ಕಲಬುರಗಿ : ಇಂದಿನ ಸಮಾಜದ ಮಕ್ಕಳಲ್ಲಿ ಉತ್ತಮವಾಗಿರುವಂತಹ ಸಂಸ್ಕøತಿ, ಸಂಸ್ಕಾರದ ಕೊರತೆ ಉಂಟಾಗುತ್ತಿದೆ ಅದರ ಪರಂಪರೆಯನ್ನು ಬೆಳೆಸಬೇಕಾದರೆ ಸಂಗೀತವು ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ ಎಂದು ಭೂಸನೂರಿನ ಖ್ಯಾತವೈದ್ಯರಾದ ಡಾ.ರಮೇಶ ಪಂತ ಅವರು ಅಭಿಪ್ರಾಯ ಪಟ್ಟರು.
ಭೂಸನೂರಿನಲ್ಲಿ ರವಿವಾರ ಗಡಿನಾಡ ಸಂಗೀತ ಸೇವಾ ಸಂಸ್ಥೆ(ರಿ) ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಸಂಗೀತ ಸಂಗಮ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕನ್ನಡ ನಾಡು ನುಡಿ ಬೆಳೆಸಲು ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಾರ್ಯಕ್ರಮಗಳು ಹಮ್ಮಿಕೊಳ್ಳುವುದರ ಮೂಲಕ ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ ಭೂಸನೂರ ಹಿರೇಮಠದ ಷ.ಬ್ರ.ಬಸವಲಿಂಗ ಶಿವಾಚಾರ್ಯರು ಮಾತನಾಡಿ, ಜೀವನ ಬೇಸರಗೊಂಡಾಗ ಜೀವನಕ್ಕೆ ಮುಕ್ತಿ ನೀಡುವುದೆ ಸಂಗೀತ ಹಾಗಾಗಿ ಸಂಗೀತ ಸಂಗಮ ಕಾರ್ಯಕ್ರಮದಲ್ಲಿ ಕೋಳಲುವಾದನ, ಜಾನಪದ ಗೀತೆ, ವಚನ ಸಂಗೀತ, ಸುಗಮ ಸಂಗೀತ ಹೀಗೆ ಅನೇಕ ಪ್ರಕಾರದ ಸಂಗೀತದ ರಸದೌತಣ ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಮುಖ್ಯಅತಿಥಿಗಳಾಗಿ ಮಲ್ಲಪ್ಪ ಜೇವರ್ಗಿ, ಫತ್ರುದ್ದೀನ್ ಶೇಖ್, ಈರಣ್ಣ ಕುಂಬಾರ, ಕಾಶಪ್ಪ ಮೈನಾಳ ಭಾಗವಹಿಸಿದ್ದರು. ನಂತರ ಆಕಾಶವಾಣಿ ಕಲಾವಿದರಾದ ಸೂರ್ಯಕಾಂತ ಪೂಜಾರಿ, ಪ್ರಶಾಂತ ಗೋಲ್ಡಸ್ಮೀತ್, ಲಿಂಗಾನಂದ ಚಿಕ್ಕಮಠ, ಕಾಶೀನಾಥ ಯಂಗಟೆ, ರೇವಣಯ್ಯ ಮಠಮತಿ, ಗುರುಶಾಂತಯ್ಯ ಸ್ಥಾವರಮಠ, ಲೋಕನಾಥ ಚಾಂಗಲೇರಾ, ದತ್ತಣ್ಣ ಮಾಸ್ಟರ್ ಹಿರೋಳ್ಳಿ ಸಂಗೀತ ಸಂಗಮ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಸಂಸ್ಥೆಯ ಅಧ್ಯಕ್ಷ ವೀರಭದ್ರಯ್ಯ ಸ್ಥಾವರಮಠ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರು. ಸೂರ್ಯಕಾಂತ ಶಾಸ್ತ್ರೀ ನಿರೂಪಿಸಿದರೆ, ಶ್ರೀಮತಿ ಪವಿತ್ರ ವಿಶ್ವನಾಥ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…