ಸುರಪುರ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಇದೇ ನವೆಂಬರ್ 12ರಂದು ರಾಷ್ಟ್ರೀಯ ಲೋಕಾದಲತ್ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ನಗರದ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಕಮತಗಿ ತಿಳಿಸಿದರು.
ನಗರದ ನ್ಯಾಯಾಲಯದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಾದಲತ್‍ನಿಂದ ಹಲವಾರು ಉಪಯೋಗಗಳು ಆಗಲಿವೆ.ಈ ಹಿಂದೆಯೂಕೂಡ ನಡೆಸಲಾಗಿರುವ ಲೋಕ ಅದಾಲತ್‍ನಲ್ಲಿ ಅನೇಕರು ತಮ್ಮ ವ್ಯಾಜ್ಯವನ್ನು ಪರಿಹಸಿಕೊಂಡಿದ್ದಾರೆ.ಅದರಂತೆ ಈಬಾರಿಯೂ ನಡೆಯಲಿರುವ ಲೋಕ್ ಅದಾಲತ್‍ನ ಸದುಪಯೋಗ ಜನರು ಮಾಡಿಕೊಳ್ಳಬೇಕು ಎಂದರು.ಇದರಿಂದ ಮೇಲಿಂದ ಮೇಲೆ ನ್ಯಾಯಾಲಯಕ್ಕೆ ಕಕ್ಷಿದಾರರು ಬರುವುದು ತಪ್ಪಲಿದೆ ಎಂದು ಅಭಿಪ್ರಾಯಪಟ್ಟರು.
ಲೋಕ ಅದಾಲತ್‍ನಲ್ಲಿ 14 ತರಹದ ಪ್ರಕರಣಗಳನ್ನು ರಾಜಿಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ.ಅದರಲ್ಲಿ ಮುಖ್ಯವಾಗಿ,ಚೆಕ್‍ಬೌನ್ಸ್, ಹಣ ಮರುಪಾವತಿ, ಕಾರ್ಮಿಕ ವಿವಾದ, ಜೀವನಾವಶ್ಯಕ ರಾಜಿ ಆಗಬಹುದಾದ ಕೇಸ್, ಮೋಟಾರ್ ವಾಹನ, ಬ್ಯಾಂಕ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಕರಣ, ಭೂ ಸ್ವಾಧೀನ, ವಿಚ್ಛೇದನ ಹೊರತುಪಡಿಸಿ ಕೌಟುಂಬಿಕ ವಿವಾದಗಳು, ಅಪರಾಧಿಕ ಮೊಕದ್ದಮೆಗಳು, ಪಿಎಲ್‍ಎಸ್ ಸೇರಿದಂತೆ ವಿವಿಧ ಪ್ರಕರಣಗಳಿಗೆ ರಾಜಿಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 1450 ಪ್ರಕರಣ, ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 1200 ಕೇಸ್, ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ 1600 ಕೇಸ್‍ಗಳ ಜತೆಗೆ ಇನ್ನು ಕೆಲವು ಕೇಸ್‍ಗಳು ಬಾಕಿ ಉಳಿದಿವೆ. ಇದರ ಜತೆ ಕೋರ್ಟ್‍ನಲ್ಲಿ ನೋಂದಣಿಯಾಗುತ್ತಿರುವ ಪ್ರಕರಣಗಳಿಗೂ ಇತ್ಯರ್ಥ ಪಡಿಸಲಾಗುವುದು. ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕು ಎಂದರು.
ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಸಹ ಲೋಕಾದಲತ್‍ನಲ್ಲಿ ನೀಡಲಾಗುತ್ತಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದು, ಶಾಲೆಯಲ್ಲಿ ಜನನ ಪ್ರಮಾಣ ಪತ್ರವಿಲ್ಲದೆ ದಾಖಲಾಗಿರುವ ವಿದ್ಯಾರ್ಥಿಯ ಆಧಾರ್ ಕಾರ್ಡ್, ಇಲ್ಲವೇ ತಾಯಿ ಆಧಾರ್ ಕಾರ್ಡ್ ಒದಗಿಸಿ ಎಲ್ಲಿ ಜನಸಿದ್ದು ದಾಖಲಾತಿ ನೀಡಬೇಕು.
ಕೆಂಭಾವಿಯಲ್ಲಿ ಈಗಾಗಲೇ ಪುರಸಭೆಗೆ ಸೂಚಿಸಿದ್ದು, 700 ಜನನ ಪ್ರಮಾಣ ಪತ್ರ ಒದಗಿಸಲಾಗಿದೆ. ಇದಕ್ಕಾಗಿ 12 ಜನ ವಕೀಲಯರು ಈ ಕಾರ್ಯಕ್ಕೆ ಸಹಕರಿಸಲಿದ್ದಾರೆ. ಸುರಪುರದಲ್ಲಿಯೂ ಶೀಘ್ರವೇ ಜನನ ಮತ್ತು ಮರಣ ಪ್ರಮಾಣ ಪತ್ರ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ಸುದ್ದಿಗೋಷ್ಠಿಯಲ್ಲಿದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…