ಗಂಡು- ಹೆಣ್ಣೆಂಬ ಭಾವನೆ ದೂರವಾಗಬೇಕು: ಸುವರ್ಣ ಎಸ್ ಚೀಮನಕೋಡೆ

ಚಿಟಗುಪ್ಪ: ಮಹಿಳೆಯರು ಆರ್ಥಿಕ ಕ್ಷೇತ್ರಗಳಲ್ಲಿ ಯಶಸ್ಸು ದುಡಿಮೆ. ಕೃಷಿ, ಮನೆಯ ಕೆಲಸ,ಮಕ್ಕಳು, ಮನೆಯ ನಿರ್ವಹಣೆ.ಭೌದ್ದಿಕ ಜೊತೆಗೆ ಸೃಜನಶೀಲ ಕಾರ್ಯಗಳು, ನೀತಿ ಶಿಕ್ಷಣ ಸರ್ವರಿಗೂ ನೀಡಿ, ಸಮುದಾಯವನ್ನು ನಿರ್ಮಾಣ ಮಾಡುವಲ್ಲಿ ಮಹಿಳೆಯರ ತ್ಯಾಗ ಬಲಿದಾನ ದೊಡ್ಡದು ಎಂದು ಸಾಹಿತಿ, ಪ್ರಗತಿಪರ ಚಿಂತಕಿ ಶರಣೆ ಸುವರ್ಣ ಎಸ್ ಚೀಮನಕೋಡೆ ನುಡಿದರು.

ನಗರದ ಆರ್ಯ ಸಮಾಜ ಮಂದಿರದಲ್ಲಿ ನಡೆದ ಸಮಾನ ಮನಸ್ಕರ ಮಹಿಳಾ ಬಳಗದ ವತಿಯಿಂದ ಆಯೋಜಿಸಿದ್ದ ಉಪನ್ಯಾಸ ಗೋಷ್ಠಿ ಹಾಗೂ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಮಹಿಳಾ ಸಮಸ್ಯೆಗಳಿಗೆ ಶಿವಶರಣರ ವಚನಗಳಲ್ಲಿ ಪರಿಹಾರವಿದೆ ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡಿ ಮಾತನಾಡಿದ ಅವರು ಸಮಾಜದ ಆರೋಗ್ಯ ಸರಿಯಾಗ ಬೇಕಾದರೆ ಗಂಡು- ಹೆಣ್ಣೆಂಬ ಭಾವನೆ ದೂರವಾಗಬೇಕು. ಶಿವಶರಣರ ವಚನಗಳ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಕೇಂದ್ರ ಬಿಂದು, ರಾಜ್ಯ ಮಟ್ಟದ ಉತ್ತಮ ಉಪನ್ಯಾಸಕಿ ಪ್ರಶಸ್ತಿ ಪುರಸ್ಕೃತೆ ಶರಣೆ ಮಲ್ಲಮ್ಮ ಆರ್ ಪಾಟೀಲರು ಗೌರವ ಅಭಿನಂದನಾ ಸನ್ಮಾನ ಸ್ವೀಕರಿಸಿ, ಆಧುನಿಕ ಮಹಿಳೆಯರ ಜ್ವಲಂತ ಸಮಸ್ಯೆಗಳು ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡಿ
ಮಾತನಾಡಿದ ಅವರು ಇಂದು ಹೆಣ್ಣು ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲಿಡುತ್ತಿದ್ದಾಳೆ. ಸ್ತ್ರೀ ವಿದ್ಯಾಭ್ಯಾಸ ಹಾಗೂ ಉದ್ಯೋಗ ಪ್ರಮಾಣ ಗಣನೀಯವಾಗಿ ಹೆಚ್ಚಾಗಿರುವುದು ದಾಖಲಾಗಿದ್ದರೂ ಉನ್ನತ ಅಧಿಕಾರ ಸ್ಥಾನಗಳಲ್ಲಿ, ಮಹತ್ವದ ನಿರ್ಧಾರ, ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಸಧ್ಯ ಎದುರಾಗಿದೆ.ಸಮಾಜದ ಮುಖ್ಯವಾಹಿನಿಯಲ್ಲಿ ತನ್ನ ಹಕ್ಕು ಪ್ರತಿಪಾದಿಸುವಂತಹ ಗುರುತುರವಾದ ಸವಾಲನ್ನು ಇಂದಿನ ಆಧುನಿಕ ಮಹಿಳೆ ತನ್ನ ಹೆಗಲ ಮೇಲೆ ಹೊರಬೇಕಿದೆ. ಹಾದಿ ದುರ್ಗಮವಾದರೂ ನಡೆಯಲಾಗದಷ್ಟು, ಗುರಿ ತಲುಪಲಾಗದಷ್ಟು ಕಠಿಣವಾದುದಲ್ಲ. ಹೆಜ್ಜೆಗಳು ದೃಢವಾಗಬೇಕು ಅಷ್ಟೇ ಸದೃಢ,ಸಶಕ್ತವಾಗಬೇಕೆಂದರು.

