ಕಲಬುರಗಿ: ಸ್ವಚ್ಛ ಸರ್ಕಾರ, ಸ್ವಚ್ಛ ಆಡಳಿತ ಸಿಗಬೇಕು ಎಂಬ ಜನರ ಬಯಕೆ. ಹೀಗಾಗಿ, ಜನರಿಂದ ರಾಜಕಾರಣಿಗಳೇ ಹೊರತು ರಾಜಕಾರಣಗಳಿಂದ ಜನರಿಲ್ಲ. ಜನರ ಪ್ರತಿನಿಧಿಯಾಗಿ ಸಾಮಾಜಿಕ ನ್ಯಾಯಕ್ಕಾಗಿ ವಿಧಾನಸಭೆ ಪ್ರವೇಶಿಸಬೇಕೆ ವಿನಃ ಮೋಜು ಮಸ್ತಿಗಳಿಗಲ್ಲ ಎಂದು ಮಾಜಿ ಸಚಿವ, ಎಸ್. ಕೆ. ಕಾಂತಾ ತಮ್ಮ ಮನದಾಳದ ಮಾತುಗಳಲ್ಲಿ ಬಿಚ್ಚಿಟ್ಟಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ವತಿಯಿಂದ ಆಯೋಜಿಸಿದ 21 ನೇ ಮನದಾಳದ ಮಾತು ಕಾರ್ಯಕ್ರಮ ಉದ್ದೇಶಿ ಮಾತನಾಡಿದ ಅವರು, ಕಲಬುರಗಿ ತಾಲೂಕಿನ ಹಾಗರಗುಂಡಗಿ ಜನ್ಮ ತಳಿದ ಊರು. ಶಿವರುದ್ರಪ್ಪ ಕರಿಸಿದ್ದಪ್ಪ ಕಾಂತಾ ಹೆಸರಿನ ಎಸ್.ಕೆ.ಕಾಂತಾ ಆದನಾನು, ಸಾಮಾನ್ಯ ಕುಟುಂಬದಲ್ಲಿ ಜನಸಿದೇ, ಮಕ್ತಂಪುರ ಬಡಾವಣೆಯಲ್ಲಿ ರೇವಪ್ಪ ಶಿರೂರ್ ಸೋದರ ಮಾವನ ಮನೆಯಲ್ಲಿ ಆಶ್ರಯವಾಗಿದ್ದು, ಆ ವೇಳೆಗೆ ನಮ್ಮ ಮನೆ ನಡೆಸುವ ಸಾಧ್ಯತೆ ಇರಲಿಲ್ಲ. ಗದ್ದುಗೆ ಮಠದಲ್ಲಿ ಏಳನೇ ಶಾಲೆ ತರಗತಿವರೆಗೆ ಮಾತ್ರ ಓದಬೇಕಾಯಿತು. ಹೆಚ್ಚು ಓದು, ಬರಹ ನನ್ನಿಂದ ಆಗಲೇಇಲ್ಲ ಎಂದು ತಿಳಿಸಿದರು.
ಸಣ್ಣ ವಯಸ್ಸಿನಲ್ಲಿ ನನಗೆ ನೌಕರಿ ಮಾಡುವ ಪರಿಸ್ಥಿತಿ ಎದುರಾಯಿತು. ಕಳೆದ 1954ರ ಏಪ್ರಿಲ್ 14ರಂದು ಮಹಾದೇವ ಆಳಂದಕರ್, ವರದಾಚಾರ್ಯ ಅವರ ಪರಿಚಯದ ಮೇರೆಗೆ . ಶುದ್ಧ ಅಕ್ಷರ ಬರೆಯುತ್ತೇನೆ ಎಂದೇಳಿ ಎಂ.ಎಸ್.ಕೆ.ಮಿಲ್ ಕಾರ್ಖಾನೆಯಲ್ಲಿ ತಾತ್ಕಾಲಿಕವಾಗಿ ನೌಕರಿಗೆ ಸೇರಿದೆ. ಗುರು ವಿ.ಪಿ.ದೇಗಾಂವಕರ್, ಕಾಶಿನಾಥ ಖೂಬಾ ಗೆಳೆಯನಾಗಿದ್ದ, ಶಿವರುದ್ರಪ್ಪ ಭೀಮಳ್ಳಿಯವರ ಮನೆಯಲ್ಲಿ ಬಾಡಿಗೆಯಿದ. ನಂತರ ಐಟಿಯುಸಿ ಸಂಘಟನೆಗೆ ಸೇರಿಕೊಂಡೆ. ನಂತರದ ದಿನಗಳಲ್ಲಿ ಜವಾಬ್ದಾರಿ ಸಹ ನೀಡಿದರು. 1965 ರಲ್ಲಿ ಎಂಎಸ್.ಕೆ.ಮಿಲ್. ಸರಕಾರ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಾಗ ಹೋರಾಟಗಿಳಿಯಬೇಕಾಯಿತು ಎಂದು ತಿಳಿಸಿದರು.
