ಕಲಬುರಗಿ: ಇಲ್ಲಿನ ಎಸ್. ಆರ್. ಪಾಟೀಲ್ ಫೌಂಡೇಶನ್ ಹಾಗೂ ಪಾಟೀಲ್ ಗ್ರೂಪ್ ಆಫ್ ಕಂಪನಿಸ್ ವತಿಯಿಂದ ಸೂಪರ್ ಮಾರ್ಕೆಟನಲ್ಲಿರುವ ಸಂಗಮ ಹಾಗೂ ತ್ರಿವೇಣಿ ಚಿತ್ರಮಂದಿರದ ಆವರಣದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ “ದೀಪಾಲಂಕಾರ ಸ್ಪರ್ಧೆ”ಯನ್ನು ಏರ್ಪಡಿಸಲಾಗಿದೆ.
ಸೋಮವಾರ ಅ.24ರಂದು “ದೀಪಾಲಂಕಾರ ಸ್ಪರ್ಧೆ”ಯನ್ನು ಹಮ್ಮಿಕೊಳ್ಳಲಾಗುವುದು. ಈ ಸ್ಪರ್ಧೆಯಲ್ಲಿ 3 ಅತ್ಯುತ್ತಮ ದೀಪಾಲಂಕಾರಗಳನ್ನು ಆಯ್ಕೆಮಾಡಿ ಪ್ರಥಮ ಬಹುಮಾನ 5000, ದ್ವಿತೀಯ ಬಹುಮಾನ 3000 ಹಾಗೂ ತೃತಿಯ ಬಹುಮಾನ 2000 ರೂಪಾಯಿಗಳು ಇದ್ದು, ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣಪತ್ರವನ್ನು ನೀಡಲಾಗುವುದು.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ರೀತಿಯ ಶುಲ್ಕವಿರುವುದಿಲ್ಲ ಹಾಗೂ ವಯಸ್ಸಿನ ಮೀತಿಯಿರುವುದಿಲ್ಲ. ಇಚ್ಚೆಯುಳ್ಳವರು ಮುಕ್ತವಾಗಿ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲ್ಲಿಚ್ಚುಸುವವರು ತಮ್ಮ ಒಂದು ಪಾಸ್‍ಪೋರ್ಟ ಅಳತೆÀಯ ಭಾವಚಿತ್ರ ಹಾಗೂ ಆಧಾರ ಪ್ರತಿ ಸಲ್ಲಿಸಬೇಕು.
ವಿಶೇಷ ಸೂಚನೆ: ದೀಪಾಲಂಕಾರಕ್ಕೆ ವಿದ್ಯುತ ದೀಪಗಳಿಗೆ ಅವಕಾಶವಿರುವುದಿಲ್ಲ. ಪಣತಿಗಳ, ಎಣ್ಣೆ ಹಾಗೂ ಬತ್ತಿಗಳ ದೀಪಾಲಂಕಾರಕ್ಕೆ ಮಾತ್ರ ಅವಕಾಶವಿರುತ್ತದೆ. ಸ್ಪರ್ಧಾರ್ಥಿಗಳು ದೀಪಾಲಂಕಾರಕ್ಕೆ ರಂಗೋಲಿ, ಹೂವುಗಳು, ಹಣ್ಣುಗಳನ್ನು ಬಳಸಿಕೊಳ್ಳಬಹುದು. ಈ ಸ್ಪರ್ಧೆಯ ಸಮಯ: ಸಂಜೆ 5:00 ಗಂಟೆಯಿಂದ ಜರುಗಲಿದೆ. ಹೆಚ್ಚಿನ ಮಾಹಿತಿಗಾಗಿ ಡಾ. ಸಂದೀಪ ಬಿ. – 9880254069 ಹಾಗೂ ನಾಗರಾಜ – 9972776062 ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…