ಸಾನಿಧ್ಯ ವಹಿಸಿದ ಬಸವ ತತ್ವ ಪ್ರಚಾರಕ ಶರಣೆ ಇಂದುಮತಿ ಗಾರಂಪಳ್ಳಿ ಮಾತನಾಡಿ ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ ಎಂಬ ನುಡಿಯಂತೆ ಸಮೃದ್ಧ, ಸ್ವಾಭಿಮಾನಿ, ಸಮಾಜದ ನಿರ್ಮಾಣಕ್ಕೆ ಮಹಿಳೆಯರ ಪಾತ್ರ ದೊಡ್ಡದಾಗಿದೆ. ಸಮಾಜದ ಅಂಕು-ಡೊಂಕು, ಸಮಸ್ಯೆಗಳ ನಿವಾರಣೆಗೆ ಮಹಿಳೆಯರು ಮುಂದಾಗಿ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತಾರೆ, ಸ್ವಂತ ಸಾಮರ್ಥ್ಯದಿಂದ ಸಮಾಜಮುಖಿ ಕೆಲಸ ಮಾಡಲು ಪ್ರೇರಣೆ ನೀಡಿ, ಹಲವಾರು ರೀತಿಯ ಅಪಮಾನ, ಅವಮಾನ ಸಹಿಸಿಕೊಂಡು, ದೇಶದ ಉನ್ನತಿಗಾಗಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಸಮಾಜದಲ್ಲಿ ನೈತಿಕ ಮೌಲ್ಯ ನಿರ್ಮಾಣ, ರಾಷ್ಟ್ರದ ನಿರ್ಮಾಣದಲ್ಲಿ ಮಕ್ಕಳಿಗೆ ಉತ್ತಮ ಆರೋಗ್ಯಕರ, ಉದಾತ್ತವಾದ ಮೌಲ್ಯ ಹೇಳಿಕೊಟ್ಟು ಉತ್ತಮ ಸಮಾಜದ ನಿರ್ಮಾಣಕ್ಕೆ ಮಹಿಳೆಯರು ಮುಂದಾಗಲೆಂದು ವಿನಂತಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಇಲಾಖೆ ಅಧಿಕಾರಿ ಪದ್ಮಾವತಿ ಸಜ್ಜನ ಬೀದರ, ಚಿಟಗುಪ್ಪ ಪುರಸಭೆ ಸದಸ್ಯೆ ಲಕ್ಷ್ಮೀಬಾಯಿ ಗಡಮಿ, ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಭಾರತಿ ಪಾಟೀಲ್ ಮಾಡಗೋಳ, ಭಾರತಿ ಪಾಟೀಲ್ ಕೊಡಂಬಲ, ರೇಖಾ ಬಾಚಾ ಚಿಟಗುಪ್ಪ, ಸುಜಾತಾ ಮುಕಿಂದಪ್ಪನೂರ್ ಇಟಗಾ, ಸಿದ್ದಮ್ಮ ಮಠಪತಿ, ಜ್ಞಾನದೇವಿ ಮೇತ್ರೆ ಸೇರಿದಂತೆ ಮಹಿಳಾ ಪ್ರತಿನಿಧಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಇದೇ ಸಮಯದಲ್ಲಿ ರಾಜ್ಯ ಮಟ್ಟದ ಉತ್ತಮ ಉಪನ್ಯಾಸಕಿ ಪ್ರಶಸ್ತಿ ಪಡೆದ ಶರಣೆ ಮಲ್ಲಮ್ಮ ಆರ್ ಪಾಟೀಲರನ್ನು ತಾಲೂಕು ಶರಣ ಸಾಹಿತ್ಯ ಪರಿಷತ್ತು ಚಿಟಗುಪ್ಪ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು.ಪರಿಷತ್ತಿನ ಅಧ್ಯಕ್ಷ ಸಂಗಮೇಶ ಎನ್ ಜವಾದಿ ಯವರು ಸೇರಿದಂತೆ
ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

5 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

7 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

7 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

7 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

7 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

7 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420