1968ರ ಆಗಸ್ಟ್‌ನಲ್ಲಿ ಕಾರ್ಖಾನೆ ಮತ್ತೆ ಶುರುವಾತು. ನಂತರ ರಾಜಕೀಯ ಪ್ರವೇಶ 1972ರಲ್ಲಿ ಸೋಷಲಿಸ್ಟ್ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದೆ. ಜಾರ್ಜ್ ಫರ್ನಾಂಡೀಸ್, ಎಸ್.ಎಂ.ಜೋಶಿ, ಮಧು ದಂಡಾವಳೆ ಅವರ ಸಂಪರ್ಕವಾಯಿತು. ಗೋವಿಂದ್ ಒಡೆಯರು ಕಾರ್ಮಿಕ ಸಂಘಟನೆಗೆ ಅಧ್ಯಕ್ಷರನ್ನಾಗಿ ಮಾಡಿದರು. 1977ರಲ್ಲಿ ಕಲಬುರಗಿ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಟಿಕೆಟ್ ಅಂತಿಮಗೊಂಡಿತು. ಕೊನೆ ಗಳಿಗೆಯಲ್ಲಿ ಹುನ್ನಾರದಿಂದ ಕೈ ತಪ್ಪಿ ಹೋಯಿತು ಎಂದರು. ನಂತರ 1983 ರಲ್ಲಿ ಸೋಷಲಿಸ್ಟ್ ಪಾರ್ಟಿಯಿಂದ ಎಂಎಲ್‌ಎ ಆದೆ. ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಆಡಳಿತಾವಧಿಯಲ್ಲಿ ಕಾರ್ಮಿಕ ಖಾತೆ ಜವಾಬ್ದಾರಿ ಕೊಟ್ಟರು. 20 ತಿಂಗಳ ಅವಧಿಯಲ್ಲಿ ಗುತ್ತಿಗೆ ಪದ್ಧತಿ ತೆಗೆದು ಹಾಕಿದೆ ಎಂದು ತಮ್ಮ ಸಾಧನೆಯನ್ನು ನೆನಪಿಸಿಕೊಂಡರು.
36 ಸಾವಿರ ದಿನಗೂಲಿ ನೌಕರರನ್ನು ಖಾಯಂ ಮಾಡಿದೆ. ಕಾರ್ಮಿಕ ಇಲಾಖೆ ಪ್ರಗತಿ ಪಥದತ್ತ ಕೊಂಡೊಯ್ದೆ. ನಂತರ 26 ವರ್ಷಗಳಿಂದಲ್ಲೂ ವಿಧಾನಸಭೆ ಚುನಾವಣೆಯಲ್ಲಿ ಒಮ್ಮೆಯೂ ಗೆದ್ದಿಲ್ಲ ಎಂದು ಈ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು.
ಸಿ.ಎಸ್.ಮಾಲಿಪಾಟೀಲ್ ಪ್ರಾರ್ಥಿಸಿದ್ದು, ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ವಿಜಯಕುಮಾರ ಪರುತೆ ಸ್ವಾಗತಿಸಿದರು. ಗೌರವ ಕಾರ್ಯದದರ್ಶಿ ಮಡಿವಾಳಪ್ಪ ನಾಗರಹಳ್ಳಿ ನಿರೂಪಣೆ ಮಾಡಿದರು. ಸೂರ್ಯಕಾಂತ ಪಾಟೀಲ್ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…