ಶಹಾಬಾದ : ಇತ್ತಿಚ್ಚಿಗೆ ಬಿಟ್ಟು ಬಿಡದೇ ಸುರಿದ ಮಳೆಯಿಂದ ಬಿತ್ತಿ ಬೆಳೆದ ರೈತನ ಬೆಳೆ ನೀರಿನಿಂದ ಜಲಾವೃತಗೊಂಡು ಅಪಾರ ಹಾನಿಯನ್ನುಂಟು ಮಾಡಿದೆ.ತಾಲೂಕಿನ ಸುತ್ತಮುತ್ತಲಿನ ಹೊಲದಲ್ಲಿ ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾದ ಪರಿಣಾಮ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ಜೂನ್ ತಿಂಗಳಲ್ಲಿ ಸರಿಯಾದ ಸಮಯಕ್ಕೆ ಮಳೆ ಪ್ರಾರಂಭವಾಗಿದ್ದರಿಂದ ರೈತರಿಗೆ ಎಲ್ಲಿಲ್ಲದ ಸಂತೋಷ ಉಂಟಾಗಿತ್ತು. ನಂತರ ಸುರಿದ ಅಲ್ಪ ಮಳೆಗೆ ಮೊಳಕೆ ಒಡೆದು ಬಂದ ಬೆಳೆ ಬಾಡುವ ಹೊತ್ತಿಗೆ ಮಳೆ ಬಂದಿದ್ದರಿಂದ ತುಸು ಬೆಳೆಗಳಿಗೆ ಜೀವ ಬಂದಿತು. ನಂತರ ಅಲ್ಲಿಂದ ಇಲ್ಲಿಯವರೆಗೆ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ಬಹುತೇಖ ಮುತ್ತಗಿ,ಮರತೂರ, ಭಂಕೂರ, ತೊನಸನಹಳ್ಳಿ,ಗೋಳಾ(ಕೆ),ಶಂಕರವಾಡಿ, ಹೊನಗುಂಟಾ ಗ್ರಾಮದ ರೈತರು ಬೆಳೆದ ಬೆಳೆ ನಾಶವಾಗಿ ರೈತ ಕಣ್ಣೀರು ಸುರಿಸುವಂತಾಗಿದೆÉ. ಸಾಲ ಮಾಡಿ ಬೀಜ,ಗೊಬ್ಬರ್ ಹಾಗೂ ಕ್ರಿಮಿನಾಶಕ ಖರೀದಿಸಿದ ರೈತ ಬೆಳೆ ಬಾರದಿರುವುದರಿಂದ ಸಾಲ ಸೂಳಿಯಲ್ಲಿ ಸಿಲುಕಿದಂತಾಗಿದೆ.
ಜೂನ್ ತಿಂಗಳಿನಿಂದ ನಿರಂತರವಾಗಿ ಮಳೆ ಬಂದ ಪರಿಣಾಮ ಬಿತ್ತನೆ ಮಾಡಲು ಅವಕಾಶ ಸಿಗಲಿಲ್ಲ.ಹೊಲದಲ್ಲಿ ನೀರು ನಿಂತು ಬಿತ್ತನೆಗೂ ತೊಂದರೆಯಾಗಿತ್ತು.ಇದರಿಂದ ಮುಂಗಾರು ಬೆಳೆಗಳಾದ ಹೆಸರು, ಉದ್ದು ಸಂಪೂರ್ಣ ಬಿತ್ತಲಾರದೇ ತೊಂದರೆಗೆ ರೈತರು ಒಳಗಾದರು. ಆದರೆ ಜುಲೈ ತಿಂಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ, ಹೊಲ ಗಾಳಿಯಾಡಿದ್ದರಿಂದ ರೈತರು ತೊಗರಿ ಬಿತ್ತನೆ ಮಾಡಿದರು.ಅಲ್ಲದೇ ಬೀಜವೂ ಮೊಳಕೆಯೊಡೆದು ಎರಡು ಎಲೆ ಬಿಟ್ಟಿದ್ದ ಬೆಳೆಯನ್ನು ಕಂಡು ರೈತರು ಸಂತಸದಲ್ಲಿದ್ದರು.ಆದರೆ ಮತ್ತೆ ಸುರಿದ ನಿರಂತರ ಮಳೆಯಿಂದ ರೈತರ ಹೊಲಗಳಲ್ಲಿ ನೀರು ಜಮಾವಣೆಗೊಂಡು ಅಲ್ಪಸ್ವಲ್ಪ ಉಳಿದ ಬೆಳೆಗಳ ಬೇರು ಕೊಳೆತು ನಾಶವಾಗಿದೆ.
ಇದರಿಂದ ರೈತ ಆರ್ಥಿಕ ಸಂಕಷ್ಟದಲ್ಲಿ ತೊಳಲಾಡುತ್ತಿದ್ದಾನೆ.ಅವನ ನೆರವಿಗೆ ಸರಕಾರ ಬರಬೇಕಿದೆ. ಇತ್ತ ಸಂಬಂಧಪಟ್ಟ ಅಧಿಕಾರಿಗಳು ಧಾವಿಸಿ ಹಾನಿಯಾದ ಬೆಳೆಗಳ ಸಮೀಕ್ಷೆ ಮಾಡಿದ್ದಾರೆ. ಅಲ್ಲದೇ ಹಾನಿಯಾದ ರೈತರಿಗೆ ಪರಿಹಾರ ಧನ ಸರಿಯಾಗಿ ಬಂದಿಲ್ಲ. ನಷ್ಟ ಅನುಭವಿಸಿದ ಎಲ್ಲಾ ರೈತರಿಗೆ ಬೆಳೆ ಪರಿಹಾರ ಮುಟ್ಟುವಂತ ಕಾರ್ಯ ಕೈಗೊಳ್ಳಬೇಕಿದೆ ಎಂದು ಗೋಳಾ (ಕೆ) ರೈತ ರಾಜೇಶ ಯನಗುಂಟಿಕರ್ ಆಗ್ರಹಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…