ಹೈದರಾಬಾದ್ ಕರ್ನಾಟಕ

ಅಂಗವಿಕಲರನ್ನು ಸಮಾಜವು ಗೌರವದಿಂದ ಕಾಣಬೇಕು: ಅಂಜಲಿ ಕಂಬಾನೂರ

ಶಹಾಬಾದ: ಅಂಗವಿಕಲತೆ ಶಾಪವಲ್ಲ. ಅಂಗವೈಕಲ್ಯದಿಂದ ಬಳಲುತ್ತಿರುವವರನ್ನು ಸಮಾಜವು ಗೌರವದಿಂದ ಕಾಣಬೇಕಿದೆ ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.

ಅವರು ರವಿವಾರ ನಗರದ ಸಹರಾ ಫಂಕ್ಷನ್ ಹಾಲನಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಲಬುರಗಿ ಹಾಗೂ ಶ್ರೀಯಾನ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ವಿಕಲಚೇತನರಿಗೆ ಸಾಧನ ಸಲಕರಣೆಗಾಗಿ ಮೌಲ್ಯ ಮಾಪನ ಹಾಗೂ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಅಂಗವಿಕಲರಿಗೆ ಬೇಕಾಗಿರುವುದು ಅನುಕಂಪವಲ್ಲ ಅವಕಾಶ.ಅಂಗವಿಕಲರು ಅಸಹಾಯಕರಲ್ಲ.ಅವರಿಗೆ ಸರಕಾರದಿಂದ ಅಗತ್ಯ ಸೌಲಭ್ಯ ಕಲ್ಪಿಸಿದಲ್ಲಿ ಸದೃಢರಿಗಿಂತಲೂ ಹೆಚ್ಚಿನದನ್ನು ಸಾಧಿಸಿ ತೋರುವ ಸಾಮಥ್ರ್ಯವಿದೆ.ಎಲ್ಲಾ ಇದ್ದು ಏನು ಮಾಡದೇ ಇರುವವರು ನಿಜವಾದ ಅಂಗವೈಕಲ್ಯರು.ದೇಹದ ಒಂದು ಕಳೆದುಕೊಂಡರು ಏನಾದರೂ ಮಾಡುವೆನೆಂಬ ತುಡಿತಕ್ಕೆ ಸಮಾಜ ಹಾಗೂ ಸರಕಾರ ಬೆಂಬಲ ನೀಡಿದರೆ ಅದ್ಭುತ ಬದಲಾವಣೆಯನ್ನು ಕಾಣಬಹುದು. ಒಂದು ಸರಕಾರ ಮಾಡದಂಥ ಸಾಧನೆಯನ್ನು ಪಂಡಿತ್ ಗವಾಯಿಗಳು ಮಾಡಿದ್ದಾರೆ. ಅವರ ಸಾಧನೆಯು ಅಂಗವಿಕಲರಿಗೆ ಸ್ಪೂರ್ತಿಯ ಸೆಲೆಯಾಗಬೇಕು. ಸಮಾಜದಲ್ಲಿ ಅಂಗವಿಕಲರನ್ನು ನೋಡುವ ಮನೋಭಾವ ಬದಲಾಗಬೇಕು. ಅವರಿಗೂ ಅವಕಾಶ ಕಲ್ಪಿಸಬೇಕು ಆಗ ಮಾತ್ರ ಅವರ ಸಾಧನೆ ತೋರಿಸಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ ಮಾತನಾಡಿ, ಪ್ರತಿ ಅಂಗವಿಕಲ ವ್ಯಕ್ತಿ /ಮಗುವಿನ ಅವಶ್ಯಕತೆಗೆ ಪೂರಕವಾದ ಯೋಜನೆ ರೂಪಿಸಬೇಕು. ಎಲ್ಲರಿಗೂ ಒಂದೇ ರೀತಿಯ ವ್ಹೀಲ್ಚೇರ್, ಪರಿಕರ ನೀಡಿದರೆ ಆಗದು.ಅಂಗವಿಕಲ ವ್ಯಕ್ತಿಗಳ ಅವಶ್ಯಕತೆಗೆ ಅನುಗುಣವಾದ ಕಾರ್ಯಕ್ರಮಗಳ ಅನುμÁ್ಠನ ಕುರಿತು ಚಿಂತನೆ ಆಗಬೇಕಿದೆ ಎಂದರು. ಶ್ರೀಯಾನ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ರಾಜು ಶಾಖಾಪೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ಸ್ವಪ್ನಿಲ ಕಲ್ಲೂರಕರ, ನಗರ ಸಭೆಯ ಮಾಜಿ ಸದಸ್ಯ ನರಸಿಂಹಲು ರಾಯಚೂರಕರ, ಹರಿಕೃಷ್ಣ, ಪತ್ರಕರ್ತ ಲೋಹಿತ್ ಕಟ್ಟಿ, ಅಂಬರೀಶ ನಾಯಕ ವೇದಿಕೆ ಮೇಲೆ ಇದ್ದರು.

ಶಿಬಿರದಲ್ಲಿ 125 ಜನ ಅಂಗವಿಕಲರ ಮೌಲ್ಯಮಾಪನ ನೊಂದಣಿ ಮಾಡಿ ಜಿಲ್ಲಾ ಕಲ್ಯಾಣಾಧಿಕಾರಿಗಳಿಗೆ ಒಪ್ಪಿಸಲಾಯಿತು. ವಿಜಯಲಕ್ಷ್ಮಿ ಮಾಳಗಿ ಸ್ವಾಗತಿಸಿದರು, ಶಿವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು, ನಾನಾಗೌಡ ಪಾಟೀಲ ನಿರೂಪಿಸಿ, ವಂದಿಸಿದರು.
ಶಿಬಿರದಲ್ಲಿ ವಿಜಯಲಕ್ಷ್ಮಿ, ದತ್ತು, ಕೃಷ್ಣ, ಮಾಹಾಂತೇಶ, ಮೋಹನ ಹಳ್ಳಿ, ಮಲ್ಲೇಶಿ ಭಜಂತ್ರಿ, ಯಲ್ಲಪ್ಪ ದಂಡಗುಳಕರ, ಶ್ರೀನಿವಾಸ, ಚಂದ್ರಶೇಖರ ಪಾಟೀಲ ಉಪಸ್ಥಿತರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

6 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

22 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago