ಬಿಸಿ ಬಿಸಿ ಸುದ್ದಿ

1962ರಲ್ಲಿ ಚೈನಾ ವಾರ್ ಸಂದರ್ಭದಲ್ಲಿ ಬೂಟ್ ಪಾಲಿಶ್ ಮಾಡಿ ರಕ್ಷಣಾ ನಿಧಿಗೆ ಹಣ ನೀಡಿದ ವ್ಯಕ್ತಿಗಳಿಗೆ ಇಲ್ಲ ಸರಕಾರದ ಆಸರೆ..!?

  • ಸಾಜಿದ್ ಅಲಿ

ಕಲಬುರಗಿ:  ಭಾರತದ ಮೇಲೆ 1962ರಲ್ಲಿ ಚೈನಾ ವಾರ್ ನಡೆದ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ಇಬ್ಬರು ವಿದ್ಯಾವಂತ ನಾಯಕರು 1962ರಲ್ಲಿ ಬೂಟ್ ಪಾಲಿಶ್ ಮಾಡಿ ಭಾರತ ಸರಕಾರದ ಸೈನಿಕರ ನಿಧಿಗೆ ಹಣ ನೀಡಿ ಸಹಕರಿಸಿದರು. ಈ ಇಬ್ಬರು ನಾಯಕರು ಕಲಬುರಗಿ ನಗರದ ನಿವಾಸಿಗಳೆಂದು ಹೇಳಿಕೊಳ್ಳಲು ಹೆಮ್ಮೆಯ ವಿಷಯ, ಆದರೆ ಇವರಿಗೆ ಸರಕಾರದ ಸೌಲಭ್ಯ ಅಥವಾ ಗೌರವ, ಸನ್ಮಾನ ಏನಾದರು ಸಿಕ್ಕಿದಿಯಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಎದ್ದು ಕಾಣುತಿದೆ.

ಅಂದಿನ ಪ್ರಜಾವಣಿ ಪತ್ರಿಕೆಯಲ್ಲಿ ಪ್ರಕಟವಾದ ವರದಿ

ಕಲಬುರಗಿ ನಗರದ ಸುಪರ ಮಾರ್ಕೆಟ್ ಬಡಾವಣೆಯ ಬಾವಿಗಲ್ಲಿ ನಿವಾಸಿ ರುಕ್ಕಪ್ಪ ಹಾಗೂ ಬಾರೆಹಿಲ್ಸ್ ಗಣೇಶ್ ನಗರದ ರಾವುಫ್ ಎಂಬ ಇಬ್ಬರು ಧೀಮಂತ ನಾಯಕರು. ಅಂದು ಈ ಇಬ್ಬರು ನಾಯಕರು ಕಲಬುರಗಿ ಜಿಲ್ಲೆಯ ಹೆಮ್ಮೆ ಪಡುವಂತೆ ಕಾರ್ಯ ಮಾಡುವ ಮೂಲಕ ಮೆಚ್ಚುಗೆ ಪಾತ್ರರಾಗಿದರು. ತಮ್ಮ ಕೈಯಲ್ಲಿದ್ದಾಷ್ಟು ದುಡಿದು ದೇಶದ ರಕ್ಷಣೆಗಾಗಿ ತಮ್ಮ ದಿಟ್ಟತನ ಪ್ರದರ್ಶಿ ಆರ್ಥಿಕವಾಗಿ ಸಹಾಯ ಮಾಡಿದ್ದಾರೆನ್ನವುದರಲ್ಲಿ ತಪ್ಪೇನು ಇಲ್ಲ.

ಅಂದು ತಮ್ಮ ಮರ್ಯಾದೆ ಲೆಕ್ಕಿಸದೆ ಬೂಟ್ ಪಾಲಿಶ್  ಮಾಡಿ ದೇಶದ ರಕ್ಷಣಾ ನಿಧಿಗೆ ಆಗಿನ ಜಿಲ್ಲಾಧಿಕಾರಿಗಳಿಗ ನಿಧಿಗೆ ಒಟ್ಟು ರೂ. 184.59 ಸ.ಸೈ ನೀಡಿ ದೇಶ ಪ್ರೇಮ ಮೆರೆದಿದ್ದರು.

ಅಂದಿನ ಕಮಿಶನರ್ ಅವರುಗೆ ಹಣ ನೀಡಿ ಪಡೆದ ರಶೀದಿ

ಇಬ್ಬರು ನಾಯಕರು ಸತತವಾಗಿ ದಿನಾಂಕ: 09-10-1962 ರಿಂದ 12-10-1962ರ ವರೆಗೆ ನಾಲ್ಕು ದಿನ ಬೂಟ್ ಪಾಲಿಶ್ ಮಾಡಿ, ರುಕ್ಕಪ್ಪ ಎಂಬವರು ರೂ. 116-70ಪೈ ಹಣವನ್ನು ಹಾಗೂ ರಾವುಫ  ಅವರು  67-71ನ. ಪೈ ಹಣವನ್ನು ಹೀಗೆ ಒಟ್ಟು 184-59 ಪೈಸೆ, ಹಣವನ್ನು ಸಂಗ್ರಹಿಸಿದರು.  ಕಮೀಷನರ್ ರ ಹತ್ತಿರ ಜಮಾ ಮಾಡಿದರು.

ಚಿತ್ರದಲ್ಲಿ ಬಲಗಡೆ ಇದ್ದವರು ಶ್ರೀ ರುಕ್ಕಪ್ಪ ಇದ್ದು, ರಾವುಫ ಎಂಬುವರನ್ನು ಎಡಗಡೆ ಕಾಣಬಹುದು.

ಈ ಇಬ್ಬರ ನಾಯಕರ ದೇಶ ಪ್ರೇಮ ಮೆಚ್ಚಿದ ದಕ್ಷಿಣ ಮತ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ ಪಾಟೀಲ ರೇವೂರ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದು ಸನ್ಮಾನ ಹಾಗೂ ಸರಕಾರದ ಸೌಲಭ್ಯಕ್ಕಾಗಿ ಒತ್ತಾಯಿಸಿದ್ದು ಶಾಸಕರ ಮನವಿಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದು ರುಕ್ಕಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದರು.

ದೇಶದ ರಕ್ಷಣೆಗಾಗಿ ಕಷ್ಟಗಳು ಬಂದರೂ ನಾವು ಅನುಭವಿಸಲು ಸಿದ್ಧರಾಗಿದ್ದೇವು, ಅಂದು ನಾವು ಮಾಡಿದ ಸಣ್ಣ ಕೆಲಸ ಭಾರಿ ಪ್ರಸಂಸೆ ಮತ್ತು ಮೆಚ್ಚುಗೆ ವ್ಯಕ್ತವಾಗಿತ್ತು .

– ರುಕ್ಕಪ್ಪ, 1962ರಲ್ಲಿ ದೇಶಕ್ಕಾಗಿ ದೆಣಿಗೆ ನೀಡಿದ ದೇಶ ಪ್ರೇಮಿ.

ಸರಕಾರಗಳು ಇವರ ದೇಶ ಪ್ರೇಮ ಗಣನೆಗೆ ತೆಗೆದುಕೊಳದಿರುವ ಬಗ್ಗೆ ಬೇಸರ ರುಕ್ಕಪ್ಪ ಅವರ ಮುಖದಲ್ಲಿ ಕಂಡುಬರುತ್ತಿತ್ತು. 1962ಯಲ್ಲಿ ಪ್ರಜಾವಣಿ ದಿನ ಪತ್ರಿಕೆಯಲ್ಲಿ ಪ್ರಕಟವಾದ ವರದಿನೇ ಆಸರೆಯಾಗಿದ್ದು ಮತ್ತು ಅಂದು ದೇಶಕ್ಕಾಗಿ ಬೂಟ್ ಪಾಲಿಶ್ ಮಾಡುತ್ತಿದ ಫೋಟೋ ಹಾಗೂ ಪ್ರಕಟವಾದ ವರದಿನೇ ಸನ್ಮಾನ ಎಂದು ಭಾವಿಸಿ ಜೋಪಾನವಾಗಿ ಇಟ್ಟುಕೊಂಡು ತಮ್ಮ ದೇಶಪ್ರೇಮವನ್ನು ಸ್ಮೀರಿಸಿಕೊಳ್ಳುವ ಮೂಲಕ ಜೀವನ ಸಾಗಿಸುತ್ತಿದ್ದಾರೆ.

emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

2 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

8 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

19 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

20 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

20 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

20 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420