ಅಂಕಣ ಬರಹ

ಶರಣರ ಲೀಲೆಗಳಲ್ಲಿ ಅತೀಂದ್ರಿಯ ಶಕ್ತಿ ಇದೆ

ಶರಣಬಸವೇಶ್ವರರ ಲೀಲೆಗಳು ವೈಜ್ಞಾನಿಕವಾಗಿ ವಾಚ್ಯವೆನಿಸದಿದ್ದರೂ ಶರಣರ ಅತೀಂದ್ರಿಯ ಶಕ್ತಿಯಿಂದ ಲೀಲೆಗಳು ಸಹಜವಾಗಿ ಜರುಗುತ್ತಿವೆ ಎಂಬುದನ್ನು ಜನಪದರು ತಾವು ಸೂಚ್ಯವಾಗಿ ನಂಬಿದ್ದನ್ನು, ಕಂಡುಕೊಂಡಿದ್ದನ್ನು ಅವರು ಹಾಡುಗಳಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ಸಹ ಪ್ರಾಧ್ಯಾಪಕರಾದ ಪ್ರೊ. ವೆಂಕಣ್ಣ ಡೊಣ್ಣೆಗೌಡರು ಅವರು ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ರವಿವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.

ಅರಳಗುಂಡಗಿಯಿಂದ ಹಿಪ್ಪರಗಿಯ ಪತ್ರಿವನಕ್ಕೆ ಬಂದ ಶರಣರು ಅಲ್ಲಿಯೇ ಇಷ್ಟಲಿಂಗ ಪೂಜೆ ಮಾಡಿಕೊಳ್ಳುತ್ತಿದ್ದಾಗ ಪತ್ತರಿ ವನವೇ ಸಂತೋಷಗೊಂಡಿತು. ಶರಣರ ಪೂಜೆ ನಡೆದಾಗ ಆ ಗಿಡಗಳು ತಮ್ಮ ಪತ್ತರಿ ದಳಗಳನ್ನು ಉದುರಿಸುತ್ತವೆ. ಶರಣರ ಶಿರದ ಮೇಲೆ, ಭುಜದ ಮೇಲೆ ಕೊರಳಿನ ತನಕ ಪತ್ತರಿ ಬಿಳುತ್ತವೆ.

ಶರಣರು ಹಿಪ್ಪರಗಿಯಿಂದ ಜಗಲಗುಡ್ಡಕ್ಕೆ ಬಂದು ಅಲ್ಲಿ ಇಷ್ಟ ಲಿಂಗಪೂಜೆ ನಡೆಸುತ್ತಾರೆ. ಆ ಇಷ್ಟಲಿಂಗ ಶರಣರೊಂದಿಗೆ ಮಾತಾಡುತ್ತದೆ. ನಾಳೆ ನಸುಕಿನಲ್ಲಿ ಬಿಳಿ ಕುದುರೆಯೊಂದು ಬರುತ್ತದೆ. ಅದರ ಮೇಲೆ ಕುಳಿತು ನೀನು ಹೊರಡು. ಮೂರನೇ ಬಾರಿಗೆ ಎಲ್ಲಿ ನೀರು ಪುಟಿಯುತ್ತದೆಯೋ ಆ ಸ್ಥಳ ನಿನ್ನ ಖಾಯಂ ಸ್ಥಳ ಎಂದು ಲಿಂಗವಾಣಿಯಂತೆ ಶರಣರು ಕಲಬುರಗಿಯಲ್ಲಿಯೇ ಉಳಿಯುತ್ತಾರೆ.

