ಬೆಳಗಾವಿ: ಬಹುತೇಕ ರಾಜಕಾರಣಿಗಳು ನಮ್ಮಲ್ಲಿ ಮೌಢ್ಯ ಬಿತ್ತುತ್ತಿದ್ದಾರೆ, ಇದಕ್ಕೆ ತದ್ವಿರುದ್ದವಾಗಿ ಸತೀಶ ಜಾರಕಿಹೊಳಿ ಅವರು ಕೆಲಸ ಮಾಡುತ್ತಿದ್ದು, ನಾವು ಅವರಿಗೆ ಬಂಬಲ ನೀಡಬೇಕಿದೆ ಎಂದು ಸಾಹಿತಿ, ವಿಚಾರವಾದಿ ವಿಶ್ವಾರಾದ್ಯ ಸತ್ಯಂಪೇಟೆ ಹೇಳಿದರು.
ಮಾನವ ಬಂಧುತ್ವ ವೇದಿಕೆ ಸಂಘಟನೆ, ಹಾಗೂ ಬಸವ ಪರ ಸಂಘಟನೆಗಳ ವತಿಯಿಂದ ಇಲ್ಲಿನ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡದ ಅವರು, ದೇವರಿಗಾಗಿ ಕೋಟಿ ಕೊಟ್ಟು ಕಿರೀಟ ಕೊಟ್ಟವರೆಲ್ಲ ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ. ದೇವರಿಗೆ ಕಿರೀಟ, ಪಲ್ಲಕ್ಕಿ ನೀಡದೆ ಜನರಿಗಾಗಿ, ಶ್ರಮಿಸುತ್ತಿರುವ ಅಪರೂಪದ ರಾಜಕಾರಣಿಯಾಗಿದ್ದಾರೆ ಎಂದು ಬಣ್ಣಿಸಿದರು.
ಭ್ರಮೆಯೇ ನಮ್ಮ ಬದುಕಾಗಿದೆ: ಪುರೋಹಿತಶಾಹಿಗಳು ನಮ್ಮೆಲ್ಲರೊಳಗೆ ಭ್ರಮೆ ತುಂಬಿದ್ದಾರೆ. ಭ್ರಮಗಳೇ ನಮ್ಮ ಬದುಕು ಎಂಬಂತಾಗಿದೆ. ಯಾವುದು ಸತ್ಯ ಯಾವುದೇ ಸುಳ್ಳು ಎಂಬುವುದನ್ನು ಅರಿಯದ ಸ್ಥಿತಿಯಲ್ಲಿ ನಾವಿರುವುದು ದುರಂತ. ಇಂತಹ ಸ್ಥಿತಿಯಲ್ಲಿ ಬುದ್ದ, ಬಸವ,ಅಂಬೇಡ್ಕರ್ ಅವರ ವಿಚಾರಗಳು ನಮ್ಮ ಕೈ ಹಿಡಿಯುತ್ತವೆ. ಈ ಮೂವರು ಮಹಾನ್ ನಾಯಕರನ್ನು ಆದರ್ಶವಾಗಿಟ್ಟುಕೊಂಡು ಹೋದರೆ ನಾವು ಜಯಶಾಲಿಗಳಾಗುತ್ತೇವೆ. ಆ ನಿಟ್ಟಿನಲ್ಲಿ ಮಾನವ ಬಂಧುತ್ವ ವೇದಿಕೆ ರಾಜ್ಯಾದ್ಯಂತ ಕ್ರೀಯಾಶೀಲವಾಗಿದೆ ಅದಕ್ಕೆ ನಾವು ಬೆಂಬಲಿಸಬೇಕು ಎಂದರು.
ಪ್ರಶ್ನೆ ಮಾಡದ ಸಮಾಜ ಸತ್ತ ಸಮಾಜ: “ಯುವ ಜನತೆ ಚಿಂತನೆಗಳನ್ನು ಮಾಡಬೇಕು.ಅನೇಕ ಭ್ರಮೆಗಳಿಂದ ನಾವು ಹೊರ ಬರಬೇಕು. ನಮಗೆ ಭಯಂಕರ ಜಾತಿ ಭ್ರಮೆ ಇದೆ. ಏಡ್ಸ ಮತ್ತು ಕ್ಯಾನ್ಸರ್ ಭಯಾನಕ ರೋಗಕ್ಕಿಂತ ಜಾತಿ ಎಂಬ ರೋಗ ಭಾರೀ ಡೇಂಜರ್, ಒಂದು ವೇಳೆ ಏಡ್ಸ್ ರೋಗ ಹೋದರು ಹೋಗ ಬಹುದು ಆದರೆ. ಜಾತಿ ಎಂಬ ರೋಗ ಹೋಗುವುದಿಲ್ಲ. ರಕ್ತ, ನರ ನರದಲ್ಲಿಯೂ ಜಾತಿ ರೋಗ ಸೇರಿದೆ. ಜಾತಿ ಭ್ರಮೆ ಹುಳುಗಳಿಂದ ಆಘಾತವಾಗುತ್ತಿದೆ. ವಯಕ್ತಿತ್ವ ವಿಕಸಕ್ಕೆ ಅಡ್ಡಿಯಾಗುತ್ತಿದೆ. ಇದರಿಂದ ಹೊರ ಬರಲು ಬುದ್ದ, ಬಸವ,ಅಂಬೇಡ್ಕರ್ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ನಮ್ಮ ಮನಸ್ಸಿನ ಮಾತನ್ನು ನಾವು ಕೇಳುತ್ತಿಲ್ಲ. ಮತ್ಯಾರದೋ ಪ್ರಭಾವಕ್ಕೊಳಗಾಗುತ್ತಿದ್ದೇವೆ. ಹೀಗಾಗಿ ನಮ್ಮ ಬದುಕು ಸುಧಾರಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬದುಕು ಸುಧಾರಣೆ ಮಾಡಿಕೊಳ್ಳಬೇಕಾದೆ ಶರಣರ ವಚನ, ಸಂವಿಧಾನದ ಮೊರೆ ಹೋಗಬೇಕಿದೆ. ಪ್ರಶ್ನೆಗಳಿಲ್ಲದ ಸಮಾಜ ಸತ್ತ ಸಮಾಜ. ನಾವೆಲ್ಲರೂ ಪ್ರಶ್ನೆ ಮನೋಭಾವನೆ ಬೆಳಸಿಕೊಳ್ಳಬೇಕು. ಪ್ರಶ್ನೆ ಮಾಡದಿದ್ದರೆ ಸಮಾಜ ಬೆಳೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಎ.ಜಿ. ಕಾಂಬಳೆ, ಕಲಾ ತಂಡದವರು ಕ್ರಾಂತಿ ಗೀತೆ ಹಾಡಿದರು. ಶಾಸಕ ಸತೀಶ ಜಾರಕಿಹೊಳಿ, ಫ್ರಭುಲಿಂಗ ಮಾಹಸ್ವಾಮೀಜಿಗಳು ಸಾನ್ನಿಧ್ಯವಹಿಸಿದ್ದರು. ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್, ಆರ್.ಎಸ್. ದರ್ಗೆ, ವೇದಿಕೆ ಮೇಲಿದ್ದರು. ವೇದಿಕೆ ವ್ಯವಸ್ಥಾಪಕ ರಾಮಕೃಷ್ಣ ಸ್ವಾಗತಿಸಿ, ನಿರೂಪಿಸಿದರು. ಮಂಜುನಾಥ ಪಾಟೀಲ್ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…