋಧಾರಾಠೋಡಕಾರ್ಯಕ್ರಮ ನಿರೂಪಿಸಿದರು, ಸಂಗೀತಾ ಅಷ್ಟಗಿ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…