ರಾಮಜೀದಾದನೊಂದಿಗೆ ಹೊರಟ ಶರಣರು ಸವಳಹಳ್ಳ ಎನ್ನುವ ಊರಿಗೆ ಬರುತ್ತಾರೆ. ಅಲ್ಲಿ ಕುಡಿಯುವ ನೀರಿಗೆ ಹಾಹಾಕಾರ. ಒಂದೆರಡು ಕಡೆ ನೀರು ಇದ್ದರೂ ಸವಳು ನೀರು. ಅದನ್ನು ಕುಡಿದ ಜನರು ಅನೇಕ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದರು. ಶರಣರು ಬಂದ ತಕ್ಷಣ ಜನರು ಅವರ ದರ್ಶನಗೈದು ’ ನೀರು ಕೊಟ್ಟು ಶಿವನಾಗು’ ಎಂದು ಬೇಡಿಕೊಂಡರಂತೆ ಆಗ ತಕ್ಷಣವೇ ಶರಣರು ತಾವು ನಿಂತ ಸ್ಥಳದ ಎದುರಗಡೆ ಕೈ ಮಾಡಿ ಅಲ್ಲಿ ಕೆದರಲು ತಿಳಿಸಿದಾಗ ಟೆಂಗಿನ ನೀರಿನಂತಿರುವ ನೀರು ಹರಿಯಲು ಪ್ರಾರಂಭಿಸುತ್ತದೆ. ನಂತರ ಅಲ್ಲಿಯ ಜನ ಮುಂದೆ ಶಿವರಾತ್ರಿ ನೀವು ಇಲ್ಲಿಯೇ ಉಳಿಯಬೇಕೆಂದು ವಿನಂತಿಸಿಕೊಂಡಾಗ ಶರಣರು ಅಲ್ಲಿಯೇ ಉಳಿಯುತ್ತಾರೆ. ಪೂಜೆಗೆ ಕುಳಿತ ಶರಣರ ಎದುರು ಜಂಗಮನೋರ್ವ ಕೈಯಲ್ಲೊಂದು ಬಟ್ಟಲು ಹಿಡಿದುಕೊಂಡು ನಿಂತಿರುತ್ತಾನೆ. ಆ ಜಂಗಮ ರೂಪದಲ್ಲಿ ಶಿವನು ಶರಣರಿಗೆ ಬಟ್ಟಲು ಕೊಟ್ಟು ಇದು ಭಕ್ತರಿಗೆ, ಧರ್ಮಕ್ಕಾಗಿ ಈ ಬಟ್ಟಲು ಕೊಟ್ಟಿದ್ದೇನೆ ಎಂದು ಹೇಳುತ್ತಾನೆ. ಇಂದಿಗೂ ಆ ಪರುಷಬಟ್ಟಲು ಶರಣಬಸವೇಶ್ವರ ಮಹಾಮನೆಯಲ್ಲಿ ಕಾಣಬಹುದು. ರಥೋತ್ಸವದ ವೇಳೆ ಪೂಜ್ಯ ಡಾ.ಅಪ್ಪಾಜೀಯವರಿಗೆ ಅದರ ದರ್ಶನ ಮಾಡಿಸುತ್ತಾರೆ.

ಪಶು ಪಕ್ಷಿ ಪ್ರಾಣಿಗಳನ್ನು ಪ್ರೀತಿಸುತ್ತಿದ್ದ ಶರಣರು ಒಂದು ಸಲ ಸೊನ್ನ ಗ್ರಾಮದಲ್ಲಿ ಗಿಡದ ಕೆಳಗೆ ಶಿವನಾಮ ಸ್ಮರಣೆ ಮಾಡುತ್ತಾ ಮಲಗಿರುತ್ತಾರೆ. ಬಿಸಿಲು ಅವರ ಮುಖದ ಮೇಲೆ ಬೀಳುತ್ತಿರುತ್ತದೆ. ಅಲ್ಲಿಯೇ ಹುತ್ತದಲ್ಲಿರುವ ಹಾವೊಂದು ಇದನ್ನು ನೋಡಿ ಭರಭರನೆ ಹುತ್ತ ಬಿಟ್ಟು ಶರಣರ ನೆತ್ತಿಯ ಸಮೀಪಕ್ಕೆ ಬಂದು ತನ್ನ ಹೆಡೆ ಬಿಚ್ಚಿ ಶರಣರಿಗೆ ನೆರಳು ಮಾಡುತ್ತದೆ ಹೀಗೆ ಬೇಡರ ಕಣ್ಣಪ್ಪ ಮತ್ತು ಏಕಲವ್ಯ ಅವರಲ್ಲಿದ್ದ ಅಂತಃಶಕ್ತಿ-ಗುರುಭಕ್ತಿಯನ್ನು ಶರಣರ ಶಿವಲೀಲೆಯೊಂದಿಗೆ ತೌಲನಿಕವಾಗಿ ತಿಳಿಸಿದರು.

ಪ್ರೊ. ವೆಂಕಣ್ಣ ಡೊಣ್ಣೆಗೌಡರು

emedialine

Recent Posts

ಜೇವರ್ಗಿ: ಲಂಚಾಪಡೆಯುತ್ತಿದ್ದಾಗ ಮಹಿಳಾ ಸಿಬ್ಬಂದಿ ಲೋಕಾಯುಕ್ತರ ಬಲೆಗೆ

ಕಲಬುರಗಿ: ನೀರಿನ ಕನೆಕ್ಷನಗಾಗಿ ಹತ್ತು ಸಾವಿರ ಲಂಚಾಪಡೆಯುತ್ತಿದ್ದಾಗ ಜೇವರ್ಗಿ ಪುರಸಭೆಯ ಮಹಿಳಾ ಸಿಬ್ಬಂದಿ ಲಣೊಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ…

12 hours ago

371 ಜೆ ಅಡಿ ಉದ್ಯೋಗ ನೇಮಕಾತಿ ಸಂಬಂಧದ ಗೊಂದಲ ನಿವಾರಿಸಿ ಮಾರ್ಗಸೂಚಿ ಸಿದ್ಧಪಡಿಸಲು ಸಚಿವರ ಸೂಚನೆ

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಜೆ ಅಡಿ ಉದ್ಯೋಗ ನೇಮಕಾತಿ ಹಾಗೂ ಬಡ್ತಿ ಸಂಬಂಧದಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಿ…

13 hours ago

ಶ್ಯಾಮರಾವ ನಾಟಿಕಾರಗೆ ಅಧ್ಯಕ್ಷರನ್ನಾಗಿ ನೇಮಕಕ್ಕೆ ಡಾ. ಮಲ್ಲಿಕಾರ್ಜುನ ಖರ್ಗೆಗೆ ಮನವಿ

ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ…

14 hours ago

ಚಿರಂಜೀವಿ ವೆಂಕಯ್ಯ ಕುಶಾಲ್ ಗುತ್ತೇದಾರ್ ಗೆ ಸನ್ಮಾನ

ಕಲಬುರಗಿ: ಮಾಜಿ ಸಚಿವರಾದ ಮಾಲಿಕೆಯ್ಯಾ ಗುತ್ತೇದಾರ್ ಅವರ ಅಪ್ಪಟ ಅಭಿಮಾನಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ…

14 hours ago

ಮಹಿಳಾ ಘಟಕದ ನೂತನ ಪದಾಧಿಕಾರಿಗಳ ನೇಮಕ

ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಗೌಡ ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾ…

15 hours ago

ಮಜರ್ ಆಲಂ ಖಾನ್ ಅಧ್ಯಕತೆಯಲ್ಲಿ ನಗರದ ವಿನ್ಯಾಸ ಮಾಲೀಕರು, ಡೆವಲಪರ್ಸ್, ಬಿಲ್ಡರ್ಸ್ ಅವರೊಂದಿಗೆ ಸಭೆ

ಕಲಬುರಗಿ: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್ ಇವರ ಅಧ್ಯಕ್ಷತೆಯಲ್ಲಿ ನಗರದ ಬಿಲ್ಡರ್ಸ್ ಡೆವಲಪರ್ಸ್ ಮತ್ತು ವಿನ್ಯಾಸದ ಮಾಲೀಕರವರೊಂದಿಗೆ…

15 hours ago